ಇಡೀ ಜಗತ್ತೇ ಕೋವಿಡ್-19 ವಿರುದ್ದ ಹೋರಾಡುತ್ತಿದೆ. ಕೊರೋನಾ ವೈರಸ್ ಇಡೀ ಪ್ರಪಂಚವನ್ನೇ ತಲ್ಲಣಗೊಳಿಸಿದೆ. ಇದೇ ಕಾರಣಕ್ಕೆ ಜಗತ್ತಿನ ಬಹುತೇಕ ರಾಷ್ಟ್ರಗಳು ಲಾಕ್‌ಡೌನ್ ಆದೇಶವನ್ನು ಪಾಲಿಸುತ್ತಿವೆ. ಇನ್ನು ವಿಶ್ವವ್ಯಾಪ್ತಿ ಪಸರಿಸುತ್ತಿರುವ ಈ ಮಾರಕ ವೈರಸ್ ವಿರುದ್ದ ಹೋರಾಡಲು ವಿಶ್ವಸಂಸ್ಥೆ ಕೂಡ ಕೈ ಜೋಡಿಸಿದೆ. ಸದ್ಯ ಕೊರೋನಾ ವಿರುದ್ದ ಹೋರಾಡಲು ಹಲವು ಮಾದರಿಯ ನಿಮಯಗಳನ್ನ ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿದೆ. ಇದಲ್ಲದೆ ಕೊರೋನಾ ವಿರುದ್ದ ಜಾಗೃತಿ ಮೂಡಿಸಲು ಹಲವು ಆಪ್‌ಗಳು ಕೂಡ ಲಭ್ಯವಿದ್ದು, ಇದೀಗ ವಿಶ್ವ ಆರೋಗ್ಯ ಸಂಸ್ಥೆ ಕುಡ ಹೊಸದೊಂದು ಆಪ್ ಲಾಂಚ್ ಮಾಡಲು ಮುಂದಾಗಿದೆ.
ಹೌದು, ಕೊರೋನಾ ವಿರುದ್ದ ಹೋರಾಡಲು ಎಲ್ಲಾ ರಾಷ್ಟ್ರಗಳು ಕರೆ ನಿಡಿದ್ದು, ವಿಶ್ವ ಆರೋಗ್ಯ ಸಂಸ್ಥೆ ಕೂಡ ಕೈ ಜೋಡಿಸಿದೆ. ಇನ್ನು ಈ ವೈರಸ್ ಕುರಿತ ಜನರಿಗೆ ಅಗತ್ಯ ಮಾಹಿತಿ ತಿಳಿಸಲು ಹಲವು ರಾಷ್ಟ್ರಗಳು ಹಲವು ಮಾದರಿಯ ಆಪ್‌ಗಳನ್ನ ಪರಿಚಯಿಸಿವೆ. ಅದರಲ್ಲೂ ಭಾರತದಲ್ಲಿ ಆರೋಗ್ಯ ಸೇತು ಆಪ್ ಸಾಕಷ್ಟು ಪ್ರಸಿದ್ದಿ ಪಡೆದಿದ್ದು, ಸಾಕಷ್ಟು ಉಪಯುಕ್ತ ಕೂಡ ಆಗಿದೆ. ಅದರಂತೆ ಇದೀಗ ವಿಶ್ವ ಆರೋಗ್ಯ ಸಂಸ್ಥೆ ಬಡ ರಾಷ್ಟ್ರಗಳಿಗೆ ಅನುಕೂಲವಾಗುವಂತೆ ಅಲ್ಲಿನ ಜನರು ಕೊರೊನಾವೈರಸ್ ನ ಬಗ್ಗೆ ಜಾಗೃತಿ ಹೊಂದುವುದಕ್ಕಾಗಿ ಹೊಸ ಆಪ್ ಪರಿಚಯಿಸಲು ಮುಂದಾಗಿದೆ. ಇದು ಬ್ಲೂಟೂತ್ ಆಧಾರಿತ ಸಂಪರ್ಕ ಪತ್ತೆಹಚ್ಚುವ ಫೀಚರ್ಸ್ನ್ನು ಅನ್ನು ಹೊಂದಿರಲಿದೆ ಎಂದು ಹೇಳಲಿದೆ ಎನ್ನಲಾಗ್ತಿದೆ.
ಇನ್ನು ಈ ಅಪ್ಲಿಕೇಶನ್ ಮೂಲಕ ಜನರು ತಮ್ಮ ರೋಗಲಕ್ಷಣಗಳ ಬಗ್ಗೆ ತಿಳಿಯಬಹುದಾಗಿದೆ. ಅಲ್ಲದೆ ಕೊರೊನಾವೈರಸ್‌ನಿಂದ ಉಂಟಾಗುವ ಗುಣಲಕ್ಷಣಗಳು ಕಾಣಿಸಿಕೊಂಡಿರಬಹುದೇ ಎಂಬ ಬಗ್ಗೆ ಮಾರ್ಗದರ್ಶನ ನೀಡುತ್ತದೆ ಎಂದು WHO ಮುಖ್ಯ ಮಾಹಿತಿ ಅಧಿಕಾರಿ ಬರ್ನಾರ್ಡೊ ಮರಿಯಾನೊ ತಿಳಿಸಿದ್ದಾರೆ. ಸದ್ಯ WHO ಜಾಗತಿಕವಾಗಿ ಆಪ್ ಸ್ಟೋರ್‌ಗಳಲ್ಲಿ ಒಂದು ಆವೃತ್ತಿಯನ್ನು ಬಿಡುಗಡೆ ಮಾಡುತ್ತಿದ್ದರೂ, ಯಾವುದೇ ಸರ್ಕಾರವು ಅಪ್ಲಿಕೇಶನ್‌ನ ಆಧಾರವಾಗಿರುವ ತಂತ್ರಜ್ಞಾನವನ್ನು ತೆಗೆದುಕೊಳ್ಳಲು, ಫೀಚರ್ಸ್‌ಗಳನ್ನು ಸೇರಿಸಲು ಮತ್ತು ಅಪ್ಲಿಕೇಶನ್ ಸ್ಟೋರ್‌ಗಳಲ್ಲಿ ತನ್ನದೇ ಆದ ಆವೃತ್ತಿಯನ್ನು ಬಿಡುಗಡೆ ಮಾಡಬಹುದಾಗಿದೆ ಎಂದು ವಿಶ್ವಸಂಸ್ತೆ ಹೇಳಿದೆ.
ಅಲ್ಲದೆ ಈಗಾಗಲೇ ಭಾರತ, ಆಸ್ಟ್ರೇಲಿಯಾ ಮತ್ತು ಯುನೈಟೆಡ್ ಕಿಂಗ್‌ಡಮ್ ಈಗಾಗಲೇ ತಮ್ಮದೇ ಆದ ತಂತ್ರಜ್ಞಾನವನ್ನು ಬಳಸಿಕೊಂಡು ಅಧಿಕೃತ ವೈರಸ್ ಅಪ್ಲಿಕೇಶನ್‌ಗಳನ್ನು ಬಿಡುಗಡೆ ಮಾಡಿವೆ, ಸಾಮಾನ್ಯ ಲಕ್ಷಣಗಳೊಂದಿಗೆ ಜನರು ತಮ್ಮ ರೋಗಲಕ್ಷಣಗಳ ಆಧಾರದ ಮೇಲೆ ಕೊರೋನಾ ವೈರಸ್ ಪರೀಕ್ಷೆ ಮಾಡಿಸಬೇಕೇ ಇಲ್ಲವೇ ಎಂದು ತಿಳಿಸಕೊಡಲಿವೆ. ಜೊತೆಗೆ ಕೊರೋನಾ ವೈರಸ್ ಸೊಂಕಿತರ ಸಂಪರ್ಕ ಪತ್ತೆಹಚ್ಚುವಿಕೆಯನ್ನು ಸಕ್ರಿಯಗೊಳಿಸುವ ವಿನ್ಯಾಸವನ್ನ ಈ ಆಪ್‌ಗಳು ಹೊಂದಿವೆ.
ಸದ್ಯ ಇದೀಗ ವಿಶ್ವ ಆರೋಗ್ಯ ಸಂಸ್ಥೆ ಕೊರೋನಾ ವೈರಸ್ ಕೇಸ್ ಸಂಖ್ಯೆಗಳು ಹೆಚ್ಚುತ್ತಿರುವ ದಕ್ಷಿಣ ಅಮೆರಿಕಾ ಮತ್ತು ಆಫ್ರಿಕಾ ಸೇರಿದಂತೆ ಇತರ ದೇಶಗಳಲ್ಲಿ ತನ್ನ ಅಪ್ಲಿಕೇಶನ್ ಅನ್ನು ಪರಿಣಾಮಕಾರಿಯಾಗಿ ಬಳಸಲು ಸಾಧ್ಯವಾಗಲಿದೆ ಎಂದು WHO ನಿರೀಕ್ಷೆಯನ್ನ ಹೊಂದಿದೆ. ಜೊತೆಗೆ ಈ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸಲು ಅವರಿಗೆ ಟೆಕ್ನಾಲಜಿ ಮತ್ತು ಎಂಜಿನಿಯರ್‌ಗಳ ಕೊರತೆ ಇರಬಹುದು ಅಥವಾ ಪರೀಕ್ಷೆ ಮಾಡಲು ಅವರು ಹೆಣಗಾಡುತ್ತಿರಬಹುದು. ಇದರಿಂದಾಗಿ ನಾವೇ ಒಂದು ಆಪ್ಲಿಕೇಶನ್ ಅನ್ನು ಬಿಡುಗಡೆ ಮಾಡಬೇಕಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿಕೊಂಡಿದೆ.
ಇನ್ನು ಈ ಹಿಂದೆ ಆಲ್ಫಾಬೆಟ್ ಇಂಕ್‌ನ ಗೂಗಲ್ ಮತ್ತು ಮೈಕ್ರೋಸಾಫ್ಟ್ ಕಾರ್ಪ್‌ನಲ್ಲಿ ಕೆಲಸ ಮಾಡಿದ ಕೆಲವು ಎಂಜಿನಿಯರ್‌ಗಳು ಮತ್ತು ವಿನ್ಯಾಸಕರು ಈ ಹೊಸ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸುತ್ತಿದ್ದು, ಸೀಮಿತ ಇಂಟರ್ನೆಟ್ ಪ್ರವೇಶವನ್ನು ಹೊಂದಿರುವ ಜನರನ್ನು ತಲುಪಲು, ಪಠ್ಯ ಸಂದೇಶಗಳ ಮೂಲಕ ಮಾಹಿತಿಯನ್ನು ತಲುಪಿಸಲು WHO ಕಾರ್ಯನಿರ್ವಹಿಸುತ್ತಿದೆ. ಅಲ್ಲದೆ ಡೇಟಾ ಶುಲ್ಕ ವಿಧಿಸದೆ ಬಳಕೆದಾರರು ಕೆಲವು ಮಾಹಿತಿಯನ್ನು ಲಭ್ಯವಾಗುವಂತೆ ಮಾಡಲು ಬೇಸಿಕ್ಸ್ ಪ್ರೋಗ್ರಾಂನೊಂದಿಗೆ ಪಾಲುದಾರಿಕೆ ಹೊಂದಿದೆ.ಸದ್ಯ ಜಾಗತಿಕವಾಗಿ ಆರೋಗ್ಯ ಕಾರ್ಯಕರ್ತರಿಗೆ ಮಾಃಇ ನೀಡಲು ಮುಂದಿನ ವಾರ ಆಪ್ ಬಿಡುಗಡೆ ಮಾಡಲು WHO ಯೋಜಿಸಿದೆ.
click and follow Indiaherald WhatsApp channel