ಮೊದಲೇ ಕುಸಿದಿದ್ದ ಭಾರತದ ಜಿಡಿಪಿ ದರ ದೇಶಕ್ಕೆ ಕೊರೋನಾ ವಕಕರಿಸಿದ ಮೇಲಂತೂ ದಿನದಿಂದ ದಿನಕ್ಕೆ ಜಿಡಿಪಿ ದರ ಕುಸಿಯುತ್ತಲೇ ಇದೆ. ಇದರ ಜೊತಗೆ ಲಾಕ್ ಡೌನ್ ಸಮಯದಲ್ಲಿ ದೇಶದ ಎಲ್ಲಾ ವ್ಯವಹಾರಗೂ ಕೂಡ ಸ್ಥಗಿತಗೊಂಡ ಹಿನ್ನಲೆಯಲ್ಲಿ ಜಿಡಿಪಿ ದರ ಮತ್ತಷ್ಟು ಕುಸಿಯಿತು. ಈ ಕುರಿತು ಅನೇಕ ಅರ್ಥಶಾಸ್ತ್ರಜ್ಞರು , ಉದ್ಯಮಿಗಳು ಈ ಕುರಿತು ಸರ್ಕಾರವನ್ನು ಎಚ್ಚರಿಸಿದ್ದರು. ಅದೇ ರೀತಿ ಇನ್ಪೋಸಿಸ್ ಸಹ ಸಂಸ್ಥಾಪರೂ ಈ ಬಗ್ಗೆ ಎಚ್ಚರವನ್ನು ನೀಡಿದ್ದಾರೆ.
ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ದೇಶದ ಜಿಡಿಪಿ ದರ 1947ರ ಬಳಿಕದ ಅತ್ಯಂತ ಕನಿಷ್ಟ ಮಟ್ಟಕ್ಕೆ ಕುಸಿಯುವ ಸಾಧ್ಯತೆಯಿದೆ. ಆರ್ಥಿಕತೆಗೆ ಪುನಶ್ಚೇತನ ನೀಡಬೇಕು. ಜನತೆ ಕೊರೋನ ಸೋಂಕಿನೊಂದಿಗೇ ಬದುಕಲು ಸಿದ್ಧರಾಗಿರಬೇಕು ಎಂದು ಇನ್ಫೋಸಿಸ್‌ನ ಸಹಸಂಸ್ಥಾಪಕ ಎನ್‌ಆರ್ ನಾರಾಯಣ ಮೂರ್ತಿ ಹೇಳಿದ್ದಾರೆ.
ದೇಶದ ಅರ್ಥವ್ಯವಸ್ಥೆಯ ಪ್ರತೀ ಕ್ಷೇತ್ರವೂ ಸಂಪೂರ್ಣವಾಗಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡುವ ಹೊಸ ವ್ಯವಸ್ಥೆಯನ್ನು ಆರಂಭಿಸಬೇಕು ಎಂದವರು ಹೇಳಿದ್ದಾರೆ.
ವೀಡಿಯೊ ಕಾನ್ಫರೆನ್ಸ್ ಮೂಲಕ ನಡೆದ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಯಂಡ್ ಟೆಕ್ನಾಲಜೀಸ್‌ನ 16ನೇ ವಾರ್ಷಿಕ ಸಮಾರಂಭದಲ್ಲಿ 'ಲೀಡಿಂಗ್ ಇಂಡಿಯಾಸ್ ಡಿಜಿಟಲ್ ರೆವೊಲ್ಯೂಷನ್' ಎಂಬ ವಿಷಯದ ಬಗ್ಗೆ ಅವರು ಮಾತನಾಡಿದರು. ಜಾಗತಿಕ ಜಿಡಿಪಿ ಕುಸಿದಿದೆ. ಜಾಗತಿಕ ವ್ಯಾಪಾರವೂ ಕುಸಿದಿದೆ. ಜಾಗತಿಕ ಪ್ರವಾಸ ಬಹುತೇಕ ಕಾಣೆಯಾಗಿದೆ. ಜಾಗತಿಕ ಜಿಡಿಪಿ 5%ದಿಂದ 10%ದ ಮಧ್ಯೆ ಇರುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ.
ಕೊರೋನಕ್ಕೆ ಲಸಿಕೆ ಸಿದ್ಧವಾಗಿಲ್ಲ, ಕೊರೋನ ಗುಣಪಡಿಸಲು ಆಗುವುದಿಲ್ಲ ಮತ್ತು ಅರ್ಥವ್ಯವಸ್ಥೆಯನ್ನು ಸ್ಥಗಿತಗೊಳಿಸಲು ಆಗುವುದಿಲ್ಲ ಎಂಬ ಮೂರು ಕಾರಣಗಳಿಂದಾಗಿ, ಲಾಕ್‌ಡೌನ್‌ನ ಮೊದಲ ದಿನದಿಂದಲೇ ಜನತೆ ಕೊರೋನದೊಂದಿಗೇ ಬದುಕಲು ಸಿದ್ಧರಾಗಿರಬೇಕಿತ್ತು. ಕೊರೋನ ಲಸಿಕೆ ಸಿದ್ಧವಾದರೂ ಅದು ದೇಶದ ಜನತೆಗೆ ಲಭ್ಯವಾಗಲು ಕನಿಷ್ಟ 6ರಿಂದ 9 ತಿಂಗಳ ಅಗತ್ಯವಿದೆ. ಆ ಬಳಿಕವೂ ದಿನಕ್ಕೆ 10 ಮಿಲಿಯನ್ ಜನರಿಗೆ ಲಸಿಕೆ ಹಾಕಿದರೂ ದೇಶದ ಎಲ್ಲಾ ಪ್ರಜೆಗಳಿಗೆ ಲಸಿಕೆ ನೀಡಲು 140 ದಿನ ಬೇಕಾಗುತ್ತದೆ ಎಂದು ನಾರಾಯಣ ಮೂರ್ತಿ ಹೇಳಿದರು.
ದೇಶದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಹಿಂದಿನಿಂದಲೂ ಸಾಕಷ್ಟು ಅನುದಾನ ದೊರಕುತ್ತಿರಲಿಲ್ಲ. ಕೊರೋನ ಲಸಿಕೆ ಸಿದ್ಧವಾದ ಬಳಿಕ ಪ್ರತಿಯೊಬ್ಬರಿಗೂ ಲಸಿಕೆ ನೀಡುವ ಉಪಕ್ರಮಕ್ಕೆ ಪೂರಕವಾಗಿ ಆರೋಗ್ಯ ಕ್ಷೇತ್ರಕ್ಕೆ ಮೂಲಸೌಕರ್ಯ ಒದಗಿಸಬೇಕು. ಸುರಕ್ಷಿತ ಅಂತರ ಪಾಲನೆ, ಮಾಸ್ಕ್ ಧಾರಣೆ ಕಡ್ಡಾಯಗೊಳಿಸಬೇಕು. ದೇಶದ ಅರ್ಥವ್ಯವಸ್ಥೆಯನ್ನು ಹಳಿಗೆ ತರಲು, ತಮ್ಮ ಊರಿಗೆ ಮರಳಿರುವ ವಲಸೆ ಕಾರ್ಮಿಕರನ್ನು ಮತ್ತೆ ವಾಪಾಸು ಕರೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
click and follow Indiaherald WhatsApp channel