ಅನಿತಾ ಭಟ್ ಹೆಸರು ಕನ್ನಡ ಸಿನಿ ಪ್ರೇಕ್ಷಕರಿಗೆ ಅಷ್ಟೇನೂ ಪರಿಚಿತವೇನಲ್ಲ. ಆದರೆ ಈ ನಟಿ ಇದೀಗ ಐದು ಚಿತ್ರಗಳಲ್ಲಿ ಬ್ಯುಸಿ ಆಗಿದ್ದಾರೆ‌. ಹೌದು ಅನಿತಾ ಭಟ್ ಇದೀಗ ಐದು ಸಿನಿಮಾಗಳಲ್ಲಿ ಬ್ಯುಸಿ. ಇದರಲ್ಲಿ ಎರಡು ಚಿತ್ರಗಳಲ್ಲಿ ನೆಗೆಟಿವ್ ಶೇಡ್ ಪಾತ್ರಗಳಲ್ಲಿ ಅಭಿಬಯಿಸುತ್ತಿದ್ದಾರೆ.

 

 

ಯೋಗ ಕೇಂದ್ರ ಆರಂಭಿಸಿ, ಜನರಿಗೆ ಯೋಗ ಹೇಳಿಕೊಡುತ್ತಿರುವ ನಟಿ ಅನಿತಾ ಭಟ್. ಈಕೆ ಇದೀಗ ಐದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಐದು ಸಿನಿಮಾಗಳಲ್ಲಿಯೂ ಅನಿತಾ ಭಟ್ ಪಾತ್ರ ವಿಭಿನ್ನವಾಗಿ ಇವೆಯಂತೆ.

 

 

ರವಿಶಂಕರ್ ಅವರು ನಾಯಕ ನಾಟನಾಗಿ ಅಭಿನಯಿಸುತ್ತಿರುವ ಸದ್ಗುಣ ಸಂಪನ್ನ ಅನ್ನುವ ಸಿನಿಮಾದಲ್ಲಿ ಕಾಟನ್ ಸ್ಮಿತಾ ಎಂಬ ಪಾತ್ರದಲ್ಲಿ ಅನಿತಾ ಭಟ್ ಕಾಣಿಸಿಕೊಳ್ಳುತ್ತಿದ್ದಾರೆ.

 

 

ಇನ್ನು ಬಹುಭಾಷಾ ನಟ ಶಫಿ ಜೊತೆ, ಬೆಂಗಳೂರು 69, ಪ್ರಭುತ್ವ ಸಿನಿಮಾಗಳಲ್ಲಿಯೂ ಅನಿತಾ ಭಟ್ ನಟಿಸುತ್ತಿದ್ದಾರೆ. ಆದರೆ ಐದು ಚಿತ್ರಗಳಿಗೆ ತಮ್ಮ ಸಮಯವನ್ನು ಅವರು ಹೇಗೆ ಹೊಂದಿಸುತ್ತಾರೆ ಎನ್ನುವುದು ಪ್ರೇಕ್ಷಕರ ಪ್ರಶ್ನೆಯಾಗಿದೆ. 

 

మరింత సమాచారం తెలుసుకోండి: