ಮೀಟೂ ವಿವಾದದ ಮೂಲಕ ದಕ್ಷಿಣ ಭಾರತಾದ್ಯಂತ ಸುದ್ದಿಯಾಗಿದ್ದ ನಟಿ ಶೃತಿ ಹಾರಿಹರನ್ ಇದೀಗ ಮತ್ತೆ ಟ್ವೀಟರ್ ಗೆ ವಾಪಾಸ್ ಬಂದಿದ್ದಾರೆ. ನಾಚಿ ಚರಾಮಿ ಚಿತ್ರದ ನಂತರ ಎಲ್ಲಿಯೂ ಕಾಣಿಸಿಕೊಳ್ಳದೇ ಇದ್ದ ಶೃತಿ ಇದೀಗ ಬಹಳ ದಿನಗಳ ನಂತರ ಟ್ವೀಟ್ ಮಾಡಿದ್ದಾರೆ.
ಹೌದು, ಅರ್ಜುನ್ ಸರ್ಜಾ ಮೇಲೆ ಮೀಟೂ ಆರೋಪ ಮಾಡಿದ್ದ ನಟಿ ಶೃತಿ ಹರಿಹರನ್ ಇದೀಗ ಟ್ವೀಟರ್ ಗೆ ಮರಳಿರೋದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಮೂರು ತಿಂಗಳ ನಂತರ ಮತ್ತೆ ಶೃತಿ ಟ್ವೀಟರ್ ಪೋಸ್ಟ್ ಮಾಡಿದ್ದಾರೆ.
ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಗಿರೀಶ್ ಕಾರ್ನಾಡ ಅವರು ನಿಧನರಾಗಿದ್ದು. ಶೃತಿ ಕಾರ್ನಾಡ್ ಅವರಿಗೆ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.
click and follow Indiaherald WhatsApp channel