ಉತ್ತರ ಕರ್ನಾಟಕದಲ್ಲಿ ಜಲಪ್ರಯಳಯವೇ ಉಂಟಾಗಿದೆ. ಒಂದು ಕಡೆ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆ. ಮತ್ತೊಂದೆಡೆ ಬಹುತೇಕ ಡ್ಯಾಮ್‌ಗಳಿಂದ ಹೊರಬಂದ ನೀರು ಇದೀಗ ಅನೇಕ ಗ್ರಾಮಗಳನ್ನೆ ಬಲಿ ತೆಗೆದುಕೊಂಡಿದೆ. ಹೌದು ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ, ಹಾಗೂ ಹೈದರಾಬಾದ್ ಕರ್ನಾಟಕ ಇಲ್ಲಿನ ಜನರ ಬದುಕು ಮೂರಾಬಟ್ಟೆಯಾಗಿದೆ. ಹೀಗಾಗಿ ಜಲಪ್ರಳಯದಿಂದ ಜನರು ರೋಸಿ ಹೋಗಿದ್ದಾರೆ. 

ಉತ್ತರ ಕರ್ನಾಟಕದಲ್ಲಿ ಹರಿಯುತ್ತಿರುವ ಕೃಷ್ಣಾ, ದೂದ್‌ ಗಂಗಾ, ವೇದಗಂಗಾ, ಘಟಪ್ರಭಾ, ಮಲಪ್ರಭಾ, ತುಂಗಭದ್ರಾ, ಕಾಳಿ ಅಘನಾಶಿನಿ ಸೇರಿದಂತೆ ಹತ್ತಕ್ಕಿಂತ ಹೆಚ್ಚು ನದಿಗಳು ಅಪಾಯದ ಮಟ್ಡ ಮೀರಿ ಹರಿಯುತ್ತಿವೆ. ಇದೇ ಕಾರಣಕ್ಕೆ 55ಕ್ಕಿಂತ ಹೆಚ್ಚು ಸೇತುವೆಗಳು ಮುಳುಗಡೆ ಆಗಿವೆ. ಅಲ್ಲದೇ ಸಮಾರು ಒಂಭತ್ತು ಸಾವಿರಕ್ಕಿಂತ ಹೆಚ್ಚು ಜನರನ್ನು ಸ್ಥಳಾಂತರ ಮಾಡಲಾಗಿದೆ. ಜನರಿಗೆ ಸಂಚಾರದಲ್ಲಿ ತೊಂದರೆ ಆಗಬಾರದು ಎಂದು ಪುಣೆ-ಬೆಂಗಳೂರು, ವಿಜಯಪುರ-ಧಾರವಾಡ ರಸ್ತೆ ಸಂಚಾರ ಮತ್ತು ಕರ್ನಾಟಕ ಗೋವಾ ರೈಲು ಸಂಚಾರವನ್ನು ಬಂದ್ ಮಾಡಲಾಗಿದೆ. 

ಇನ್ನು ನಮ್ಮ ಪಕ್ಕದ ರಾಜ್ಯದಲ್ಲಿ ಉಂಟಾದ ಮಳೆಗೆ ನಮ್ಮ ರಾಜ್ಯದ ಬೆಳಗಾವಿಗೆ ಬೆಳಗಾವಿಯೇ ನಲುಗಿ ಹೋಗಿದೆ. ಹೌದು ಬೆಳಗಾವಿ ಜಿಲ್ಲೆಯಲ್ಲಿ ಮಳೆ ಆತಂಕ ಅಷ್ಟೇ ಅಲ್ಲದೇ ಜೀವಹಾನಿಯನ್ನು ಸೃಷ್ಟಿಸಿದೆ. ಬೆಳಗಾವಿ ಒಂದೇ ಜಿಲ್ಲೆಯ ಸುಮಾರು 35ಕ್ಕಿಂತ ಹೆಚ್ಚು ಸೇತುವೆ ಸಂಪೂರ್ಣ ಮುಳುಗಿ ಹೋಗಿವೆ. 140ಕ್ಕೂ ಹೆಚ್ಚು ಸೇತುವೆಗಳ ಮೇಲೆ ನೀರು ಹರಿಯುತ್ತಿದೆ. ಅಲ್ಲದೇ ಸುಮಾರು 8000 ಕ್ಕಿಂತ ಹೆಚ್ಚು ಜನರನ್ನು ಇಲ್ಲಿಂದ ಬೇರೆ ಕಡೆಗೆ ಸ್ಥಳಾಂತರ ಮಾಡಲಾಗಿದೆ. ಇಲ್ಲಿಯತನಕ ಸುಮಾರು ಐದು ಜನರು ಮೃತಪಟ್ಟಿದ್ದಾರೆ. ಇನ್ನು ಅನೇಕರು ಜೀವಕ್ಕೆ ತೊಂದರೆ ಆಗಿ ಸಾವು ಬದುಕಿನ ಮಧ್ಯ ಹೋರಾಟ ಮಾಡುತ್ತಿದ್ದಾರೆ. 

ಇಲ್ಲಿಯನನತಕ ಸಮಾರು 5 ಜಾನುವಾರುಗಳು ಮೃತಪಟ್ಟಿವೆ. ಇನ್ನೂ ಅನೇಕ ಜಾನುವಾರುಗಳು ಜೀವಭಯದಲ್ಲಿ ಒದ್ದಾಡುತ್ತಿವೆ. ಬೆಳಗಾವಿ ಜಿಲ್ಲೆಯಲ್ಲಿ ಒಂದೇ ದಿನದಲ್ಲಿ 600 ಮನೆಗಳಿಗೆ ಹಾನಿಯಾಗಿದೆ. ಅಲ್ಲದೇ ಸುಮಾರು 90000 ಹೆಕ್ಟರ್ ಪ್ರದೇಶ ಜಲಾವೃತವಾಗಿದೆ. 1000 ಕೀ.ಮೀ ದೂರದ ರಸ್ತೆ ಕಿತ್ತು ಹೋಗಿದೆ. ಅಥಣಿ, ಕಾಗವಾಡ, ರಾಯಬಾಗ, ಚಿಕ್ಕೋಡಿ, ನಿಪ್ಪಾಣಿ, ಗೋಕಾಕ, ಖಾನಾಪುರ, ಮೂಡಲಗಿ, ಹುಕ್ಕೇರಿ ತಾಲೂಕುಗಳ 96 ಹಳ್ಳಿಗಳು ಪ್ರವಾಹ ಬಾಧಿತವಾಗಿವೆ.

ಇನ್ನು ಯಾವ ಯಾವ ಬ್ಯಾರೇಜ್ ನಿಂದ ಎಷ್ಟು ಎಷ್ಟು ನೀರು ಹೊರ ಬಿಡಲಾಗಿದೆ ಅನ್ನೋದರ ಪಟ್ಟಿ ಇಲ್ಲಿದೆ. ರಾಜಾಪುರ ಬ್ಯಾರೇಜ್‌- 2,52,585 ಕ್ಯೂಸೆಕ್‌, ದೂಧಗಂಗಾ- 42,240 ಕ್ಯೂಸೆಕ್‌, ಹೀಗೆ ಕೃಷ್ಣಾ ನದಿಗೆ ಒಟ್ಟು 2,94,825 ಕ್ಯೂಸೆಕ್‌ ನೀರು ಹರಿದು ಬಂದಿದೆ. ಒಟ್ಟು ಉತ್ತರ ಕರ್ನಾಟಕದ ಜನಜೀವನ ಅಸ್ತವ್ಯಸ್ಥವಾಗಿದೆ. ಈ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಇದೆ. 


మరింత సమాచారం తెలుసుకోండి: