ಶಿವಮೊಗ್ಗ: ಪಕ್ಷ ಮೀರಿ ಬೆಳೆಯಲು ಹೋದವರು ಉದ್ಧಾರವಾಗಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ. ಕೆಳಗೆ ಬಿದ್ದಿರುವ ಸಿದ್ದರಾಮಯ್ಯ ಮೇಲೆ ಈಗ ಆಳಿಗೊಂದು ಕಲ್ಲಂತೆ ಒಬ್ಬಬ್ಬರೆ ನಾಯಕರು ತಿರುಗಿ ಬೀಳುತ್ತಿದ್ದಾರೆ. ಯಾವುದೇ ವ್ಯಕ್ತಿ ಪಕ್ಷದ ಬೆಂಬಲವಿಲ್ಲದೇ ಮೇಲೆರಲು ಸಾಧ್ಯವಿಲ್ಲ. ಸಂಘಟನೆ ಮೀರಿ ಯಾವುದೇ ವ್ಯಕ್ತಿ ಹೋದರು ಉದ್ದಾರ ಆಗಲು ಸಾಧ್ಯವಿಲ್ಲ. ಹಾಗೇ ಹೋದರೇ ನಾಶವಾಗುವುದು ಅವರೇ ಹೊರತು ವಿನಃ ಸಂಘಟನೆಯಲ್ಲ ಎಂದು ಗುಡುಗಿದ್ದಾರೆ. 


ಸಿದ್ದರಾಮಯ್ಯ ಸರ್ವಾಧಿಕಾರಿ ಧೋರಣೆಯಿಂದಲೇ ಆಡಳಿತ ಮಾಡಿಕೊಂಡು ಐದು ವರ್ಷ ಅಧಿಕಾರ ನಡೆಸಿದರು. ನನ್ನಿಂದಲೇ ಪಕ್ಷ ಅಧಿಕಾರಕ್ಕೆ ಬಂದಿದ್ದು ಎಂಬುದು ಅವರ ತಲೆಗೆ ಏರಿತ್ತು. ಸಂಘಟನೆಯನ್ನು ಮೀರಿ ಅವರು ಬೆಳೆಯಲು ಹೋಗಿ ಅವರು ಎಡವಿ ಬಿದ್ದಿದ್ದಾರೆ ಎಂದು ಸಚಿವ ಈಶ್ವರಪ್ಪ ತಿಳಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಮೇಲೆ ಈಗ ಮೂಲ ಕಾಂಗ್ರೆಸ್ಸಿಗರು ಸಿಟ್ಟಾಗಿದ್ದಾರೆ. ಇದಕ್ಕೆ ಕಾರಣ ಅವರು ಮಾಡಿದ ಕುತಂತ್ರ.

ಸಿಎಂ ಆಗಿದ್ದಾಗ ಅವರು ಹೇಗಿದ್ದರು ಎಂಬುದು ಇಂದು ಅವರು ಪಕ್ಷದೊಂದಿಗೆ ಹೊಂದಿರುವ ಸಂಬಂಧದಿಂದ ತಿಳಿಯುತ್ತಿದೆ. ಅವರ ಕುತಂತ್ರ ರಾಜಕೀಯದಿಂದ ಸರ್ಕಾರ ಬಿದ್ದು ಹೋಯಿತು ಎಂದರು. ಕೆಳಗೆ ಬಿದ್ದಿರುವ ಸಿದ್ದರಾಮಯ್ಯ ಮೇಲೆ ಈಗ ಆಳಿಗೊಂದು ಕಲ್ಲಂತೆ ಒಬ್ಬಬ್ಬರೆ ನಾಯಕರು ತಿರುಗಿ ಬೀಳುತ್ತಿದ್ದಾರೆ. ಯಾವುದೇ ವ್ಯಕ್ತಿ ಪಕ್ಷದ ಬೆಂಬಲವಿಲ್ಲದೇ ಮೇಲೆರಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಪಕ್ಷ ಕಟ್ಟಿ ಎಷ್ಟು ಸೀಟು ಪಡೆದಿದ್ದಾರೆ. ಯಡಿಯೂರಪ್ಪ ಪಕ್ಷ ಕಟ್ಟಿ ಎಷ್ಟು ಸೀಟು ಪಡೆದಿದ್ದಾರೆ ಎಂಬುದು ಗೊತ್ತಿದೆ. ಸಂಘಟನೆ ಮೀರಿ ಯಾವುದೇ ವ್ಯಕ್ತಿ ಹೋದರು ಉದ್ದಾರ ಆಗಲು ಸಾಧ್ಯವಿಲ್ಲ.

ಹಾಗೇ ಹೋದರೇ ನಾಶವಾಗುವುದು ಅವರೇ ಹೊರತು ವಿನಃ ಸಂಘಟನೆಯಲ್ಲ ಎಂದಿದ್ದಾರೆ. ಆರ್​ಎಸ್​ಎಸ್​ ಮಾದರಿಯಲ್ಲಿ ಯುಟಿ ಖಾದರ್  ಸಂಘಟನೆ ಮಾಡಲುಹೊರಟಿದ್ದಾರೆ ಎಂಬ  ಪ್ರಶ್ನೆಗೆ ಈಶ್ವರಪ್ಪ ಉತ್ತರಿಸಿದ ಅವರು,  ಆರ್.ಎಸ್.ಎಸ್. ತರಾನಾದರೂ ಮಾಡಲಿ. ಏಳ್.ಎಸ್.ಎಸ್. ತರನಾದರೂ ಮಾಡಲಿ. ಆದರೆ, ಆ ಸಂಘಟನೆ ರಾಷ್ಟ್ರಭಕ್ತಿಗೆ ಆದ್ಯತೆ ನೀಡುವಂತಾಗಬೇಕು ಎಂದು ಸಲಹೆ  ನೀಡಿದರು.


మరింత సమాచారం తెలుసుకోండి: