ಪ್ರಧಾನಿ ಮೋದಿ ದೇಶವನ್ನು ಕೊರೋನಾ ವೈರಸ್ ಇಂದ ಕಾಪಾಡುವ ಉದ್ದೇಶದಿಂದ 4ನೇ ಹಂತದ ಲಾಕ್ ಡೌನ್ ಅನ್ನು ಘೋಷಣೆಯನ್ನು ಮಾಡಿ ಲಾಕ್ ಡೌನ್ ಗೆ ಸಂಭಂದಿಸಿದಂತೆ  ಮಾರ್ಗ ಸೂಚಿಯನ್ನು ಬಿಡುಗಡೆಯನ್ನು ಮಾಡಲಾಗಿತ್ತು, ಈ ಮಾರ್ಗ ಸೂಚಿಯ ಅನುಸಾರ ಕೆಲವು ಸಡಿಲಿಕೆಗೆ ಅವಕಾಶಧವನ್ನು ನೀಡಿದೆ ಇದರಂತೆ ರಾಜ್ಯದಲ್ಲಿ ಕಂಟೋನ್ಮೆಂಟಲ್  ಝೋನ್ ಹೊರತು ಪಡಿಸಿ ಉಳಿದೆಲ್ಲಾ ಕಡೆ ಆರ್ಥಿಕ ಚಟುವಟಿಕೆಗಳನ್ನು ನಡೆಸಬಹುದು ಎಂದು ತಿಳಿಸಿತ್ತು

ಅದರಂತೆ ಇಂದು ಎಲ್ಲಾ ಭಾಗದಲ್ಲೂ ಕೂಡ ಆರ್ಥಿಕ ಚಟುವಟಿಕೆಗಳು ಸರಾಗವಾಗೇ ನಡೆದವು. ಆದರೆ ಇದರಿಂದ ರಾಜ್ಯಕ್ಕೆ ಮತ್ತಷ್ಟು ಆತಂಕ ಹೆಚ್ಚಾಗಿದೆ. ಯಾಕೆ ಗೊತ್ತಾ..?

 

ಕರ್ನಾಟಕದಲ್ಲಿ ಇಂದು ಒಂದೇ ದಿನ ಬರೋಬ್ಬರಿ 149 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಈವರೆಗೆ ಒಂದು ದಿನದಲ್ಲಿ ಪತ್ತೆಯಾದ ಅತಿ ಹೆಚ್ಚು ಪ್ರಕರಣಗಳು ಇದಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1,395ಕ್ಕೆ ಏರಿಕೆಯಾಗಿದೆ. ಬೆಳಗಿನ ವರದಿಯಲ್ಲಿ 127 ಜನರಿಗೆ ಕೊರೊನಾ ದೃಡಪಟ್ಡಿತ್ತು ಸಂಜೆಯ ವರದಿಯಲ್ಲಿ ಹೊಸದಾಗಿ 22 ಮಂದಿಗೆ ಸೋಂಕು ತಗುಲಿದೆ. ಹಾಗಾಗಿ ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1395ಕ್ಕೆ ಏರಿಕೆಯಾಗಿದೆ.

 

ಈ ನಡುವೆ, ರಾಜ್ಯದಲ್ಲಿ ಸೋಂಕಿಗೆ ಮೂವರು ಬಲಿಯಾಗಿದ್ದಾರೆ. ಬಳ್ಳಾರಿಯ 61 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ಇವರು ಜ್ವರದ ಲಕ್ಷಣಗಳಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಇತ್ತೀಚಿಗೆ ಹೃದಯ ಶಸ್ತ್ರ ಚಿಕಿತ್ಸೆಗೂ ಒಳಪಟ್ಟಿದ್ದರು.

 

ವಿಜಯಪುರದ 65 ವರ್ಷ ವೃದ್ಧರೊಬ್ಬರು ಸೋಂಕಿಗೆ ಬಲಿಯಾಗಿದ್ದಾರೆ. ಇವರನ್ನು ಸೋಮವಾರ ಆಸ್ಪತ್ರೆಗೆ ಕರೆತರುವಾಗಲೇ ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ. ಬೆಂಗಳೂರಿನ 54 ವರ್ಷದ ನಿವಾಸಿ ಸೋಮವಾರ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 40ಕ್ಕೇರಿಕೆಯಾಗಿದೆ.

