ಕೊಡಗು: ಕಳೆದ ವರ್ಷದಂತೆ ಈ ಬಾರಿಯೂ ಸಹ ಕೂರ್ಗ್  ನಾಡಿನಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ವರುಣನ ಆರ್ಭಟಕ್ಕೆ ಗುಡ್ಡ ಕುಸಿದು, ಪ್ರಾಣಹಾನಿ ಆಗಿತ್ತು. ಮನೆಗಳು, ಆಸ್ತಿ-ಪಾಸ್ತಿ ಎಲ್ಲವೂ ಕೊಚ್ಚಿ ಹೋಗಿ ನಾಶವಾಗಿತ್ತು. ಹೀಗಾಗಿ ಮನೆ ಕಳೆದುಕೊಂಡ ನಿರಾಶ್ರಿತರಿಗೆ ಸರ್ಕಾರ ಪರಿಹಾರ ಕೇಂದ್ರಗಳನ್ನು ತೆರೆದಿತ್ತು. ಆದರೆ ಈಗ ಆ ನಿರಾಶ್ರಿತ ಕೇಂದ್ರಗಳಲ್ಲಿರುವ ನಿರಾಶ್ರಿತರನ್ನು ಹೊರದಬ್ಬುವ ಯತ್ನಕ್ಕೆ ಸರ್ಕಾರ ಕೈ ಹಾಕಿದೆ ಎನ್ನಲಾಗಿದೆ. 


ನೆರೆ ಸಂತ್ರಸ್ತರಿಗೆ ಸೋಮವಾರಪೇಟೆ ತಾಲೂಕಿನ ನೆಲಹ್ಯುದಿಕೇರಿಯಲ್ಲಿ ನಿರಾಶ್ರಿತರ ಕೇಂದ್ರವನ್ನು ತೆರೆಯಲಾಗಿತ್ತು. ಅಲ್ಲಿ ಮನೆ ಕಳೆದುಕೊಂಡ 68 ಕುಟುಂಬಗಳು ಆಶ್ರಯ ಪಡೆದಿದ್ದರು. ಆದರೆ ಈಗ ಕೊಟ್ಟು ವಾಪಸ್ಸು ಪಡೆಯುವ ಹಾಗೆ ಸರ್ಕಾರ ಪ್ರವಾಹ ಸಂತ್ರಸ್ತರನ್ನು ನಿರಾಶ್ರಿತ ಕೇಂದ್ರದಿಂದ ಹೊರಗೆ ಕಳುಹಿಸಲು ಪ್ಲ್ಯಾನ್ ಮಾಡಿದೆ ಎಂಬ ಬ್ರೇಕಿಂಗ್ ನ್ಯೂಸ್ ತಿಳಿದು ಬಂದಿದೆ.


ಸಂಬಂಧಪಟ್ಟ ಅಧಿಕಾರಿಗಳು ನಿರಾಶ್ರಿತರಿಂದ ಸಹಿ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ. ಆ ಪತ್ರದಲ್ಲಿ "ನಾವೇ ಅನಧಿಕೃತವಾಗಿ ನದಿ ದಡದಲ್ಲಿ ಮನೆ ನಿರ್ಮಿಸಿದ್ದೇವೆ. ಅಲ್ಲಿಗೆ ನಾವು ಪುನಃ ಹೋಗುವುದಿಲ್ಲ. ಸರ್ಕಾರ ಉದ್ದೇಶಿಸಿರುವ ಮನೆ, ನಿವೇಶನ ನಮಗೆ ಬೇಡ. ಸರ್ಕಾರದ 1 ಲಕ್ಷ ಪಡೆದು ಹೋಗುತ್ತೇವೆ," ಎಂದು ಇದೆ.


ಆಶ್ರಯ ಪಡೆಯುತ್ತಿರುವ ನಿರಾಶ್ರಿತರೇ ಹೊರ ಹೋಗುವುದಾಗಿ ಹೇಳಿರುವಂತೆ ಪತ್ರ ಸಿದ್ದಪಡಿಸಿದ್ದಾರೆ.  ಆ ಪತ್ರಕ್ಕೆ ನಿರಾಶ್ರಿತರಿಂದ ಸಹಿ ಪಡೆಯಲು ಅಧಿಕಾರಿಗಳು ಹರಸಾಹಸ ಪಟ್ಟಿದ್ದಾರೆ. ಬಳಿಕ ಅಧಿಕಾರಗಳ ಕುತಂತ್ರ ತಿಳಿದ ನಿರಾಶ್ರಿತರು ಆಕ್ರೋಶ ಹೊರಹಾಕಿದ್ದಾರೆ. ಮೋಸ ಮಾಡುತ್ತಿದ್ದಾರೆ ಎಂದು ನೆಲ್ಯಹುದಿಕೇರಿ ನಿರಾಶ್ರಿತ ಕೇಂದ್ರ ಹಾಗೂ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದ್ದಾರೆ. 


ಕೊಡಗು  ಸೇರಿದಂತೆ ಉತ್ತರ ಕರ್ನಾಟಕದ ಭಾಗದಲ್ಲಿ ಭಾರೀ ಮಳೆ, ಹಾಗೂ ಅತಿಯಾದ ನೀರಿನಿಂದ ಪ್ರವಾಹ ಉಂಟಾಗಿ ಸಾವಿರಾರು ಕೋಟಿ ರೂಪಾಯಿಗಳು  ನಷ್ಟವಾಗಿದೆ. ಜನರು, ಪ್ರಾಣಿಗಳು ಬಹುತೇಕರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಹಸಿವಿನಿಂದ ಜನರು ಕಂಗೆಟ್ಟಿದ್ದಾರೆ. ಇಷ್ಟೇಲ್ಲಾ ನಡೆದರೂ ಸಹ ಕೇಂದ್ರ ಕ್ಯಾರೇ ಎನ್ನುತ್ತಿಲ್ಲ. ರಾಜ್ಯದ ಖಜಾನೆ ಖಾಲಿ ಖಾಲಿ. ಪ್ರಸ್ತುತ ಸರ್ಕಾರ ಕಣ್ಣಿದ್ದು  ಕುರುಡನಂತಾಗಿದೆ.


మరింత సమాచారం తెలుసుకోండి: