ದರ್ಶನ್ ಅಂದರೆ ಸ್ಯಾಂಡಲ್ ವುಡ್ ನಲ್ಲಿ ಎಲ್ಲರಿಗೂ ಅಚ್ಚುಮೆಚ್ಚು. ಯಜಮಾನ ಸಿನಿಮಾದಲ್ಲಿ ದರ್ಶನ್ ಅವರು ರೈತರ ಪರ ದೋರಣೆಯನ್ನು ಹೊಂದಿದ ಅಭಿನಯ ಎಲ್ಲರ ಮನೆ ಗೆದ್ದಿತ್ತು. ಇನ್ನು ಇದೇ ಚಿತ್ರದಲ್ಲಿ ಶಿವನಂದಿ ಅನ್ನೋ ಟೈಟಲ್ ಸಾಂಗ್ ಇದೆ. ಇದೀಗ ಇದೇ ಟೈಟಲ್ ಮೇಲೆ ದಿನಕರ್ ತೂಗುದೀಪ್ ಆಸಕ್ತಿ ತೋರಿದ್ದಾರೆ.
ಹೌದು, ಯಜಮಾನ ಚಿತ್ರದಲ್ಲಿ ನಾಯಕ ನಟ ದರ್ಶನ್ ಅವರು ತಯಾರು ಮಾಡುವ ಎಣ್ಣೆಯ ಬ್ರ್ಯಾಂಡ್ ಶಿವನಂದಿ. ಹೀಗಾಗಿ ಇದೇ ಹೆಸರು ಇನ್ಮೇಲೆ ಸಿನಿಮಾದ ಟೈಟಲ್ ಕೂಡ ಆಗಲಿದೆ. ದಿನಕರ್ ತೂಗುದೀಪ್ ಅವರು ಈ ಹೆಸರನ್ನು ನೋಂದಣಿ ಮಾಡಿಕೊಂಡಿದ್ದಾರೆ.
ಹೌದು, ಕರ್ನಾಟಕದ ವಾಣಿಜ್ಯ ಮಂಡಳಿಯಲ್ಲಿ ಶಿವನಂದಿ ಅನ್ನೋ ಟೈಟಲ್ ಅನ್ನು ದಿನಕರ್ ನೊಂದಣಿ ಮಾಡಿಸಿದ್ದಾರೆ. ದಿನಕರ್ ತುಗೂದೀಪ್ ಬೇರೆ ಯಾರೂ ಅಲ್ಲ, ದರ್ಶನ್ ಅವರ ಸಹೋದರ. ಟೈಟಲ್ ರಿಜಿಸ್ಟರ್ ಮಾಡಿಸಿದ ಮೇಲೆ ದಿನಕರ್ ಇದೇ ಹೆಸರಿನ ಸಿನಿಮಾ ಕೂಡ ಮಾಡಬಹುದು ಎನ್ನಲಾಗುತ್ತಿದೆ.
click and follow Indiaherald WhatsApp channel