ಇಡೀ ವೀಶ್ವದಲ್ಲಿ ಕೊರೋನಾ ರಣ ಕೇಕೆಯನ್ನು ಮಾಡುತ್ತಿದೆ. ಕೊರೋನಾ ವೈರಸ್ ಇಡೀ ವಿಶ್ವದಾಧ್ಯಂತ ಲಕ್ಷಾಂತರ ಮಂದಿ ಸಾವನ್ನಪ್ಪಿದ್ದು ಅದೆಷ್ಟೋ ಅಭಿವೃದ್ಧಿಶೀಲ ರಾಷ್ಟ್ರಗಳು ಆರ್ಥಿಕವಾಗಿ ನೆಲಕಚ್ಚಿವೆ, ಇದರಿಂದಾಗಿ ಅದೆಷ್ಟೋ ಜನ ಬದುಕು ಡೋಲಾಯ ಮಾನವಾಗಿದೆ. ಇದಕ್ಕೆಲ್ಲಾ ಕಾರಣ ಚೀನಾ ಎಂದು ಅಮೇರಿಕಾ ಹೇಳುತ್ತಲೇ ಬಂದಿದೆ. ಆದರೆ ಈಗ ಚೀನಾದ ಮತ್ತೊಂದು ಕರ್ಮಕಾಂಡವನ್ನು ವಿಶ್ವ ಆರೋಗ್ಯ ಸಂಸ್ಥೆ ಬಯಲು ಮಾಡಿದೆ. ಅಷ್ಟಕ್ಕೂ ಆ ಕರ್ಮ ಕಾಂಡ ಯಾವುದು ಗೊತ್ತಾ..?

 

ವಿಶ್ವವ್ಯಾಪಿ 1.11 ಕೋಟಿಗೂ ಅಧಿಕ ಸೋಂಕು ಮತ್ತು 5.25 ಲಕ್ಷ ಸಾವಿಗೆ ಕಾರಣವಾದ ಕೊರೊನಾ ವೈರಸ್ ಕೇಂದ್ರ ಬಿಂದು ಚೀನಾದ ಮತ್ತೊಂದು ಕರ್ಮಕಾಂಡ ಬಯಲಾಗಿದೆ ಕೋವಿಡ್-19 ವೈರಸ್ ಚೀನಾದ ವುಹಾನ್ ನಗರದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಾಗ ಈ ಆತಂಕಕಾರಿ ಸಂಗತಿಯನ್ನು ಕಮ್ಯೂನಿಸ್ಟ್ ದೇಶ ಬಹಿರಂಗೊಳಿಸಲಿಲ್ಲ. ಇದನ್ನು ಮೊದಲು ಬೆಳಕಿಗೆ ತಂದಿದ್ದು, ಚೀನಾದಲ್ಲಿರುವ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‍ಒ) ಶಾಖಾ ಕಚೇರಿ. ಈ ವಿಷಯವನ್ನು ಸ್ವಿಟ್ಜರ್‍ಲೆಂಡ್‍ನ ಜಿನಿವಾ ನಗರದಲ್ಲಿರುವ ಡಬ್ಲ್ಯುಎಚ್‍ಒ ಕೇಂದ್ರ ಕಚೇರಿಯೇ ಬಹಿರಂಗಗೊಳಿಸಿದೆ. ಕೋವಿಡ್-19 ವೈರಸ್ ವಿಚಾರದಲ್ಲಿ ಮೊದಲಿನಿಂದಲೂ ತಪ್ಪು ಮಾಹಿತಿ ನೀಡಿ ವಾಸ್ತವ ಸಂಗತಿಯನ್ನು ಗೋಪ್ಯವಾಗಿಟ್ಟು ವಿಶ್ವದ ದಿಕ್ಕು ತಪ್ಪಿಸಿದ ಚೀನಾ, ವುಹಾನ್‍ನಲ್ಲಿ ವೈರಾಣು ಸ್ಫೋಟಗೊಂಡರೂ ಆ ಬಗ್ಗೆ ಮಾಹಿತಿ ನೀಡದೇ ಮುಚ್ಚಿಟ್ಟುತ್ತು.

 

ಆದರೆ ಡಬ್ಲ್ಯುಎಚ್‍ಒ ಮೊದಲ ಬಾರಿಗೆ ಈ ಡೆಡ್ಲಿ ಸಾಂಕ್ರಾಮಿಕ ರೋಗದ ಬಗ್ಗೆ ಎಚ್ಚರಿಕೆ ನೀಡಿತ್ತು. ಡಿ.31ರಂದು ಹುಬೇ ಪ್ರಾಂತ್ಯದ ವುಹಾನ್ ಆರೋಗ್ಯ ಆರೋಗವು ನ್ಯೂಮೋನಿಯಾ ಮಾದರಿಯ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿತ್ತು. ಆದರೆ ಈ ಸುದ್ದಿಯ ಮೊದಲ ಮೂಲ ಬಹಿರಂಗಗೊಳಿಸಿದ್ದು ಯಾರು ಎಂಬ ಸಂಗತಿಯನ್ನು ಗೋಪ್ಯವಾಗಿಟ್ಟು.

 

ವಾಸ್ತವವಾಗಿ ಸಾರ್ಸ್ ಮಾದರಿಯ ಸಾಂಕ್ರಾಮಿಕ ರೋಗ ಲಕ್ಷಣ ಇರುವ ಕೊರೊನಾ ವೈರಸ್ ಸೋಂಕು ಉಲ್ಗಣಗೊಳ್ಳುವ ಸಾಧ್ಯತೆ ಬಗ್ಗೆ ಮೊದಲು ಎಚ್ಚರಿಕೆ ನೀಡಿದ್ದ ತಾನೇ ಎಂದು ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟಪಡಿಸಿದೆ.

 

ಚೀನಾ ಈ ರೋಗದ ಗಂಡಾಂತರದ ಬಗ್ಗೆ ಸ್ಪಷ್ಟ ಸುಳಿವು ದೊರೆತ್ತಿದ್ದರೂ ದಿವ್ಯ ನಿರ್ಲಕ್ಷ್ಯ ವಹಿಸಿ ವಿಶ್ವವ್ಯಾಪಿ ಬಾರಿ ಸಾವು-ನೋವು ಸಂಭವಿಸುವುದಕ್ಕೆ ಕಾರಣ ಎಂಬ ಆರೋಪಗಳಿಗೆ ವಿಶ್ವಸಂಸ್ಥೆಯ ಈ ಹೇಳಿಕೆ ಪುಷ್ಟಿ ನೀಡುತ್ತಿದೆ.

 

మరింత సమాచారం తెలుసుకోండి: