ಮುಂಬಯಿ: ಎಲ್ಲರಿಗು ಇರುವುದು ಒಂದೇ ಜನ್ಮ. ಒಮ್ಮೆ ಹುಟ್ಟಿ ಸತ್ತರೇ ಮುಗೀತು ಕಥೆ. ಮತ್ತೇ ಹುಟ್ಟುವುದು ಸಾಯುವುದು ಅವಾಸ್ತವ. ಆದರೆ ಬಾಲಿವುಡ್ ನ ಈ ನಟಿ ಇದೀಗ ಸತ್ತು ಮತ್ತೇ ಹುಟ್ಟಿದ್ದಾರೆ. ಶಾಕ್ ಆದರೂ ಸಹ ನಂಬಲೇಬೇಕಾದ ವಿಷಯವಿದು. ಹೌದು ಆ ಕುತೂಹಲಕಾರಿ ಮಾಹಿತಿ ಇಲ್ಲಿದೆ ನೋಡಿ. 
 
 ಬಾಲಿವುಡ್ ನಟಿ ಮನಿಷಾ ಕೊಯಿರಾಲ ಮಹಾಮಾರಿ ಕ್ಯಾನ್ಸರ್ ರೋಗದೊಂದಿಗೆ ಹೋರಾಡಿ ಹೊಸ ಬದುಕನ್ನು ಪಡೆದಕೊಂಡಿರುವುದು ನಮಗೆಲ್ಲಾ ತಿಳಿದಿರುವ ಸಂಗತಿ. ಪ್ರಸ್ತುತ ಈ ನಟಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಎರಡು ವಿಭಿನ್ನ ಸನ್ನಿವೇಶಗಳ ಚಿತ್ರಗಳನ್ನು ಜೋಡಿಸಿರುವ ಪೋಸ್ಟ್ ಒಂದನ್ನು ಹಾಕಿಕೊಂಡಿದ್ದಾರೆ. ಮತ್ತು ಆ ಪೋಸ್ಟ್ ಗೆ ತುಂಬಾ ಪಾಸಿಟಿವ್ ಶೀರ್ಷಿಕೆಯೊಂದನ್ನೂ ಸಹ ನೀಡಿದ್ದಾರೆ. ಇದು ಸದ್ಯಕ್ಕೆ ಟ್ವಿಟ್ಟರ್ ಲೋಕದ ಗಮನವನ್ನು ಸೆಳೆಯುತ್ತಿದೆ.
 
‘ನನಗೆ ಎರಡನೇ ಜೀವನ ಸಿಗುತ್ತಿರುವುದಕ್ಕೆ ನಾನು ಬದುಕಿಗೆ ಸದಾ ಋಣಿಯಾಗಿರುತ್ತೇನೆ. ಶುಭೋದಯ ಗೆಳೆಯರೇ. ಸಂತೋಷ ಮತ್ತು ಆರೋಗ್ಯಕರವಾಗಿ ಬದುಕಲು ಸಾಧ್ಯವಾಗಿರುವ ಇದೊಂದು ವಿಸ್ಮಯಕರ ಜೀವನವೇ ಸರಿ’ ಎಂದು ಬರೆದುಕೊಂಡಿದ್ದಾರೆ. 
 
ಮತ್ತು ತಾನು ಜೊತೆಯಾಗಿ ಪೋಸ್ಟ್ ಮಾಡಿರುವ ಎರಡು ಫೊಟೋಗಳಲ್ಲಿ ಒಂದರಲ್ಲಿ ಮನಿಷಾ ಅವರು ಆಮ್ಲಜನಕದ ನಳಿಕೆಯನ್ನು ಸಿಕ್ಕಿಸಿಕೊಂಡು ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿರುವ ಫೊಟೋ ಇದ್ದರೆ ಇನ್ನೊಂದು ಫೊಟೋದಲ್ಲಿ ಅವರು ಸುತ್ತ ಹಿಮಾವೃತ ಬೆಟ್ಟದ ತುದಿಯೊಂದರಲ್ಲಿ ನಿಂತಿದ್ದಾರೆ.
 
ಮನಿಷಾ ಕೊಯಿರಾಲಾ ಅವರಲ್ಲಿ ಅಂಡಾಶಯದ ಕ್ಯಾನ್ಸರ್ ಸಮಸ್ಯೆ 2012ರಲ್ಲಿ ಪತ್ತೆಯಾಗಿತ್ತು. ಇದಕ್ಕೆ ಅಮೆರಿಕಾದಲ್ಲಿ ಚಿಕಿತ್ಸೆಯನ್ನು ಪಡೆದುಕೊಂಡ ಬಳಿಕ ಮನಿಷಾ ಅವರು ಗುಣಮುಖರಾಗಿದ್ದರು. ಕ್ಯಾನ್ಸರ್ ನೊಂದಿಗಿನ ತನ್ನ ಹೋರಾಟದ ಅನುಭವಗಳನ್ನು ‘ಹೀಲ್ಡ್: ಹೌ ಕ್ಯಾನ್ಸರ್ ಗೇವ್ ಮಿ ಎ ನ್ಯೂ ಲೈಫ್ (ಗುಣಮುಖಿ: ಕ್ಯಾನ್ಸರ್ ನಿಂದ ಹೊಸ ಜೀವನ) ಎಂಬ ಪುಸ್ತಕವನ್ನು ಬರೆಯುತ್ತಿರುವುದು ವಿಶೇಷವಾಗಿದೆ. ಇನ್ನು ಕ್ಯಾನ್ಸರ್ ಗೆದ್ದ ಬಳಿಕ ಬಾಲಿವುಡ್ ಗೆ ಕಮ್ ಬ್ಯಾಕ್ ಮಾಡಿರುವ ಮನಿಷಾ ಕೊಯಿರಾಲ ಅವರು ಸಂಜು ಚಿತ್ರದಲ್ಲಿ ನಟಿಸಿದ್ದರು. ಮಾತ್ರವಲ್ಲದೇ ನೆಟ್ ಫ್ಲಿಕ್ಸ್ ನ ಲಸ್ಟ್ ಸ್ಟೋರೀಸ್, ಡಿಯರ್ ಮಾಯಾ ಮತ್ತು ಪ್ರಸ್ಥಾನಂ ವೆಬ್ ಸಿರೀಸ್ ಗಳಲ್ಲೂ ನಟಿಸಿದ್ದಾರೆ.

మరింత సమాచారం తెలుసుకోండి: