ಕೊರೋನಾ ವೈರಸ್‍ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಮಿಂದಿನದಿನಗಳಲ್ಲಿ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಹಾಗೂ ಎರಡು ತಿಂಗಾಳು ಕಳೆದ ನಂತರ ಕಡಿಮೆಯಾಗುವ ಸಾಧ್ಯೆತೆಯೂ ಇದೆ ಎಂದು ಹೇಳಲಾಗುತ್ತಿದೆ.

 

ಹೌದು ಮುಂದಿನ ಎರಡು ತಿಂಗಳ ಕಾಲ ಕೊರೊನಾ ಸೋಂಕು ತೀವ್ರವಾಗಿ ಬಾಧಿಸಲಿದ್ದು, ಸೆಪ್ಟೆಂಬರ್ ಅಂತ್ಯದ ವೇಳೆಗೆ ಕೊರೊನಾ ಕಡಿಮೆಯಾಗುವ ಸಾಧ್ಯತೆ ಇದೆ. ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಜನ ಸಾಕಷ್ಟು ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ. ಈಗಾಗಲೇ ಪ್ರತಿದಿನ 5 ಸಾವಿರದಷ್ಟು ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿವೆ.

 

ರಾಜ್ಯದಲ್ಲಿ ಒಂದು ಲಕ್ಷ ಸೋಂಕಿನ ಪ್ರಕರಣಗಳು ದೃಢಪಟ್ಟಿದ್ದು, ಮುಂದಿನ ಎರಡು ತಿಂಗಳಲ್ಲಿ 7 ರಿಂದ 8 ಲಕ್ಷ ದಾಟುವ ನಿರೀಕ್ಷೆ ಇದೆ. ಹಂತಕ್ಕೆ ಹೋಗಿ ನಂತರ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

 

ಕಳೆದ 128 ದಿನಗಳಲ್ಲಿ 50 ಸಾವಿರ ಪ್ರಕರಣಗಳು ಪತ್ತೆಯಾದರೆ, ಕೇವಲ 11 ದಿನಗಳಲ್ಲಿ 50 ಸಾವಿರ ಪ್ರಕರಣಗಳು ಪತ್ತೆಯಾಗಿವೆಇದಕ್ಕೆ ಹಲವಾರು ಕಾರಣಗಳಿರಬಹುದು.

ರೋಗ ವ್ಯಾಪಿಸುತ್ತಿರುವುದು, ಟೆಸ್ಟ್ ಮಾಡಿಸುತ್ತಿರುವವರ ಪ್ರಮಾಣ ಹೆಚ್ಚಾಗಿರುವುದು ಮತ್ತಿತರ ಕಾರಣಗಳಿರಬಹುದು. ಏನೇ ಇದ್ದರೂ ಇದು ತೀವ್ರ ಪ್ರಮಾಣಕ್ಕೆ ಹೋಗಿ ನಂತರ ಕಡಿಮೆ ಆಗಲಿದೆ ಎಂದು ತಜ್ಞರು ತಿಳಿಸಿದ್ದಾರೆ.

 

ಪಾಶ್ಚಿಮಾತ್ಯ ದೇಶಗಳಲ್ಲೂ ಕೂಡ ಇದೇ ರೀತಿ ಆಗಿದೆ. ದೆಹಲಿ, ಮುಂಬೈನಲ್ಲೂ ಕೂಡ ಏಪ್ರಿಲ್, ಮೇನಲ್ಲಿ ಕೊರೊನಾ ತೀವ್ರ ಪ್ರಮಾಣದಲ್ಲಿ ಕಂಡುಬಂದು ಈಗ ಕಡಿಮೆಯಾಗಿದೆ. ದೆಹಲಿಯಲ್ಲಿ ಪ್ರತಿದಿನ 2 ರಿಂದ 3 ಸಾವಿರ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿದ್ದವು. ಈಗ ಅದರ ಪ್ರಮಾಣ 500 ರಿಂದ 600ಕ್ಕೆ ಇಳಿಕೆಯಾಗಿದೆ. ಅದೇ ರೀತಿ ಮುಂಬೈನಲ್ಲೂ ಕೊರೊನಾ ಪಾಸಿಟಿವ್ ಪ್ರಕರಣಗಳು ಇಳಿಕೆಯಾಗುತ್ತಿವೆ.

ನಮ್ಮ ರಾಜ್ಯದಲ್ಲೂ ಈಗ ಕೊರೊನಾದ ತೀವ್ರತೆ ಹೆಚ್ಚಾಗುತ್ತಿದ್ದು, ಮುಂದಿನ ಎರಡು ತಿಂಗಳಲ್ಲಿ ಮತ್ತಷ್ಟು ಹೆಚ್ಚಾಗಿ ನಂತರ ಕಡಿಮೆಯಾಗಲಿದೆ ಎಂದು ತಜ್ಞರು ತಿಳಿಸಿದ್ದಾರೆ. ಪ್ರಮಾಣಕ್ಕೆ ಹೋಲಿಸಿದರೆ ಆಗಸ್ಟ್ ಮತ್ತು ಸೆಪ್ಟೆಂಬರ್ನಲ್ಲಿ ನಮ್ಮ ರಾಜ್ಯದಿಂದ 8 ಲಕ್ಷದಷ್ಟು ಸೋಂಕಿತರ ಪ್ರಮಾಣ ಕಂಡುಬರಲಿದೆ. ಸರ್ಕಾರವು ಕೂಡ ನಿಟ್ಟಿನಲ್ಲಿ ಒದಗಿಸಬೇಕಾದ ಚಿಕಿತ್ಸಾ ಸೌಲಭ್ಯಗಳ ಬಗ್ಗೆ ಸಿದ್ಧತೆ ಮಾಡಿಕೊಳ್ಳತೊಡಗಿದೆ.

 

ಪ್ರತಿ ವಿಧಾನಸಭಾ ಕ್ಷೇತ್ರವಾರು ಕೋವಿಡ್ ಕೇರ್ ಸೆಂಟರ್ಗಳನ್ನು ತೆರೆಯಲು ಉದ್ದೇಶಿಸಿದೆ. ಸೋಂಕು ಮತ್ತು ಸಾವಿನ ಪ್ರಮಾಣವನ್ನು ಕಡಿಮೆ ಮಾಡಲು ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅನುಷ್ಠಾನ ಮಾಡುತ್ತಿದೆ.

 

ಸಾರ್ವಜನಿಕರು ನಿಟ್ಟಿನಲ್ಲಿ ಸ್ವಯಂ ಜಾಗೃತಿ ವಹಿಸಬೇಕಾದ ಅಗತ್ಯ ಮತ್ತು ಅನಿವಾರ್ಯತೆ ಇದೆ. ಮುಂದಿನ ಎರಡು ತಿಂಗಳ ಕಾಲ ಅತ್ಯಂತ ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ ಕೊರೊನಾಗೆ ತುತ್ತಾಗಬೇಕಾಗುತ್ತದ

 

 

మరింత సమాచారం తెలుసుకోండి: