ಅಜಯ್ ದೇವಗನ್ ಮತ್ತು ಅಭಿಷೇಕ್ ಬಚ್ಚನ್ ಇಬ್ಬರೂ ಬಾಲಿವುಡ್‌ನ ಪ್ರಖ್ಯಾತ ನಾಯಕರು. ಅಜಯ್ ದೇವಗನ್ ಅವರನ್ನು ಇಷ್ಟೊಡುವ ಫ್ಯಾನ್ಸ್ ಒಂದು ಕಡೆ ಮತ್ತೆ ಅಭಿಷೇಕ್ ಬಚ್ಚನ್ ಅವರನ್ನು ಇಷ್ಟಪಡುವ ಫ್ಯಾನ್ಸ್ ಮತ್ತೊಂದು ಕಡೆ ಈ ಇಬ್ಬರನ್ನೂ ಹಾಕಿಕೊಂಡು ಸಿನಮಾ ಮಾಡಿದರೆ ಹೇಗೆ? ಇಬ್ಬರೂ ಹೀರೋಗಳ ಅಭಿಮಾನಿಗಳು ಇವರನ್ನು ನೋಡುತ್ತಾರೆ. ಯೆಸ್ ಇದೇ ಲಾಜಿಕ್ ಮೇಲೆ ಇದೀಗ ಅಜಯ್ ದೇವಗನ್ ಮತ್ತು ಅಭಿಷೇಕ್ ಬಚ್ಚನ್ ಅವರು ಇಬ್ಬರೂ ಒಟ್ಟಾಗಿ ಒಂದೇ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಹೌದು ಏಳು ವರ್ಷಗಳ ನಂತರ ಈ ಜೋಡಿ ಮತ್ತೆ ತೆರೆ ಮೇಲೇ ಬರೋಕೆ ಸಜ್ಜಾಗಿದೆ. ಅಜಯ್ ದೇವ್‌ಗನ್ ಈಗಾಗಲೇ ನಾಲ್ಕು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಇದರ ಮಧ್ಯೆಯೇ ಮತ್ತೊಂದು ಸಿನಿಮಾಕ್ಕೂ ಅವರು ಸಹಿ ಹಾಕಿದ್ದಾರೆ. ಈ ಚಿತ್ರದಲ್ಲಿಯೇ ಅಭಿಷೇಕ್ ಬಚ್ಚನ್ ಅವರ ಜೊತೆಗೆ ಅಜಯ್ ನಟಿಸಲಿದ್ದಾರೆ. 

ಅಜಯ್ ಮತ್ತು ಅಭಿಷೇಕ್ ಅವರ ಜೋಡಿ ಈಗಾಗಲೇ ನಾಲ್ಕು ಸಿನಿಮಾಗಳನ್ನು ಮಾಡಿದೆ. ಅವುಗಳು.. ಬೋಲ್ ಬಚ್ಚನ್, ಈ ಸಿನಿಮಾ 2012 ರಲ್ಲಿ ಬಿಡುಗಡೆ ಆಗಿತ್ತು. ಅದಕ್ಕೂ ಮೊದಲು ಎಲ್‌ಓಸಿ, ಯುವ, ಜಮೀನ್ ಚಿತ್ರಗಳಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದ್ದರು. ಇದೀಗ ಇನ್ನರೂ ಒಟ್ಟಿಗೆ ನಟಿಸುತ್ತಿರುವ ಐದನೇ ಚಿತ್ರವೇ ಈ ಹೊಸ ಚಿತ್ರ. ಈ ಚಿತ್ರವನ್ನು ಕೂಕಿ ಗುಲಾಟೆ ನಿರ್ಮಾಣ ಮಾಡುತ್ತಿದ್ದಾರೆ. 

ಈ ಚಿತ್ರಕತೆ ಅಜಯ್ ದೇವಗನ್ ಅವರಿಗೆ ತುಂಬ ಇಷ್ಟವಾಗಿದೆ ಎನ್ನಲಾಗಿದೆ. ಇದೇ ಕಾರಣಕ್ಕೆ ನಾಲ್ಕು ಸಿನಿಮಾಗಳಲ್ಲಿ ಅವರು ಬ್ಯುಸಿ ಇದ್ದರೂ ಸಹ ಈ ಚಿತ್ರವನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಅಷ್ಟಕ್ಕೂ ಈ ಚಿತ್ರದ ಕತೆ ಏನು ಅಂತ ನೋಡಿದರೆ, 2000 ಇಸವಿಯಲ್ಲಿ ನಡೆದ ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆ ಕುರಿತು ಈ ಸಿನಿಮಾ ಬೆಳಕು ಚೆಲ್ಲಲಿದೆ ಎನ್ನಲಾಗುತ್ತಿದೆ. 

ಇನ್ನೂ ಈ ಚಿತ್ರಕ್ಕೆ ಅಜಯ್ ದೇವಗನ್ ಅವರೇ ಬಂಡವಾಳ ಹೂಡುವ ಆಲೋಚನೆಯಲ್ಲಿ ಇದ್ದಾರೆ ಎನ್ನಲಾಗಿದೆ. ಅಜಯ್ ದೇವಗನ್ ಅವರಿಗೆ ನಾಯಕಿಯಾಗಿ ಇಲಿಯಾನಾ ಡಿ ಕ್ರೂಜ್ ಅವರು ಆಯ್ಕೆ ಆಗಿದ್ದಾರೆ. ಇಲಿಯಾನಾ ಡಿ ಕ್ರೂಜ್ ಅವರು ಈ ಹಿಂದೆಯೇ ಅಜಯ್ ದೇವಗನ್ ಅವರ ಜತೆಗೆ ನಟಿಸಿದ್ದರು. ಹೌದು ಬಾದ್‌ ಶಾ ಮತತ್ತು ರೇಡ್ ಅನ್ನುವ ಚಿತ್ರಗಳಲ್ಲಿ ಈ ಜೋಡಿ ಮಸ್ತ್ ಅಭಿನಯ ಮಾಡಿತ್ತು ಎನ್ನಬಹುದು. 


మరింత సమాచారం తెలుసుకోండి: