ದಿಂಡಿಗಲ್: ಒಂದಾ ಎರಡು, ಕರ್ನಾಟಕ ಕಾಲಿಟ್ಟ ಕಡೆಗಳಲ್ಲೆಲ್ಲಾ  ಪ್ರಶಸ್ತಿ ಬಾಚಿಕೊಳ್ಳುವ ಹಾಟ್ ಫೇವರೇಟ್ ತಂಡ ಇದೀಗ ನೂತನ ರಣಜಿ ಪಂದ್ಯ ದಲ್ಲಿ ಕರ್ನಾಟಕ ಸಾಧಾರಣ ಆರಂಭ ಕಂಡಿದೆ. ಆತಿಥೇಯ ತಮಿಳುನಾಡು ವಿರುದ್ಧ ದಿಂಡಿಗಲ್‌ನಲ್ಲಿ ಆರಂಭಗೊಂಡ ಮುಖಾಮುಖೀಯಲ್ಲಿ 6 ವಿಕೆಟಿಗೆ 259 ರನ್‌ ಗಳಿಸಿ ಸಾಧಾರಣ ಪ್ರಾರಂಭ ಪಡೆದುಕೊಂಡಿದೆ. 
 
ಇತ್ತೀಚೆಗೆ ಭರ್ಜರಿ ಬ್ಯಾಟ್ ಬೀಸುತ್ತಿರುವ ದೇವದತ್ತ ಪಡಿಕ್ಕಲ್‌ (78 ರನ್‌) ಹಾಗೂ ಪವನ್‌ ದೇಶಪಾಂಡೆ (65 ರನ್‌) ಅರ್ಧ ಶತಕ ಬಾರಿಸಿ ತಂಡದ ನೆರವಿಗೆ ನಿಂತರು. ಆರಂಭಕಾರ ಮಾಯಾಂಕ್‌ ಅಗರ್ವಾಲ್‌ ಕೊಡುಗೆ 43 ರನ್‌. ಶ್ರೇಯಸ್‌ ಗೋಪಾಲ್‌ 35 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದು, ಇವರೊಂದಿಗೆ ಖಾತೆ ತೆರೆಯದ ಡೇವಿಡ್‌ ಮಥಾಯಿಸ್‌ ಕ್ರೀಸಿನಲ್ಲಿ ಅಬ್ಬರಿಸಿದ ಸಿದ್ದರಾಗಿದ್ದಾರೆ. 
 
ಇನ್ನು ಇನ್ನಿಂಗ್ಸ್‌ ಆರಂಭಿಸಿದ ನಿಶ್ಚಲ್‌ ಕೇವಲ 4 ರನ್‌ ಮಾಡಿ ಕೆ. ವಿಘ್ನೇಶ್‌ಗೆ ಬೌಲ್ಡ್‌ ಆಗಿ ಹೊರ ನಡೆದಾಗ ಕರ್ನಾಟಕ ಆರಮಭಿಕ ಆಘಾತಕ್ಕೆ ಸಿಲುಕಿತು. ಆದರೆ ಅಗರ್ವಾಲ್‌-ಪಡಿಕ್ಕಲ್‌ 2ನೇ ವಿಕೆಟಿಗೆ 67 ರನ್‌ ಒಟ್ಟುಗೂಡಿಸಿ ನೆರವಿಗೆ ನಿಂತರು. ಸ್ಕೋರ್‌ 71ರ ತನಕ ಸಾಗಿತು. ಆಗ ಅರ್ಧ ಶತಕದ ಸನಿಹ ಬಂದಿದ್ದ ಅಗರ್ವಾಲ್‌ ವಿಕೆಟ್‌ ಬಿತ್ತು (43 ರನ್‌, 78 ಎಸೆತ, 7 ಬೌಂಡರಿ, 1 ಸಿಕ್ಸರ್‌). ಮನೀಷ್‌ ಪಾಂಡೆ ಅನುಪಸ್ಥಿತಿಯಲ್ಲಿ ನಾಯಕನಾಗಿರುವ ಕರುಣ್‌ ನಾಯರ್‌ (8) ಇಲ್ಲದ ರನ್ನಿಗಾಗಿ ಪ್ರಯತ್ನಿಸಿ ವಿಜಯ್‌ ಶಂಕರ್‌ ನಡೆಸಿದ ಅದ್ಭುತ ರನೌಟ್‌ಗೆ ಬಲಿಯಾದರು. 88ಕ್ಕೆ 3ನೇ ವಿಕೆಟ್‌ ಉರುಳಿತು. 
 
ತಮಿಳುನಾಡು ನಾಯಕ ವಿಜಯ್‌ ಶಂಕರ್‌, ಅನುಭವಿ ಸ್ಪಿನ್ನರ್‌ ಆರ್‌. ಅಶ್ವಿ‌ನ್‌ ಕರ್ನಾಟಕದ ರನ್‌ ಗಳಿಕೆಗೆ ನಿಯಂತ್ರಣ ಹೇರಿದರು. 33ಕ್ಕೆ 2 ವಿಕೆಟ್‌ ಕಿತ್ತ ಎಂ. ಸಿದ್ಧಾರ್ಥ್ ತಮಿಳುನಾಡಿನ ಯಶಸ್ವಿ ಬೌಲರ್‌. ಉಳಿದಂತೆ ಕೆ. ವಿಘ್ನೇಶ್‌, ಆರ್‌. ಅಶ್ವಿ‌ನ್‌, ಬಾಬಾ ಅಪರಾಜಿತ್‌ ಒಂದೊಂದು ವಿಕೆಟ್‌ ಪಡೆದರು.
 
ಸಂಕ್ಷಿಪ್ತ ಸ್ಕೋರ್‌: ಕರ್ನಾಟಕ-6 ವಿಕೆಟಿಗೆ 259 (ಪಡಿಕ್ಕಲ್‌ 78, ದೇಶಪಾಂಡೆ 65, ಅಗರ್ವಾಲ್‌ 43, ಗೋಪಾಲ್‌ ಬ್ಯಾಟಿಂಗ್‌ 35, ಸಿದ್ಧಾರ್ಥ್ 33ಕ್ಕೆ 2).

మరింత సమాచారం తెలుసుకోండి: