ಈಗಾಗಲೇ ಸಾಕಷ್ಟು ಸುದ್ದಿ ಮಾಡಿರೋ ದೇವಕಿ ಚಿತ್ರದ ಟ್ರೇಲರ್, ಟೀಸರ್ ಹಾಗೂ ಪೋಸ್ಟರ್ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ. ಈ ಚಿತ್ರದಲ್ಲಿ ವಿಶೇಷತೆ ಏನೆಂದರೆ, ಪ್ರಿಯಾಂಕಾ ಉಪೇಂದ್ರ ಚಿತ್ರದ ಹೈಲೈಟ್, ಜೊತೆಗೆ ಅವರ ಮಗಳು ಐಶ್ವರ್ಯ ಕೂಡ ಚಿತ್ರದಲ್ಲಿ ಮಗಳಾಗಿಯೇ ಅಭಿನಯ ಮಾಡಿದ್ದಾಳೆ. ಇದೀಗ ದೇವಕಿ ಬಿಡುಗಡೆಗೆ ಡೇಟ್ ಫಿಕ್ಸ್ ಆಗಿದೆ.
ಹೌದು, ಪ್ರಿಯಾಂಕಾ ಉಪೇಂದ್ರ ಅವರು ನಟಿಸಿರುವ ಈ ಚಿತ್ರದ ಸೆನ್ಸಾರ್ ವೀಕ್ಷಿಸಿದ ಮಂಡಳಿ, ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ನೀಡಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಜೂನ್ ೩೮ ರಂದಿ ಸಿನಿಮಾ ಬಿಡುಗಡೆ ಆಗಬೇಕಿತ್ತು ಆದರೆ ಅದೊಂದು ಕಾರಣದಿಂದ ಸಿನಿಮಾ ರಿಲೀಸ್ ಡೇಟ್ ಮುಂದಕ್ಕೆ ಹಾಕಲಾಯಿತು.
ಜೂನ್ ೨೮ ಕ್ಕೆ ಶಿವರಾಜ್ ಕುಮಾರ್ ಅಭಿನಯದ ರುಸ್ತುಂ ಬಿಡುಗಡೆ ಆಗುತ್ತಿದೆ. ಹೀಗಾಗಿ ಇದನ್ನು ಅರಿತ ದೇವಕಿ ಚಿತ್ರತಂಡ ಜುಲೈ ಮೊದಲ ವಾರದಲ್ಲಿ ದೇವಕಿ ಸಿನಿಮಾ ತೆರೆಗೆ ತರಲು ನಿರ್ಧರಿಸಿದೆ. ಈ ಚಿತ್ರದ ನಿರ್ದೇಶನ ಮಾಡಿದವರು ಲೋಹಿತ್, ಕಾರ್ತಿಕ್ ಗೌಡ ಚಿತ್ರ ವಿತರಣೆ ಮಾಡುತ್ತಿದ್ದು, ಸಾಕಷ್ಟು ಚಿತ್ರಮಂದಿರಗಳಲ್ಲಿ ಇದು ತೆರೆ ಕಾಣಲಿದೆ ಎಂದಿದ್ದಾರೆ.
ಈ ಚಿತ್ರದ ಮತ್ತೊಂದು ವಿಶೇಷತೆ ಏನೆಂದರೆ, ಇಡೀ ಚಿತ್ರ ಕೋಲ್ಕತದಲ್ಲಿ ಶೂಟಿಂಗ್ ಆಗಿದೆ. ಅಲ್ಲದೇ ತಮಿಳು ಮತ್ತು ಕನ್ನಡ ಭಾಷೆಯಲ್ಲಿ ಏಕಕಾಲಕ್ಕೆ ಚಿತ್ರ ಬಿಡುಗಡೆ ಆಗುತ್ತಿದೆ. ಕಿಶೋರ್ ಅವರು ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ.
click and follow Indiaherald WhatsApp channel