ಬೀದರ್ ನಲ್ಲಿ 2 ವರ್ಷ 6 ತಿಂಗಳ ಮಗು ಸೇರಿದಂತೆ ಎಲ್ಲಾ ವಯೋಮಾನದ ಜನರು ಸೋಂಕಿತರ ಪಟ್ಟಿಯಲ್ಲಿದ್ದಾರೆ.
149 ಹೊಸ ಸೋಂಕಿತರ ಪೈಕಿ 113 ಮಂದಿ ಅಂತರರಾಜ್ಯ ಪ್ರಯಾಣದ ಇತಿಹಾಸ ಹೊಂದಿದ್ದಾರೆ.

 

ಮಂಡ್ಯದಲ್ಲಿ ಇಂದು ಒಂದೇ ದಿನ 71 ಮಂದಿಗೆ ಸೋಂಕು ತಗುಲಿದ್ದು, ಎಲ್ಲಾ 71 ಮಂದಿ ಕೂಡ ಮುಂಬೈನಿಂದಲೇ ಆಗಮಿಸಿದ್ದಾರೆ. ಉಳಿದಂತೆ ದಾವಣಗೆರೆ 22, ಕಲಬುರಗಿ 13, ಶಿವಮೊಗ್ಗ 10, ಬೆಂಗಳೂರು 6, ಚಿಕ್ಕಮಗಳೂರು 5, ಉಡುಪಿ 4, ಉತ್ತರ ಕನ್ನಡದಲ್ಲಿ 4, ವಿಜಯಪುರ, ಬೀದರ್, ಗದಗ, ಯಾದಗಿರಿ, ಚಿತ್ರದುರ್ಗ, ರಾಯಚೂರಿನಲ್ಲಿ ತಲಾ 1 ಪ್ರಕರಣಗಳು ವರದಿಯಾಗಿವೆ.

 

ಮಂಡ್ಯದಲ್ಲಿ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 160ಕ್ಕೆ ಏರಿಕೆಯಾಗಿದೆ. ಮುಂಬೈನಿಂದ ರಾಜ್ಯಕ್ಕೆ ಮರಳುತ್ತಿರುವವರಿಂದ ಸೋಂಕು ಈ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಕರ್ನಾಟಕ್ಕೆ ಮುಂಬೈನಿಂದ ಆಗಮಿಸಿದವರು ಬಹುದೊಡ್ಡ ಅಘಾತವನ್ನು ನೀಡಿದ್ದಾರೆ.

 

ದೇಶದಲ್ಲಿ ಕೊರೋನಾ ಸೋಂಕಿತ ರಾಜ್ಯಗಳ ಪೈಕಿ ಕರ್ನಾಟಕ 12ನೇ ಸ್ಥಾನದಲ್ಲಿದೆ. ನಿನ್ನೆಯಿಂದ ಮಹಾರಾಷ್ಟ್ರ, ಗುಜರಾತ್, ತಮಿಳುನಾಡಿನಿಂದ ಪ್ರಯಾಣಿಕರನ್ನು ಕರ್ನಾಟಕದೊಳಗೆ ಬಿಡುತ್ತಿಲ್ಲ. ಈ ಮೂರು ರಾಜ್ಯಗಳಿಂದಲೇ ಕರ್ನಾಟಕದಲ್ಲಿ ಅತಿಹೆಚ್ಚು ಸೋಂಕಿತರು ಪತ್ತೆಯಾಗಿರುವುದರಿಂದ ರಾಜ್ಯ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.

 

ಕರ್ನಾಟಕದಲ್ಲಿ ಈವರೆಗೆ 530 ಕೊರೊನಾ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕೊರೊನಾ ಸೋಂಕಿಗೆ ಇದುವರೆಗೂ 40 ಜನ ಬಲಿಯಾಗಿದ್ದು, 802 ಕೊರೊನಾ ಸೋಂಕಿತರಿಗೆ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ನಿನ್ನೆಯಿಂದ ಕರ್ನಾಟಕದಲ್ಲಿ ನೂರಕ್ಕೂ ಹೆಚ್ಚು ಪ್ರಕರಣಗಳು ಒಂದೇ ದಿನ ಕಂಡು ಬರುತ್ತಿವೆ.

 

మరింత సమాచారం తెలుసుకోండి: