ಸ್ಯಾಂಡಲ್ ವುಡ್ ನ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಹೊಚ್ಚ ಹೊಸ ಚಿತ್ರವೊಂದು ಮುಂದಿನ ವರ್ಷ ಸೆಟ್ಟೇರಲಿದೆ. ಆ ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೋ ಮತ್ತೊಮ್ಮೆ ಮಿಂಚಲಿದ್ದಾರೆ ಎಂಬ ಸುದ್ದಿ ಗಾಂಧೀ ನಗರದಲ್ಲಿ ಬಿಸಿ ಬಿಸಿಯಾಗಿ ಚರ್ಚೆಯಾಗುತ್ತಿದೆ. ಶ್ರೀಮುರಳಿ ನಾಯಕನಟನಾಗಿದ್ದ ಮಫ್ತಿ ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಭೈರತಿ ರಣಗಲ್ ಪಾತ್ರ ಪೋಷಿಸಿದ್ದರು. ಇದೀಗ ಇದೇ ಹೆಸರಿನ ಚಿತ್ರಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು 2020ಕ್ಕೆ ಸಿನಿಮಾ ಸೆಟ್ಟೇರಲಿದೆ.
 
ಸ್ಯಾಂಡಲ್‌ವುಡ್‌ನಲ್ಲಿ ಸಿಕ್ಕಾಪಟ್ಟೆ ಬಿಝಿಯಾಗಿರುವ ನಟ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್‌ ಅವರ ಬಹು ನೀರಿಕ್ಷೆಯ ಚಿತ್ರ 'ಭೈರತಿ ರಣಗಲ್‌' ಸಿನಿಮಾ 2020ಕ್ಕೆ ಆರಂಭವಾಗಲಿದೆ. ಈ ಚಿತ್ರಕ್ಕೆ ಮಫ್ತಿ ಚಿತ್ರದ ನಿರ್ದೇಶಕ ನರ್ತನ್ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ. 2017ರಲ್ಲಿಬಿಡುಗಡೆಯಾಗಿದ್ದ ಮಫ್ತಿ ಸಿನಿಮಾದ ಭೈರತಿ ರಣಗಲ್‌ ಪಾತ್ರ ಸಿಕ್ಕಾಪಟ್ಟೆ ಹೈಪ್‌ ಕ್ರಿಯೇಟ್‌ ಮಾಡಿತ್ತು. ಅದೇ ಹೆಸರಿನ ಸಿನಿಮಾ ಸೆಟ್ಟೇರುತ್ತೆ ಎಂದು ಆಗಲೇ ಸುದ್ದಿಯಾಗಿತ್ತು.

ಅದಕ್ಕೆ ಈಗ ಕಾಲ ಕೂಡಿ ಬಂದಿದ್ದು, 2020ಕ್ಕೆ ಚಿತ್ರೀಕರಣ ಆರಂಭವಾಗುತ್ತದೆ. ವಿಶೇಷತೆ ಏನಪ್ಪಾ ಎಂದರೆ ಇನ್ನು ಈ ಸಿನಿಮಾ ಶಿವರಾಜ್‌ಕುಮಾರ್‌ ಅವರ 125ನೇ ಚಿತ್ರವಾಗಲಿದೆ. ನರ್ತನ್‌ ಸದ್ಯ ಮಫ್ತಿಯ ತಮಿಳು ವರ್ಷನ್‌ ನಿರ್ದೇಶನದಲ್ಲಿ ಬಿಝಿಯಾಗಿದ್ದು, ಶಿವರಾಜ್‌ಕುಮಾರ್‌ ಭಜರಂಗಿ-2ನಲ್ಲಿ ತೊಡಗಿಸಿಕೊಂಡಿದ್ದಾರೆ. ಇದೆಲ್ಲ ಈ ವರ್ಷದ ಕೊನೆಗೆ ಮುಗಿಯುತ್ತದೆ.


ಒಟ್ಟಿನಲ್ಲಿ ಬಹು ನಿರೀಕ್ಷೆಯ ಭೈರತಿ ರಣಗಲ್‌ನ್ನು ಶಿವರಾಜ್‌ಕುಮಾರ್‌ ಅಭಿಮಾನಿಗಳು 2020ರ ಕೊನೆಯ ಹೊತ್ತಿಗೆ ಕಣ್ತುಂಬಿಕೊಳ್ಳಬಹುದು. ಶ್ರೀಮುರಳಿ ಮತ್ತು ಶಿವರಾಜ್‌ಕುಮಾರ್‌ ಒಟ್ಟಿಗೆ ಕಾಣಿಸಿಕೊಂಡಿದ್ದ ಚಿತ್ರ ಮಫ್ತಿ. ಸೂಪರ್‌ ಹಿಟ್‌ ಆಗಿದ್ದ ಚಿತ್ರದಲ್ಲಿ ಶಿವಣ್ಣ ಮಾಡಿದ್ದ ಭೈರತಿ ರಣಗಲ್‌ ಪಾತ್ರ ಹೆಚ್ಚು ಪ್ರಶಂಸೆಗೊಳಗಾಯಿತು. ಈಗ ನರ್ತನ್‌ ಇದೇ ಪಾತ್ರವನ್ನು ಇಟ್ಟುಕೊಂಡು ಹೊಸ ಸಿನಿಮಾಗೆ ಸ್ಕ್ರಿಪ್ಟ್‌ ಬರೆದಿದ್ದಾರೆ. ಇದು ಶಿವರಾಜ್‌ಕುಮಾರ್‌ಗೆ ಬಹಳ ಇಷ್ಟವಾಗಿ ತಾವೇ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಹಲವು ವರ್ಷಗಳಿಂದ ಚಿತ್ರ ನಿರ್ಮಾಣ ಮಾಡಬೇಕೆಂದಿದ್ದ ಶಿವರಾಜ್‌ ಕುಮಾರ್‌ ಅವರಿಗೆ ಇದು ಸೂಕ್ತ ಚಿತ್ರ ಎನ್ನಲಾಗಿದೆ.


మరింత సమాచారం తెలుసుకోండి: