ನವದೆಹಲಿ :ಕೊರೋನಾ ವೈರಸ್ ಇಂದಾಗಿ ದೇಶವನ್ನು ವೈರಸ್ ಇಂದಾಗಿ ರಕ್ಷಣೆಯನ್ನಮಾಡಿಕೊಳ್ಳುವ ಉದ್ದೇಶದಿಂದ ದೇಶವನ್ನು ಈಗಾಗಲೇ 3ಬಾರಿ ಲಾಕ್ ಡೌನ್ ಮಾಡಲಾಗಿದೆ. ಇದರಿಂದ ದೇಶದಲ್ಲಿ ಎಲ್ಲಾ ರೀತಿಯ ಸೇವೆಗಳು, ಸಾರಿಗೆ ವ್ಯವಸ್ಥೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಇದರಿಂದಾಗಿ ದೇಶ ಸಾಕಷ್ಟು ರೀತಿಯಲ್ಲಿ ಆರ್ಥಿಕ ಸಂಕಷ್ಟವನ್ನು ಎದುರಾಗಿದೆ. ಇದರಿಂದ ಹೊರಬರುವ ಉದ್ದೇಶದಿಂದ ಕೆಲವೊಂದು ಭಾಗಗಳಲ್ಲಿ ಲಾಕ್ ಡೌನ್ ಸಡಿಲಿಕೆಯನ್ನು ಮಾಡುವುದರ ಮೂಲಕ ಸಾಕಷ್ಟು ಕಂಪನಿಗಳಿಗೆ, ಕಚೇರಿಗಳಿಗೆ, ಕಾರ್ಖಾನೆಗಳಿಗೆ ಕಾರ್ಯ ನಿರ್ವಹಿಸಲು ಅವಕಾಶವನ್ನು ಮಾಡಿ ಕೊಟ್ಟಿತ್ತು.ಆದರೆ ಈ ಲಾಕ್ ಡೌನ್ ಸಡಿಲಿಕೆ ಮಾಡಿದಾಗಿನಿಂದ ಮತ್ತಷ್ಟು ಕೊರೋನಾ ಸೋಂಕಉ ಹೆಚ್ಚಾಗಿದೆ. ಈ ಎಲ್ಲಾ ಸಮಸ್ಯೆಗಳ ನಡುವೆಯೂ ಕೇಂದ್ರ ಸರ್ಕಾರ ರೈಲ್ವೆ ಪ್ರಯಾಣಿಕರಿಗೆ ಸಿಹಿ ಸುದ್ದಿಯನ್ನು ನೀಡಿದೆ.
ಹೌದು ಕೇಂದ್ರ ಸರ್ಕಾರ ಮೇ 12 ರಿಂದ ವಿಶೇಷ ರೈಲು ಸಂಚಾರಕ್ಕೆ ಕೇಂದ್ರ ಅಸ್ತು ಎಂದಿದೆ. ಹೌದು, ಲಾಕ್ ಡೌನ್ ಸಂಕಷ್ಟದಲ್ಲಿರುವ ಜನರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದ್ದು, ಮೇ 12 ರಿಂದ ದೆಹಲಿಯಿಂದ 15 ಸ್ಥಳಗಳಿಗೆ ರೈಲು ಸಂಚಾರ ಪ್ರಾರಂಭ ಮಾಡಲಿದೆ. ದೆಹಲಿಯಿಂದ ಬೆಂಗಳೂರು, ಮುಂಬೈ, ಅಹಮದಾಬಾದ್, ತಿರುವನಂತಪುರ, ಚೆನ್ನೈ, , ಅಗರ್ತಾಲಾ, ಪಾಟ್ನಾ, ಭುವನೇಶ್ವರ್, ಕೊಚ್ಚಿ, ಸೇರಿದಂತೆ ಹಲವು ಸ್ಥಳಗಳಿಗೆ ರೈಲು ಸೇವೆ ಪ್ರಾರಂಭವಾಗಲಿದೆ. ಪ್ರಯಾಣಿಕರು ಗಮನಿಸಬೇಕಾದ ಮುಖ್ಯವಾದ ವಿಷಯ ಅಂದರೆ ಆನ್ ಲೈನ್ ನಲ್ಲಿ ಮಾತ್ರ ಟಿಕೆಟ್ ಬುಕ್ಕಿಂಗ್ ಗೆ ಅವಕಾಶವಿರುತ್ತದೆ.
ಮೇ 12 ರಿಂದ ದೆಹಲಿಯಿಂದ 15 ವಿಶೇಷ ರೈಲುಗಳು ದೇಶದ ವಿವಿಧ ಭಾಗಗಳಿಗೆ ಸಂಚಾರ ಮಾಡಲಿವೆ ದೆಹಲಿಯಿಂದ 15 ನಗರಗಳಿಗೆ ಮಾತ್ರ ಪ್ಯಾಸೆಂಜರ್ ರೈಲು ದಿನಕ್ಕೆ ಒಂದು ರೈಲು ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ಯೆಸ್, ನಾಳೆ ಸಂಜೆ 4 ಗಂಟೆಯಿಂದ ಟಿಕೆಟ್ ಬುಕ್ಕಿಂಗ್ ಪ್ರಾರಂಭವಾಗಲಿದ್ದು, ಮೇ 12 ರಿಂದ ಕೇಂದ್ರ ಸರ್ಕಾರ ಕೆಲವೇ ಕೆಲವು ರೈಲು ಸಂಚಾರಕ್ಕೆ ಅನುಮತಿ ನೀಡಿದೆ. ಮೇ 12 ರಿಂದ 15 ವಿಶೇಷ ರೈಲು ಗಳ ಸಂಚಾರ ಪ್ರಾರಂಭವಾಗಲಿದೆಅಂತ ತಿಳಿದು ಬಂದಿದೆ. ದೃಡಿಕರಿಸಿದ ಮತ್ತು ಮಾನ್ಯ ಟಿಕೆಟ್‌ಗಳನ್ನು ಹೊಂದಿರುವ ಪ್ರಯಾಣಿಕರಿಗೆ ಮಾತ್ರ ದೆಹಲಿಯ ನಿಲ್ದಾಣಕ್ಕೆ ಪ್ರವೇಶಿಸಲು ಅವಕಾಶವಿರುತ್ತದೆ ಎಂದು ರೈಲ್ವೆ ಇಲಾಖೆ ಹೇಳಿದ್ದು, , ಎಲ್ಲಾ ಪ್ರಯಾಣಿಕರು ಸಹ ಮುಖವಾಡಗಳನ್ನು ಧರಿಸಬೇಕಾಗುತ್ತದೆ, ನಿರ್ಗಮನದ ಸಮಯದಲ್ಲಿ ಸ್ಕ್ರೀನಿಂಗ್ ಅಡಿಯಲ್ಲಿ (COVID-19 ರೋಗಲಕ್ಷಣಗಳಿಲ್ಲದವರಿಗೆ ಮಾತ್ರ ಹತ್ತಲು ಅವಕಾಶವಿರುತ್ತದೆ ಜೊತೆಗೆ ಎಲ್ಲಾ ಸಮಯದಲ್ಲೂ ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳುವಂತೆ ಸೂಚನೆ ನೀಡಿದೆ.
ರೈಲುಗಳಲ್ಲಿ ಮೀಸಲಾತಿಗಾಗಿ ಬುಕ್ಕಿಂಗ್ ಸೋಮವಾರ ಸಂಜೆ 4 ಗಂಟೆಗೆ ಪ್ರಾರಂಭವಾಗಲಿದ್ದು, ಐಆರ್‌ಸಿಟಿಸಿ ವೆಬ್‌ಸೈಟ್‌ನಲ್ಲಿ ಮಾತ್ರ ಲಭ್ಯವಿರುತ್ತದೆ. ರೈಲ್ವೆ ನಿಲ್ದಾಣಗಳಲ್ಲಿನ ಟಿಕೆಟ್ ಬುಕಿಂಗ್ ಕೌಂಟರ್‌ಗಳು ಮಚ್ಚಿದ್ದು ಮತ್ತು ಯಾವುದೇ ಕೌಂಟರ್ ಟಿಕೆಟ್‌ಗಳನ್ನು (ಪ್ಲಾಟ್‌ಫಾರ್ಮ್ ಟಿಕೆಟ್‌ಗಳು ಸೇರಿದಂತೆ) ನೀಡಲಾಗುವುದಿಲ್ಲ ಹೇಳಿದೆ.
click and follow Indiaherald WhatsApp channel