ಟಾಲಿವುಡ್ ಲೋಕದ ಕಿಂಗ್ ಪ್ರಭಾಸ್ ಅಭಿನಯದ ಸಾಹೋ ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಮತ್ತಷ್ಟು ಹೆಚ್ಚಾಗ್ತಾ ಇದೆ. ಹೌದು, ಪ್ರಭಾಸ್ ಮತ್ತು ಶ್ರದ್ಧಾ ಕಪೂರ್ ಅವರ ಅಭಿನಯದ ಈ ಚಿತ್ರ ನೋಡೋಕೆ  ಅಭಿಮಾನಿಗಳಂತೂ ತುದಿಗಾಲಿನಲ್ಲಿ ನಿಂತಿದ್ದಾರೆ. ಇಬ್ಬರ ಕೆಮಿಸ್ಟ್ರಿ ಸಖತ್ ವರ್ಕೌಟ್ ಆಗಿದೆ. 


ಸಾಹೋ ಚಿತ್ರದ ಸೈಕೋ ಸೈಯಾನ್ ಎನ್ನುವ ಹಾಡಿನ ಟೀಸರ್ ವೀಕ್ಷಣೆ ಮಾಡಿದ್ದ ಅಭಿಮಾನಿಗಳು ಇದೀಗ ಹಾಡನ್ನೂ ವೀಕ್ಷಣೆ ಮಾಡಿದ್ದಾರೆ. ಹೌದು ಸೈಕೋ ಸೈಯಾನ ಹಾಡು ಬಿಡುಗಡೆಯಾಗಿದೆ. ಈ ಹಾಡಿನಲ್ಲಿ ಪ್ರಭಾಸ್ ಮತ್ತು ಶ್ರದ್ಧಾ ಸಖತ್ ಹೆಜ್ಜೆ ಹಾಕಿದ್ದಾರೆ. ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂನಲ್ಲಿ ಇದು ತೆರೆ ಕಂಡಿದೆ.


ಈ ಚಿತ್ರವನ್ನು ಸುಜಿತ್ ಅವರು ನಿರ್ದೇಶನ ಮಾಡಿದ್ದು, ಈ ಚಿತ್ರದ ಮೂಲಕ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಸೌತ್ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟಿದ್ದಾರೆ. ಜಾಕಿ ಶ್ರಾಫ್, ನೀಲ್ ನಿತಿನ್ ಮುಖೇಶ್, ಮುರಳಿ ಶರ್ಮಾ, ಅರುಣ್ ವಿಜಯ್, ಇನ್ನು ಹಹಲವರು ನಟಿಸಿದ್ದದಾರೆ. ಈ ಚಿತ್ರ ಆಗಸ್ಟ್ 15, 2019 ರಂದು ತೆರೆಗೆ ಬರಲಿದೆ.


మరింత సమాచారం తెలుసుకోండి: