ಉಪೇಂದ್ರ ಅಂದ್ರೇನೆ ಹಾಗೆ. ಅವರ ಚಿತ್ರಗಳಿಗೆ ಅಭಿಮಾನಿಗಳು ಕಾದು ಕುಳಿತಿರುತ್ತಾರೆ. ಸುಮಾರು ಒಂದೂವರೆ ವರ್ಷದ ನಂತರ ಉಪೇಂದ್ರ ಮತ್ತೆ ತೆರೆ ಮೇಲೆ ಮಿಂಚಲು ಬರುತ್ತಿದ್ದಾರೆ. ಹೌದು, ಈಗ ಉಪೇಂದ್ರ ಅವರ ಸಿನಿಮಾ ‘ಐ ಲವ್ ಯೂ’ ಬಿಡುಗಡೆಯ ದಿನಾಂಕ ಅನೌನ್ಸ್ ಆಗಿದೆ. ಇದರಿಂದ ಉಪ್ಪಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ಜೂನ್ 14 ರಂದು ಈ ಚಿತ್ರ ತೆರೆ ಕಾಣುತ್ತಿದೆ. ತೆಲುಗು ಹಾಗೂ ಕನ್ನಡದಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದ್ದು, ಸುಮಾರು 1000ಕ್ಕೂ ಹೆಚ್ಚು ಪರದೆಗಳಲ್ಲಿ ಉಪೇಂದ್ರ ಅವರ ಚಿತ್ರ ಪ್ರದರ್ಶನವಾಗಲಿದೆ. ಚಿತ್ರದ ನಿರ್ಮಾಣ ಮತ್ತು ನಿರ್ದೇಶನ ಆರ್ ಚಂದ್ರು ಅವರದ್ದು.

ಆಂಧ್ರ ಪ್ರದೇಶ, ತೆಲಂಗಾಣ, ಕರ್ನಾಟಕ ಸೇರಿದಂತೆ ಹಲವೆಡೆ ಈ ಚಿತ್ರ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗುತ್ತಿದೆ. ಉಪೇಂದ್ರ ಈಗಾಗಲೇ ತೆಲುಗು ಚಿತ್ರಗಳಲ್ಲಿ ನಟಿಸಿದ್ದು, ಆಂದ್ರ ಮತ್ತು ತೆಲಂಗಾಣದಲ್ಲೂ ಅವರಿಗೆ ದೊಡ್ಡ ಅಭಿಮಾನಿ ಬಳಗವಿದೆ.
ಹೀಗೆ ಉಪೇಂದ್ರ ಅವರ ‘ಐ ಲವ್ ಯು’ ಸಿನೆಮಾ ಬಿಡುಗಡೆಗೆ ಸಜ್ಜಾಗಿದೆ. ನಿರ್ದೇಶಕ ಆರ್.ಚಂದ್ರು ಹೇಳುವಂತೆ, ಈ ಚಿತ್ರದ ಕಥೆ ಎಲ್ಲಾ ಕಡೆಗೂ ಸಲ್ಲುವ ಕಥೆಯಂತೆ. ಯುನಿವರ್ಸಲ್ ಸಬ್ಜೆಕ್ಟ್ ಆದ ಕಾರಣ ಎಲ್ಲಾ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುತ್ತದೆ ಎಂಬ ವಿಶ್ವಾಸ ಅವರಿಗಿದೆ. ಅಂದಹಾಗೆ, ಈ ಚಿತ್ರದಲ್ಲಿ ರಚಿತಾ ರಾಮ್ ಹಾಗೂ ಸೋನು ಗೌಡ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಚಿತ್ರ ಸಿನಿ ರಸಿಕರನ್ನು ಸೆಳೆಯುವತ್ತ ಯಶಸ್ವಿಯಾಗಬಹುದು ಅನ್ನೋದು ಸಿನಿ ಪಂಡಿತರ ಲೆಕ್ಕಾಚಾರವಾಗಿದೆ.
click and follow Indiaherald WhatsApp channel