ನಟ ಶಿವರಾಜ್ ಕುಮಾರ್ ಅವರು ಡಾ. ಶಿವರಾಜ್ ಕುಮಾರ್ ಆಗಿ ಇಂದಿಗೆ ಸರಿಯಾಗಿ 5 ವರ್ಷವಾಯ್ತು. ಜೂನ್ 21 2014 ರಲ್ಲಿಯೇ ನಟ ಶಿವರಾಜ್ ಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿತ್ತು. ನೂರು ಸಿನಿಮಾ ಪೂರೈಸಿದ ಹಿನ್ನೆಲೆಯಲ್ಲಿ ಬಳ್ಳಾರಿಯ ಕೃಷ್ಣದೇವರಾಯ ವಿಶ್ವವಿದ್ಯಾಲಯ ಡಾಕ್ಟರೇಟ್ ನೀಡಿತ್ತು.
ನಿಮಗ ಗೊತ್ತಿರಲಿ. ಕನ್ನಡದ ಕೆಲವೇ ನಟರು ಡಾಕ್ಟರೇಟ್ ಪಡೆದಿದ್ದು, ಅದರಲ್ಲಿ ನಟ ಶಿವರಾಜ್ ಕುಮಾರ್ ಕೂಡ ಒಬ್ಬರು. ಮಾಸ್, ಕ್ಲಾಸ್ ಸಿನಿಮಾಗಳ ಜೊತೆ ಕಾದಂಬರಿ ಆಧಾರಿತ ಸಿನಿಮಾಗಳನ್ನು ಶಿವರಾಜ್ ಕುಮಾರ್ ಮಾಡಿದ್ದರು.
ಅಷ್ಟೇ ಅಲ್ಲದೇ, ಆನಂದ, ಜನುಮದ ಜೋಡಿ, ಹೃದಯ ಹೃದಯ, ಹಗಲು ವೇಷ, ಚಿಗುರಿದ ಕನಸು, ಓಂ, ಜೋಗಿ, ನಮ್ಮೂರ ಮಂದಾರ ಹೂವೆ, ತವರಿಗೆ ಬಾ ತಂಗಿ, ಮಫ್ತಿ ಇವು ಶಿವರಾಜ್ ಕುಮಾರ್ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿವೆ.
click and follow Indiaherald WhatsApp channel