ಮುಂಬೈ: ಟೀಂ ಇಂಡಿಯಾದ ಸಿಕ್ಸರ್ ಸಿಂಗ್, ಡೇರ್ ಅಂಡ್ ಡ್ಯಾಶ್ ಆಟಗಾರ ಹಾರ್ದಿಕ್ ಪಾಂಡ್ಯ ಅವರ ಎಂಗೇಜ್ ಮೆಂಟ್ ಸದ್ದಿಲ್ಲದೆ ಮುಗಿದು ಬಿಟ್ಟಿದೆ. ಹೌದು, ಶಾಕ್ ಆದರೂ ನಂಬಲೇ ಬೇಕಾದ ವಿಷಯವಿದು. ಎಲ್ಲವೂ ಸೈಲೆಂಟಾಗೇ ಮುಗಿದಿದೆ. ಹರ್ಭಜನ್  ಸಿಂಗ್, ವಿರಾಟ್ ಕೊಹ್ಲಿ ಬಳಿಕ ಇದೀಗ ಹಾರ್ದಿಕ್ ಪಾಂಡ್ಯ. ಬಾಲಿವುಡ್ ಜೊತೆ ಕ್ರಿಕೆಟ್ ಜೋಡಿಸಿದ ಆಟಗಾರರು. ಹೌದು. ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಬಾಲಿವುಟ್ ನಟಿ ಜೊತೆ ಸೈಲೆಂಟ್ ಆಗಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಆ ಬಗೆಗಿನ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ ನೋಡಿ. 
 
ಖ್ಯಾತ ಸೆಲೆಬ್ರಿಟಿಗಳು, ಕ್ರಿಕೆಟಿಗರು ಹೊಸ ವರುಷದ ಸಂಭ್ರಮದಲ್ಲಿ ಇದ್ದಾರೆ.ಆದರೆ ಟೀಂ ಇಂಡಿಯಾ ಅಲ್ರೌಂಡರ್ ಹಾರ್ದಿಕ್ ಪಾಂಡ್ಯ ಹೊಸ ವರ್ಷದ ಮುಂಜಾನೆ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದರು. ಬಾಲಿವುಡ್ ನಟಿ ನತಾಶ ಸ್ಟಾಂಕೋವಿಚ್ ಜೊತೆಗಿನ ಗಪ್ ಚುಪ್ ಪ್ರೀತಿ ರಹಸ್ಯವನ್ನು ಬಹಿರಂಗ ಪಡಿಸಿದ್ದರು. ಈ ಸುದ್ದಿಯನ್ನು ಪಾಂಡ್ಯ ಮಹಿಳಾ ಅಭಿಮಾನಿಗಳು ಅರಗಿಸಿಕೊಳ್ಳೋ ಮೊದಲೇ ಮತ್ತೊಂದು ಸರ್ಪ್ರೈಸ್ ನೀಡಿದ್ದಾರೆ. ಹಾರ್ದಿಕ್ ಪಾಂಡ್ಯ ಸದ್ದಿಲ್ಲದೆ ಎಂಗೇಜ್‌ಮೆಂಟ್ ಮುಗಿಸಿದ್ದಾರೆ. ಹೌದು. 
 
ವಿಶೇಷತೆ ಏನಪ್ಪಾ ಅಂದರೆ, ಮನ್ಸೂರ್ ಅಲಿ ಖಾನ್- ಶರ್ಮಿಳಾ ಠಾಗೋರ್, ಮೊಹಮ್ಮದ್ ಅಜರುದ್ದೀನ್- ಸಂಗೀತ್ ಬಿಜ್ಲಾನಿ, ಹರ್ಭಜನ್ ಸಿಂಗ್-ಗೀತಾ ಬಸ್ರಾ, ವಿರಾಟ್ ಕೊಹ್ಲಿ- ಅನುಷ್ಕಾ ಶರ್ಮಾ ಜೋಡಿ ಬಳಿಕ ಕ್ರಿಕೆಟ್ ಹಾಗೂ ಬಾಲಿವುಡ್ ಸಂಬಂಧ ಮುಂದುವರಿದಿದೆ. ಈ ಲಿಸ್ಟ್‌ಗೆ ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ಸ್ಟಾಂಕೋವಿಚ್ ಸೇರಿಕೊಂಡಿರುವುದು ವಿಶೇಷವಾಗಿದೆ. ಹಾರ್ದಿಕ್ ಪಾಂಡ್ಯ ತಮ್ಮ ಇನ್ಸ್ಟಾಗ್ರಾಂ ಖಾತೆ ಮೂಲಕ ಎಂಗೇಜ್‌ಮೆಂಟ್ ಬಹಿರಂಗ ಪಡಿಸಿದ್ದಾರೆ.  ಈ ಜೋಡಿ ಈಗಾಗಲೇ ಹಲವು ಬಾರಿ ಜೊತಯಾಗಿ ಕಾಣಿಸಿಕೊಂಡಿತ್ತು. ಆದರೆ ಎಲ್ಲೂ ಕೂಡ ಪ್ರೀತಿ ಕುರಿತು ಹೇಳಿಕೊಂಡಿರಲಿಲ್ಲ. ಇದೀಗ ಎಂಗೇಜ್ಮೆಂಟ್ ಮೂಲಕ ಅಚ್ಚರಿ ನೀಡಿದ್ದಾರೆ. ಇದೀಗ ಅಭಿಮಾನಿಗಳು ಪಾಂಡ್ಯ ಹಾಗೂ ನತಾಶ ಮದುವೆ ಯಾವಾಗ ಅನ್ನೋ ಪ್ರಶ್ನೆಗಳ ಸುರಿಮಳೆ ಗೈದಿದ್ದಾರೆ. ಸದ್ದಿಲ್ಲದೇ ಎಂಗೇಜ್ ಮೆಂಟ್ ಆಗಿರುವುದು ನೋಡಿ ಶಾಕ್ ಆಗಿರುವ ಅಭಿಮಾನಿಗಳು ಮದುವೆಯು ಕೂಡ ಸದ್ದಿಲ್ಲದೇ ನಡೆದು ಹೋಗುವುದೇ ಎಂದು ಯೋಚಿಸುವಂತಾಗಿದೆ.

మరింత సమాచారం తెలుసుకోండి: