ಪರದೆ ಮೇಲೆ ಅಖಾಡದಲ್ಲಿ ಇಳಿದು ಎದುರಾಳಿಯೊಂದಿಗೆ ಕುಸ್ತಿ ಮಾಡುವುದು ‘ಪೈಲ್ವಾನ್’ ಸಿನಿಮಾದ ಒಂದು ಭಾಗವಾಗಿದ್ದರೇ ನಿಜ ಜೀವನದಲ್ಲೂ ನಟ ಸುದೀಪ್ ಗೆ ವೈರಿಗಳು ಹೆಚ್ಚಾಗಿದ್ದಾರೆ! ಅದ್ಯಾರು ಅಂತೀರ? ಇಲ್ಲಿದೆ ನೋಡಿ ಅದರ ಕಂಪ್ಲೀಟ್ ಡೀಟೇಲ್ಸ್... 


‘ಪೈಲ್ವಾನ್’ ಸಿನಿಮಾದ ಕುರಿತು ಕಿಡಿಗೇಡಿಗಳು ಉದ್ದೇಶ ಪೂರ್ವಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿರುವುದು ಹೆಚ್ಚಾಗಿದೆ. ಈ ಘಟನೆ ಕಿಚ್ಚನ ಗಮನಕ್ಕೂ ಬಂದ್ದಿದ್ದು, ತಮ್ಮ ಟ್ವಿಟರ್‍ನಲ್ಲಿ ತಿರುಗೇಟು ನೀಡಿದ್ದಾರೆ. 


ಸಿನಿಮಾ ವಿರುದ್ಧ ಕಾಲಿ ಚಿತ್ರಮಂದಿರದ ವೀಡಿಯೋ, ಸಿನಿಮಾ ನೋಡದೆ ಸಿನಿಮಾ ಬಗ್ಗೆ ನೆಗೆಟೀವ್ ಕಾಮೆಂಟ್ ಮಾಡುವುದು ಇದೆಲ್ಲಾ ಕುತಂತ್ರಗಳಿಗೂ ಕಿಚ್ಚ ಪ್ರತಿಕ್ರೀಯಿಸಿದ್ದಾರೆ. “ಯಾರು ಸಿನಿಮಾದ ಬಗ್ಗೆ ಕೆಟ್ಟ ಸುದ್ದಿಗಳನ್ನು ಹಬ್ಬಿಸುತ್ತಾರೋ, ಅವರಿಂದ ನಾನು ಖುಷಿಯಾಗಿದ್ದೇನೆ” ಎಂದು ಕಿಡಿಗೇಡಿಗಳಿಗೆ ನಟ ತಿರುಗೇಟು ನೀಡಿದ್ದಾರೆ.
 
“ಒಳ್ಳೆಯ ಕೆಲಸ ಮಾಡುವಾಗಲೇ ಕೆಟ್ಟದನ್ನು ಹಬ್ಬಿಸುವುದು ಈಗಲೂ ‘ಪೈಲ್ವಾನ್’ ಬಗ್ಗೆ ಮಾತನಾಡಲು ಸಮಯ ಮತ್ತು ಶ್ರಮವನ್ನು ಹಾಕುತ್ತಿದ್ದಾರೆ. ನಾನು ಅದನ್ನ ಗಮನಿಸುತ್ತಿದ್ದೇನೆ. ಯಾವಾಗ ಎಲ್ಲರೂ ನಮ್ಮ ಬಗ್ಗೆ ಕೆಟ್ಟದನ್ನು ಹಬ್ಬಿಸಲು ಸಾಧ್ಯ? ನಾವು ಒಳ್ಳೆಯದನ್ನು ಮಾಡುತ್ತಿರುವಾಗ ಅಲ್ಲವೇ. ಅದಕ್ಕೆ ಈ ಕ್ಷಣವನ್ನು ಆನಂದಿಸಬೇಕು” ಎಂದು ಕಿಚ್ಚ ಟ್ವೀಟ್ ಮಾಡಿದ್ದಾರೆ.


ಅಪಪ್ರಚಾರದ ಬೆನ್ನಲ್ಲೇ ‘ಪೈಲ್ವಾನ್’ ಚಿತ್ರ ಪೈರಸಿ ಸುದ್ದಿ ಹರಿದಾಡುತ್ತಿದೆ. ಸಿನಿಮಾ ಈಗಾಗಲೇ ಮೂರು ಭಾಷೆಗಳಲ್ಲಿ ಬಿಡುಗಡೆಯಾಗಿದ್ದು ವೆಬ್ ಸೈಟ್ ನಲ್ಲಿ ‘ಪೈಲ್ವಾನ್’ ಕನ್ನಡ, ತೆಲುಗು, ತಮಿಳು ವರ್ಷನ್ ನ ಇಡೀ ಚಿತ್ರ ಲೀಕ್ ಆಗಿದ್ದು ಜನ ಚಿತ್ರಮಂದಿರಕ್ಕೆ ಬಂದು ನೋಡುವುದು ಕಡಿಮೆಯಾಗಿದೆ.


ಇಷ್ಟೇ ಅಲ್ಲದೇ ನಾವು ಈ ಸಿನಿಮಾದ ಬಗ್ಗೆ ಮಾತನಾಡುವುದಾದರೆ, ಸಿನಿಮಾ ಕನ್ನಡಕ್ಕೆ ಒಂದು ಅದ್ಭುತ ಹಾಗೂ ಅಪರೂಪದ ಸಿನಿಮಾ ಎಂದೇ ಹೇಳಬಹುದು. ಕನ್ನಡದಲ್ಲಿ ಇಂತಹ ಒಂದು ಸಿನಿಮಾವನ್ನು ಮಾಡಿದ್ದು ನಿಜಕ್ಕೂ ಕನ್ನಡ ಪ್ರೇಕ್ಷಕರ ಹೆಮ್ಮೆ. ಅದರಲ್ಲು ಸುದೀಪ್ ಜೊತೆಗೆ ಸುನೀಲ್ ಶೆಟ್ಟಿ ಅದ್ಭುತವಾಗಿ ಅಭಿನಯ ಮಾಡಿದ್ದಾರೆ. ಹೀಗಾಗಿ ಚಿತ್ರವು ಒಟ್ಟಾರೆಯಾಗಿ ಉತ್ತಮವಾಗಿ ಮೂಡಿ ಬಂದಿದೆ ಎನ್ನುವುದು ಪ್ರೇಕ್ಷಕರ ಅಭಿಪ್ರಾಯ.



మరింత సమాచారం తెలుసుకోండి: