ಸ್ಯಾಂಡಲ್ ವುಡ್ ನ ಬಹುದೊಡ್ಡ ಬಜೆಟ್ ಸಿನಿಮಾ ಅಂದರೆ ಅದು ಕುರುಕ್ಷೇತ್ರ. ಈ ಚಿತ್ರದಲ್ಲಿ ಘಟಾನುಘಟಿಗಳೇ ಅಭಿನಯಿಸಿದ್ದಾರೆ. ಅದರಲ್ಲೂ ಚಾಲೆಂಜಿಂಗ್ ಸ್ಟಾರ್ ದರ್ಶನ್, ರೆಬೆಲ್ ಸ್ಟಾರ್ ಅಂಬರೀಶ್, ಅರ್ಜುನ್ ಸರ್ಜಾ, ನಿಖಿಲ್ ಕುಮಾರ್, ಸೋನು ಸೂದ್, ಮೇಘನಾ ರಾಜ್ ಹೀಗೆ ದೊಡ್ಡ ಚಿತ್ರ ನಟನಟಿಯರ ದಂಡೇ ಇದೆ. 


ಇವತ್ತು ಈ ಚಿತ್ರದ ಆಡಿಯೋ ಬಿಡುಗಡೆ ಆಗುತ್ತಿದೆ. ಆದರೆ ಅದಕ್ಕೂ ಮೊದಲೇ, ಅಧಿಕೃತವಾಗಿ ಧ್ವನಿ ಸುರಳಿ ರಿಲೀಸ್ ಆಗುವುದಕ್ಕೂ ಮುಂಚೆಯೇ ಯೂಟ್ಯೂಬ್ ನಲ್ಲಿ ಚಿತ್ರದ ಮೊದಲ ಹಾಡು ಬಿಡುಗಡೆ ಆಗಿದೆ. ಹೌದು, ಸಾಹೋರೇ ಸಾಹೋ ಎನ್ನುವ ಹಾಡು ರಿಲೀಸ್ ಆಗಿದ್ದು, ಸದ್ಯ ಯೂಟ್ಯೂಬ್ ನಲ್ಲಿ ಹವಾ ಎಬ್ಬಿಸಿದೆ.


ಅಷ್ಟಕ್ಕೂ ಈ ಹಾಡನ್ನು ಬರೆದವರು ಡಾ ವಿ.ನಾಗೇಂದ್ರ ಪ್ರಸಾದ್. ಇನ್ನು ವಿಜಯ ಪ್ರಕಾಶ್ ಈ ಹಾಡು ಹಾಡಿದ್ದಾರೆ. ಅಷ್ಟೇ ಅಲ್ಲದೇ ಹರಿಕೃಷ್ಣ ಅವರ ಸಂಗೀತ ಈ ಹಾಡಿಗೆ ಮತ್ತಷ್ಟು ಶಕ್ತಿ ತುಂಬಿದೆ. ಈ ಹಾಡಂತೂ ಅಗತ್ಯವಾದಂತೆ ಮೂಡಿ ಬಂದಿದೆ ಎನ್ನಲಾಗುತ್ತಿದೆ.



మరింత సమాచారం తెలుసుకోండి: