ಕೊರೊನಾ ವೈರಸ್ ಅನ್ನು ತಡೆಗಟ್ಟುವ ಉದ್ದೇಶದಿಂದ ದೇಶದಲ್ಲಿ ಎರಡು ಹಂತದ ಲಾಕ್ ಡೌನ್ ಅನ್ನು ಘೋಷಣೆಯನ್ನು ಮಾಡಲಾಗಿದ್ದರೂ ಕೂಡ ಯಾವುದೇ ಪ್ರಯೋಜನವಾಗದೇ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ . ಪರಿಸ್ಥಿತಿ ಹೀಗಿರುವಾಗ ಮೇ 3 ಕ್ಕೆ ಲಾಕ್ ಡೌನ್ ಮುಗಿಯುತ್ತದೆ. ಇದಕ್ಕೆ ಸಂಬಂದ ಪಟ್ಟಂತೆ ಕೊರೊನಾ ಸೋಂಕನ್ನು ತಡೆಗಟ್ಟುವ ಕುರಿತಾಗಿ ಹಾಗೂ ಲಾಕ್ ಡೌನ್ ಸಡಿಲಿಕೆಯ ಕುರಿತಾಗಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಇಂದು ವಿಡಿಯೋ ಕಾನ್ಪರೆನ್ಸ್ ನಲ್ಲಿ ಮಾತನಾಡಿದ್ದಾರೆ. ಅಷ್ಟಕ್ಕೂ ಈ ಕಾನ್ಪರೆನ್ಸ್‌ನಲ್ಲಿ ಏನೇನು ಚರ್ಚಿಸಲಾಗಿದೆ ಗೊತ್ತಾ..?

 

ಕರೋನಾ ವೈರಸ್ ಸಾಂಕ್ರಾಮಿಕ ಬಿಕ್ಕಟ್ಟಿನ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮೂರನೇ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಪಿಎಂ ಮೋದಿ ಅವರು ಲಾಕ್ ಡೌನ್ ತೆರವುಗೊಳಿಸುವುದರ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

 

ಅಷ್ಟೇ ಅಲ್ಲ ಇದಕ್ಕಾಗಿ ಒಂದು ಸಮಗ್ರ ನೀತಿ ರೂಪಿಸುವ ಅಗತ್ಯತೆ ಇದ್ದು, ರಾಜ್ಯ ಸರ್ಕಾರಗಳು ಈ ಕುರಿತು ವಿಸ್ತೃತವಾಗಿ ಕಾರ್ಯನಿರ್ವಹಿಸುವ ಅಗತ್ಯತೆ ಇದೆ ಎಂದು ಹೇಳಿದ್ದಾರೆ.

 

ಈ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿವಿಧ ರಾಜ್ಯ ಸರ್ಕಾರಗಳಿಗೆ ತಮ್ಮ ತಮ್ಮ ನೀತಿಯನ್ನು ಸಿದ್ಧಪಡಿಸಲು ಸೂಚಿಸಿದ್ದು , ಲಾಕ್ ಡೌನ್ ಅನ್ನು ಹೇಗೆ ತೆರವುಗೊಳಿಸಬೇಕು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಹೇಳಿದ್ದಾರೆ. ಇದರಲ್ಲಿ, ರಾಜ್ಯದಲ್ಲಿ ಕೆಂಪು, ಹಸಿರು ಮತ್ತು ಕಿತ್ತಳೆ ವಲಯಗಳನ್ನು ರಚಿಸುವ ಮೂಲಕ ಲಾಕ್‌ಡೌನ್ ತೆರೆಯಬಹುದು. ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ವೈರಸ್ ನ ಪ್ರಕರಣಗಳು ಇರುವ ರಾಜ್ಯಗಳಲ್ಲಿ ಲಾಕ್‌ಡೌನ್ ಮುಂದುವರೆಸಬಹುದು ಹಾಗೂ ಕಡಿಮೆ ಪ್ರಕರಣಗಳು ಇರುವ ರಾಜ್ಯಗಳಲ್ಲಿ ಜಿಲ್ಲಾವಾರು ಸಡಿಲಿಕೆ ನೀಡಬಹುದು ಎಂಬಿತ್ಯಾದಿ ಸಲಹೆಗಳು ಶಾಮೀಲಾಗಿವೆ.

 

ಇದೇ ವೇಳೆ ದೇಶದ ಅರ್ಥವ್ಯವಸ್ಥೆಯ ಕುರಿತು ಯಾವುದೇ ರೀತಿಯ ಚಿಂತೆ ಮಾಡುವ ಅಗತ್ಯವಿಲ್ಲ ಎಂದಿರುವ ಪ್ರಧಾನಿ ನರೇಂದ್ರ ಮೋದಿ, ನಮ್ಮ ದೇಶದ ಆರ್ಥಿಕತೆ ಉತ್ತಮವಾಗಿದೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಕೇಂದ್ರ ಆರೋಗ್ಯ ಸಚಿವಾಲಯ ದೇಶಾದ್ಯಂತದ ವಿವಿಧ ಜಿಲ್ಲೆಗಳನ್ನು ವಿವಿಧ ವಲಯಗಳನ್ನಾಗಿ ವಿಂಗಡಿಸಿದ್ದು, ಈಗಲೂ ಕೂಡ ಸುಮಾರು 170 ಕ್ಕೂ ಅಧಿಕ ಜಿಲ್ಲೆಗಳನ್ನು ರೆಡ್ ಜೋನ್ ನಲ್ಲಿವೆ,

 

ಕರೋನಾ ವೈರಸ್ ಬಿಕ್ಕಟ್ಟಿನಿಂದಾಗಿ, ದೇಶದಲ್ಲಿ ಮೇ 3 ರವರೆಗೆ ಲಾಕ್‌ಡೌನ್ ಜಾರಿಯಲ್ಲಿದೆ. ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮುಂದಿನ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಸಿದ್ದಾರೆ. ಇದರಲ್ಲಿ, ಹಲವಾರು ರಾಜ್ಯಗಳು ಲಾಕ್‌ಡೌನ್ ಅನ್ನು ಮುಂದುವರೆಸಲು ಹಾಗೂ ಹಂತವಾರು ಲಾಕ್‌ಡೌನ್ ಅನ್ನು ತೆರವುಗೊಳಿಸಲು ಪ್ರಸ್ತಾವನೆಯನ್ನು ಸಲ್ಲಿಸಿವೆ ಎನ್ನಲಾಗಿದೆ.

 

ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿಗಳ ನಡುವಿನ ಈ ಸಭೆ ಸುಮಾರು ಮೂರು ಗಂಟೆಗಳ ಕಾಲ ನಡೆದಿದ್ದು, ಈ ವೇಳೆ ರಾಜ್ಯ ಸರ್ಕಾರಗಳು ಕೊರೊನಾ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಉತ್ತಮ ಕೆಲಸ ಮಾಡಿವೆ ಹಾಗೂ ಲಾಕ್ ಡೌನ್ ನಿಂದ ನಮಗೆ ಲಾಭವಾಗಿದೆ ಎಂದು ಪ್ರಧಾನಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.

 

ಈ ಸಭೆಯಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಕೋಟಾದಲ್ಲಿ ಸಿಲುಕಿಕೊಂಡ ಮಕ್ಕಳ ವಿಷಯವನ್ನು ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ. ಮಕ್ಕಳನ್ನು ಕರೆತರಲು ನೀತಿ ರೂಪಿಸಬೇಕು ಎಂದು ನಿತೀಶ್ ಒತ್ತಾಯಿಸಿದ್ದಾರೆ. ಜೊತೆಗೆ ಇತರೆ ರಾಜ್ಯಗಳು ನಿರಂತರವಾಗಿ ಮಕ್ಕಳನ್ನು ವಾಪಸ್ ಕರೆಸುತ್ತಿವೆ ಎಂದೂ ಕೂಡ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

 

ಸಭೆಗೂ ಮುನ್ನವೇ ವಿವಿಧ ರಾಜ್ಯ ಸರ್ಕಾರಗಳು ಲಾಕ್ ಡೌನ್ ಅನ್ನು ಒಮ್ಮೆಲೇ ತೆರವುಗೊಳಿಸುವುದು ಅಪಾಯಕ್ಕೆ ದಾರಿ ಮಾಡಿಕೊಡಲಿದೆ. ಹೀಗಾಗಿ ಕೇಂದ್ರ ಸರ್ಕಾರ ಲಾಕ್ ಡೌನ್ ತೆರವು ಗೊಳಿಸಲು ವಿವಿಧ ನೀತಿಗಳನ್ನು ಪರಿಶೀಲಿಸಬೇಕು ಎಂದಿವೆ ಎಂಬುದು ಇಲ್ಲಿ ಗಮನಾರ್ಹ.

మరింత సమాచారం తెలుసుకోండి: