ಇಂದಿನ ದಿನದಲ್ಲಿ ಸೋಶಿಯಲ್ ಮಿಡಿಯಾಗಳು ಎಲ್ಲರನ್ನು ಅತೀ ವೇಗವಾಗಿ ತಲುಪುವಂತಹ ಮಾಧ್ಯಮವಾಗಿದೆ. ಇದರಿಂದ ಇಡೀ ವಿಶ್ವವೇ ಒಂದು ಕುಟುಂಬವಾಗಿದೆ. ಯಾವುದೇ ವಿಷಯವನ್ನು ಪ್ರಪಂಚದ ಯಾವುದೇ ಮೂಲೆಯಲ್ಲಿ ಕುಳಿತುಕೊಂಡು ತಿಳಿಯಬಹುದಾಗಿದೆ. ಹಾಗೂ ತಿಳಿಸುವಂತಹ ತಂತ್ರಜ್ಞಾನ ಇಂದು ನಮ್ಮಲ್ಲಿ ಹುಟ್ಟಿಕೊಂಡಿದೆ. ಆದರೂ ಸಾಮಾಜಿಕ ಮಾಧ್ಯಮಗಳನ್ನು 18 ವರ್ಷ ತುಂಬಿದವರೇ ಬಳಸಬೇಕು ಎಂದು ನಿರ್ಬಂಧ ಹೇರಲಾಗಿತ್ತು. ಆದರೆ ಈಗ ಫೇಸ್ ಬುಕ್ ಚಿಕ್ಕಮಕ್ಕಳಿಗಾಗಿ ಫೇಸ್ ಬುಕ್ ಮೆಸೆಂಜರ್ ಕಿಡ್ಸ್ ಆಫ್ ಅನ್ನು ಬಿಡುಗಡೆ ಮಾಡಿದೆ ಈ ಮೂಲಕ ಚಿಕ್ಕಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ಭಾಗಿಯಾಗಬಹುದು. ಅಷ್ಟಕ್ಕೂ ಈ ಆಫ್  ಹೇಗೆ ಕಾರ್ಯ ನಿರ್ವಹಿಸಲಿದೆ ಗೊತ್ತಾ..?  

 

ಈಗ ಏನಿದ್ದರೂ ಸೊಶೀಯಲ್‌ ಮೀಡಿಯಾಗಳ ಜಮಾನ. ಎಲ್ಲಿ ಏನೇ ನಡೆದರು ಸೊಶೀಯಲ್‌ ಮೀಡಿಯಾದಲ್ಲಿ ಸುದ್ದಿ ಆಗುತ್ತೆ. ಜಿರೋ ಆಗಿದ್ದವರು ಸೊಶೀಯಲ್‌ ಮೀಡಿಯಾಗಳ ಮೂಲಕ ಹಿರೋ ಆಗಿ ಬಿಡುತ್ತಾರೆ. ಹೀಗೆ ಸಮಾಜಿಕ ಜಾಲತಾಣಗಳ ಅಬ್ಬರ ಜೋರಾಗಿಯೇ ಇದೆ. ಇದರಲ್ಲಿ ಜನಪ್ರಿಯ ಸೊಶೀಯಲ್‌ ಮೀಡಿಯಾ ಆಪ್‌ ಫೇಸ್‌ಬುಕ್‌ ಕೂಡ ಒಂದಾಗಿದೆ. ಸದ್ಯ ಜಾಗತಿಕವಾಗಿ ಪ್ರಸಿದ್ಧಿಯನ್ನ ಪಡೆದುಕೊಂಡಿರುವ ಫೇಸ್‌ಬುಕ್‌ 2017 ರಲ್ಲಿ ಪರಿಚಯಿಸಿದ್ದ ಅಪ್ಲಿಕೇಶನ್‌ ಒಂದನ್ನ ಇದೀಗ 70ಕ್ಕೂ ಅಧಿಕ ದೇಶಗಳಿಗೆ ವಿಸ್ತರಿಸಿದೆ. ಈ ಮೂಲಕ ಭಾರತ ದೇಶದ ಬಳಕೆದಾರರಿಗೂ ಕೂಡ ಈ ಅಪ್ಲಿಕೇಶನ್‌ ಇಂದಿನಿಂದ ಲಬ್ಯವಾಗಲಿದೆ.

 

ಹೌದು, ಜನಪ್ರಿಯ ಸೊಶೀಯಲ್‌ ಮೀಡಿಯಾ ತಾಣ ಆಗಿರುವ ಫೇಸ್‌ಬುಕ್‌ 2017ರಲ್ಲಿ ಮೆಸೆಂಜರ್ ಕಿಡ್ಸ್ ಎಂಬ ಹೊಸ ಚಾಟ್ ಅಪ್ಲಿಕೇಶನ್ ಅನ್ನು ಪರಿಚಯಿಸಿತ್ತು. ಇದು ಪೋಷಕರಿಂದ ಅನುಮೋದನೆ ಪಡೆದು ಬಲಸಲ್ಪಡುವ ಅಪ್ಲಿಕೇಶನ್ ಆಗಿತ್ತು. ಜೊತೆಗೆ ಈ ಅಪ್ಲಿಕೇಶನ್‌ ಜನಪ್ರಿಯ ಮೆಸೆಂಜರ್ ಅಪ್ಲಿಕೇಶನ್‌ನ ಮಕ್ಕಳ ಸ್ನೇಹಿ ಆವೃತ್ತಿಯಾಗಿದ್ದು, ಇದನ್ನು ಮಕ್ಕಳು ಸುರಕ್ಷಿತವಾಗಿ ಸ್ನೇಹಿತರು ಮತ್ತು ಕುಟುಂಬ ಸದಸ್ಯರಿಗೆ ಸಂದೇಶ ಕಳುಹಿಸಲು ಸಹಾಯ ಮಾಡಲು ವಿನ್ಯಾಸಗೊಳಿಸಲಾಗಿತ್ತು. ಅಲ್ಲದೆ ಈ ಸೇವೆಯನ್ನು ಆರಂಭದಲ್ಲಿ ಯುಎಸ್‌ನಲ್ಲಿ ಮಾತ್ರ ಪ್ರಾರಂಭಿಸಲಾಗಿತ್ತು. ನಂತರ ಕೆನಾಡದಲ್ಲಿ ಕೂಡ ಪರಿಚಯಿಸಲಾಗಿತ್ತು.

 

 

ಸದ್ಯ ಫೇಸ್‌ಬುಕ್‌ನ ಇತ್ತೀಚಿನ ಬ್ಲಾಗ್ ಪೋಸ್ಟ್ ಪ್ರಕಾರ, ಮೆಸೆಂಜರ್ ಕಿಡ್ಸ್ ಈಗ ಭಾರತ, ಆಸ್ಟ್ರೇಲಿಯಾ, ಬ್ರೆಜಿಲ್, ಜಪಾನ್, ಸಿಂಗಾಪುರ್ ಮತ್ತು ಇನ್ನಿತರ 70 ಕ್ಕೂ ಹೆಚ್ಚು ದೇಶಗಳಲ್ಲಿ ಐಒಎಸ್ ಮತ್ತು ಆಂಡ್ರಾಯ್ಡ್ ಎರಡರಲ್ಲೂ ಲಭ್ಯವಿರುತ್ತದೆ. ಈ ಸೇವೆಯನ್ನು ಹೆಚ್ಚಿನ ದೇಶಗಳಿಗೆ ವಿಸ್ತರಿಸುವ ಜೊತೆಗೆ, ಫೇಸ್‌ಬುಕ್ ಮೆಸೆಂಜರ್ ಕಿಡ್ಸ್‌ನಲ್ಲಿ ಒಂದೆರಡು ಹೊಸ ಫೀಚರ್ಸ್‌ಗಳನ್ನು ಸಹ ಪರಿಚಯಿಸಿದೆ, ಇದು ಮಕ್ಕಳನ್ನು ತಮ್ಮ ಸ್ನೇಹಿತರೊಂದಿಗೆ ಕನೆಕ್ಟ್‌ ಮಾಡುವುದಕ್ಕೆ ಪೋಷಕರಿಗೆ ಸಹಾಯ ಮಾಡಲಿದೆ. ಸದ್ಯ ಮೆಸೆಂಜರ್‌ನಲ್ಲಿ ಮಕ್ಕಳಿಗಾಗಿ ಇರುವ ಈ ಅಪ್ಲಿಕೇಶನ್‌ ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಯೋಣ ಬನ್ನಿರಿ.

 

 

ಮೇಲ್ವಿಚಾರಣೆ

ಆರಂಭದಲ್ಲಿ ಮೆಸೆಂಜರ್ ಕಿಡ್ಸ್ ಅನ್ನು ಪ್ರಾರಂಭಿಸಿದಾಗ, ಪೋಷಕರು ತಮ್ಮ ಮಗುವಿಗೆ ಸ್ನೇಹಿತರನ್ನು ಕನೆಕ್ಟ್‌ ಮಾಡುವುದಕ್ಕೆ ಹಾಗೂ ಇತರೆ ಕಂಟ್ಯಾಕ್ಟ್‌ಗಳನ್ನ ಆಹ್ವಾನಿಸಲು ಮತ್ತು ಅನುಮೋದಿಸಲು ಮಾತ್ರ ಇದು ಅವಕಾಶ ಮಾಡಿಕೊಟ್ಟಿತು. ಆದರೆ ಇದೀಗ ಹೊಸ ವಿನ್ಯಾಸದ ನಂತರ ಫ್ರೆಂಡ್‌ ರಿಕ್ವೆಸ್ಟ್‌ ಮೇಲ್ವಿಚಾರಣೆಯ ಜೊತೆಗೆ ಪೋಷಕರು ತಮ್ಮ ಮಕ್ಕಳಿಗೆ ಕಂಟ್ಯಾಕ್ಟ್‌ಗಳನ್ನ ಸ್ವೀಕರಿಸಲು, ತಿರಸ್ಕರಿಸಲು, ಸೇರಿಸಲು ಅಥವಾ ತೆಗೆದುಹಾಕಲು ಅನುಮತಿಸುವ ಆಯ್ಕೆಯನ್ನು ನೀಡಲಾಗಿದೆ. ಆದರೆ ಪೋಷಕರ ಡ್ಯಾಶ್‌ಬೋರ್ಡ್‌ನಿಂದ ಹೊಸ ಕಂಟ್ಯಾಕ್ಟ್‌ ಅನುಮೋದನೆಗಳನ್ನು ಅತಿಕ್ರಮಿಸುವ ಸಾಮರ್ಥ್ಯವನ್ನು ಉಳಿಸಿಕೊಳ್ಳಲಾಗಿದೆ. ಇನ್ನು ಹೆಚ್ಚುವರಿ ಭದ್ರತಾ ಕ್ರಮವಾಗಿ, ತಮ್ಮ ಮಕ್ಕಳು ಅಪ್ಲಿಕೇಶನ್‌ನ ಮೂಲಕ ಯಾರಿಗೆ ಫ್ರೆಂಡ್‌ ರಿಕ್ವೆಸ್ಟ್‌ ಕಳಿಸಿದರು ಅದು ಪೋಷಕರಿಗೆ ತಿಳಿಯುತ್ತದೆ.


ಮಕ್ಕಳಿಗಾಗಿ ಗುಂಪುಗಳ ರಚನೆ

ಇನ್ನು ವಿಶ್ವಾಸಾರ್ಹ ಮೆಲ್ವಿಚಾರಣೆಗಾಗಿ ಪೋಷಕರಿಂದ ಅನುಮೋದಿಸಲ್ಪಟ್ಟ ಗುಂಪುಗಳಿಗೆ ಸೇರಲು ಮೆಸೆಂಜರ್ ಅಪ್ಲಿಕೇಶನ್‌ ಅವಕಾಶ ನೀಡಿದೆ. ಈ ಮಾದರಿಯ ಗುಂಪಿನಲ್ಲಿ ಮಕ್ಕಳನ್ನು ಸಹ ಅದೇ ಅನುಮೋದನೆಯನ್ನು ನೀಡಿದ ಗುಂಪಿಗೆ ಸಂಪರ್ಕಿಸಲು ಸಾಧ್ಯವಾಗುತ್ತದೆ. ಜೊತೆಗೆ ನೀವು ಶಿಕ್ಷಕ, ತರಬೇತುದಾರರು ಈ ಫೀಚರ್ಸ್‌ ಅನ್ನು ಬಳಸಿಕೊಳ್ಳಬಹುದಾಗಿದೆ. ಈ ಮೂಲಕ ಮಕ್ಕಳಿಗೆ ವಿಶೇಷ ಪಾಠ ಪ್ರವಚನಗಳನ್ನ ನೀಡಲು ಅವಕಾಶವಿದೆ. ಆದರೆ ಇದಕ್ಕೆ ಪೋ‍ಕರ ಅನುಮತಿ ಅಗತ್ಯವಿರುತ್ತದೆ.

 

ಮಕ್ಕಳಿಗಾಗಿ ಸಾರ್ವಜನಿಕ ಪ್ರೊಫೈಲ್‌ಗಳು

ಇದಲ್ಲದೆ ಯುಎಸ್, ಕೆನಡಾ ಮತ್ತು ಲ್ಯಾಟಿನ್ ಅಮೆರಿಕಾದಲ್ಲಿರುವ ಪೋಷಕರಿಗೆ ತಮ್ಮ ಮಗುವಿನ ಹೆಸರು ಮತ್ತು ಪ್ರೊಫೈಲ್ ಫೋಟೋವನ್ನು ಗೋಚರಿಸುವಂತೆ ಮಾಡುವ ಮೂಲಕ ಮೆಸೆಂಜರ್ ಕಿಡ್ಸ್ ಮಕ್ಕಳು ವೇದಿಕೆಯಲ್ಲಿ ಹೆಚ್ಚಿನ ಸ್ನೇಹಿತರನ್ನು ಹುಡುಕಲು ಮತ್ತು ಸಂಪರ್ಕಿಸಲು ಸುಲಭವಾಗಿಸುತ್ತಿದ್ದಾರೆ. ಆದಾಗ್ಯೂ, ಸಾರ್ವಜನಿಕ ಪ್ರೊಫೈಲ್ ಅವರ ಮಗುವಿನ ಸಂಪರ್ಕಗಳ ಸ್ನೇಹಿತರಿಗೆ ಮತ್ತು ಅವರ ಪೋಷಕರು, ಪೋಷಕರ ಫೇಸ್‌ಬುಕ್ ಸ್ನೇಹಿತರ ಮಕ್ಕಳು ಮತ್ತು ಮೆಸೆಂಜರ್ ಕಿಡ್ಸ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಲು ಪೋಷಕರು ಆಹ್ವಾನಿಸುವ ಜನರ ಮಕ್ಕಳಿಗೆ ಮಾತ್ರ ಗೋಚರಿಸುತ್ತದೆ. ಈ ಫೀಚರ್ಸ್‌ ಈಗಾಗಲೇ ಯುಎಸ್, ಕೆನಡಾ ಮತ್ತು ಲ್ಯಾಟಿನ್ ಅಮೆರಿಕಾದಲ್ಲಿ ಲೈವ್ ಆಗಿದೆ ಮತ್ತು ಮುಂಬರುವ ವಾರಗಳಲ್ಲಿ ಇತರ ದೇಶಗಳಲ್ಲಿ ಲಬ್ಯವಾಗಲಿದೆ.

 

మరింత సమాచారం తెలుసుకోండి: