ವಿಶ್ವದಾದ್ಯಂತ ತನ್ನ ವ್ಯಾಪ್ತಿಯನ್ನು ಆವರಿಸಿ ಸಾವಿರಾರು ಜನರ ಪ್ರಾಣತೆಗೆಯುತ್ತಿರುವ ಕೊರೋನ ವೈರಸ್ ಅನ್ನ ತಡೆಯಲು ವಿಶ್ವದ ಎಲ್ಲಾ ರಾಷ್ಟ್ರಗಳು ಲಾಕ್ ಡೌನ್ ಘೋಷಣೆಯನ್ನು ಮಾಡಲಾಗಿದೆ. ಅದೇ ರೀತಿ ಭಾರತದಲ್ಲೂ ಊಡ ಕೊರೋನಾ ವೈರಸ್ ಅನ್ನು ತಡೆಯಲು ಮೊದಲು ೨೧ದಿನಗಳ ಕಾಲ ಲಾಕ್ ಡೌನ್ ಮಾಡಲಾಗಿತ್ತು. ಆದರೆ ಲಾಕ್ ಡೌನ್ ತೆಗೆದರೆ ಮತ್ತಷ್ಟು ಹೆಚ್ಚಾಗುವ ಸಂಭವವಿದ್ದು ಇನ್ನೂ ೧೫ದಿನಗಳ ಲಾಕ್ ಡೌನ್ ಅನ್ನು ಮುಂದುವರಿಸಲಾಗುವುದು ಈ ಸಂದರ್ಭದಲ್ಲಿ ಯಾವ ಯಾವ ವಸ್ತುಗಳು ದೊರೆಯುತ್ತದೆ ಯಾವುವು ದೊರೆಯುವುದಿಲ್ಲ ಎಂಬುದರ ಡೀಟೇಲ್ಸ್ ಇಲ್ಲಿದೆ ನೋಡಿ.
ಕೋರೋನಾ ಸೋಂಕು ತಡೆಯಲು ಲಾಕ್ ಡೌನ್ ಜಾರಿ ಮಾಡಿದ್ದರೂ, ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಲಾಕ್ ಡೌನ್ ಮುಂದುವರೆಸಲಾಗುವುದು. ಏಪ್ರಿಲ್ ೩೦ರ ವರೆಗೆ ಲಾಕ್ಡೌನ್ ಮುಂದುವರೆಯಲಿದ್ದು, ಕೊರೋನಾ ಪಾಸಿಟಿವ್ ಪ್ರಕರಣ ಕಂಡು ಬಂದ ಪ್ರದೇಶಗಳಲ್ಲಿ ಮಾತ್ರವಲ್ಲದೇ ಎಲ್ಲ ಜಿಲ್ಲೆಗಳಲ್ಲಿಯೂ ನಿರ್ಬಂಧಗಳನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ. ಈಗಾಗಲೇ ಎಲ್ಲ ಪ್ರಮುಖ ರಸ್ತೆ ಸಂಪರ್ಕ ರಸ್ತೆಗಳನ್ನು ಬಂದ್ ಮಾಡಲು ಸೂಚನೆ ನೀಡಲಾಗಿದೆ.
ಮೀನುಗಾರಿಕೆ, ಕೃಷಿ ಚಟುವಟಿಕೆ ಹೊರತುಪಡಿಸಿ ಎಲ್ಲಾ ವ್ಯಾಪಾರ ವಾಣಿಜ್ಯ ವಹಿವಾಟು ಬಂದ್ ಮಾಡಲಾಗುವುದು. ಅಗತ್ಯ ವಸ್ತು ಖರೀದಿಗೂ ಕಠಿಣ ನಿರ್ಬಂಧವಿರುತ್ತದೆ. ಅನಗತ್ಯವಾಗಿ ತಿರುಗಾಡುವವರಿಗೆ ಬಿಸಿ ಮುಟ್ಟಿಸಲು ಪೊಲೀಸರು ಸಜ್ಜಾಗಿದ್ದಾರೆ.
ಲಾಕ್ ಡೌನ್ ಸಂದರ್ಭದಲ್ಲಿ ಲಭ್ಯವಿರುವ ಸೌಲಭ್ಯ:
ಔಷಧಿ ಅಂಗಡಿ, ಆಂಬುಲೆನ್ಸ್ ಸೇವೆ, ಹಾಲು, ಪೆಟ್ರೋಲ್, ಡೀಸೆಲ್, ಜಲಮಂಡಳಿ ಸೇವೆ, ದಿನಸಿ, ತರಕಾರಿ, ಮಾರಾಟ, ಹಣ್ಣು ಮಾರಾಟ, ಕೃಷಿ ಚಟುವಟಿಕೆ. ತುರ್ತು ಅಗತ್ಯವಿರುವ ಕಾರ್ಖಾನೆಗಳ ಓಪನ್ ಮಾಡಲು ಸೂಚನೆ ನೀಡಲಾಗಿದೆ. ಅಗತ್ಯ ಸೇವೆ ನೌಕರರ ಸಂಚಾರಕ್ಕೆ ಅವಕಾಶವಿದೆ.
ಏನಿರಲ್ಲ..?
ಅಂತರ ಜಿಲ್ಲಾ ಗಡಿಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗುವುದು. ಖಾಸಗಿ ವಾಹನಗಳ ಸಂಚಾರ ಸಂಪೂರ್ಣ ಬಂದ್ ಮಾಡಲಾಗುವುದು. ಸಿನಿಮಾ ಮಂದಿರ, ಬಾರ್, ಮಾಲ್ ಏಪ್ರಿಲ್ 30 ರ ವರೆಗೆ ಬಂದ್ ಆಗಲಿವೆ. ಇನ್ನು ಶಾಲೆ-ಕಾಲೇಜುಗಳಿಗೆ ಈಗಾಗಲೇ ಘೋಷಣೆಯಾಗಿರುವ ರಜೆ ಮುಂದುವರೆಯಲಿದೆ. ಮೆಟ್ರೋ, ರೈಲು, ಬಸ್ ಸಂಚಾರ ಕೂಡ ಸ್ಥಗಿತವಾಗಲಿದೆ.
ಹಾಟ್ ಸ್ಪಾಟ್ ಎಂದು ಗುರುತಿಸಲಾಗಿರುವ ಪ್ರದೇಶಗಳನ್ನು ಸಂಪೂರ್ಣ ಸೀಲ್ ಡೌನ್ ಮಾಡಲಾಗುವುದು. ಉಳಿದಂತೆ ಸೋಂಕು ತಡೆಗೆ ಕೈಗೊಳ್ಳಬೇಕಾದ ಎಲ್ಲಾ ಕ್ರಮಗಳನ್ನು ಜಾರಿಗೊಳಿಸಿ ಕಠಿಣ ನಿರ್ಬಂಧ ಹೇರಲಾಗುವುದು ಎಂದು ಹೇಳಲಾಗಿದೆ.
click and follow Indiaherald WhatsApp channel