ಕೊರೋನಾ ಸೋಂಕು ರಾಜ್ಯದಲ್ಲಿ ಅಟ್ಟಹಾಸ ಮೆರೆಯುತ್ತಿದೆ. ಒಂದೊಂದು ದಿನಕ್ಕೂ ಕೊರೋನಾ ಸೋಂಕು ಡಬಲ್ ಆಗುತ್ತಾ ಸಾಗುತ್ತಿದೆ. ಈ ಸಂದರ್ಭದಲ್ಲಿ ನಾವು ನೀವೆಲ್ಲರೂ ಕೊರೋನಾ ಸೋಂಕಿನಿಂದ ದೂರ ಉಳಿಯಬೇಕೆಂದ್ರೇ.. ಮುಂಜಾಗ್ರತೆ, ಎಚ್ಚರಿಕೆಯೊಂದೇ ಮದ್ದು. ಇದರ ನಡುವೆಯೂ, ಕೊರೋನಾ ಸೋಂಕಿನ ಲಕ್ಷಣಗಳು, ಕೊರೋನಾ ಸೋಂಕಿತರ ಸಂಪರ್ಕ ಹೊಂದಿದ್ದೇವೆ ಎಂಬುದಾಗಿ ತಿಳಿದ್ರೇ.. ಎಲ್ಲರೂ ಏನ್ ಮಾಡಬೇಕು..? ಯಾರನ್ನು ಸಂಪರ್ಕಿಸಬೇಕು.? ಯಾವೆಲ್ಲಾ ಪರೀಕ್ಷೆಗಳನ್ನು ಮಾಡಿಸಬೇಕು.? ಆ ಪರೀಕ್ಷೆ ಎಲ್ಲಿ ಮಾಡಿಸಬೇಕು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ..?

 

ನೀವು ಯಾರನ್ನು ಸಂಪರ್ಕಿಸಬೇಕು.? : ಉಸಿರಾಟದ ಸಮಸ್ಯೆಯ ವೈದ್ಯಕೀಯ ಲಕ್ಷಣಗಳು ಮತ್ತು ಈ ಕೆಳಗಿನ ಯಾವುದಾದರೂ ಸಮಸ್ಯೆಗಳಿದ್ದಲ್ಲಿ, ನೀವು ನಿಮ್ಮ ಕುಟುಂಬದ ವೈದ್ಯರನ್ನು ಸಂಪರ್ಕಿಸಬೇಕು. ಇಲ್ಲವೇ 104ಗೆ ಕರೆ ಮಾಡಿ ತಿಳಿಸಬೇಕು

ಕೊರೋನಾ ವೈರಸ್ ಸೋಂಕು ಪೀಡಿತ ವ್ಯಕ್ತಿಯೊಂದಿಗೆ ನಿಕಟ ಸಂಪರ್ಕಕ್ಕೆ ಬಂದಿದ್ದ ಪಕ್ಷದಲ್ಲಿ ತಪ್ಪದೇ ವೈದ್ಯರನ್ನು ಸಂಪರ್ಕಿಸಿ ಪರೀಕ್ಷೆ ಮಾಡಿಸಿಕೊಳ್ಳೋದು ಮರೆಯಬೇಡಿ. ಯಾವ ಪರೀಕ್ಷೆಗಳನ್ನು ಮಾಡಿಸಬೇಕು ಮತ್ತು ಅವುಗಳನ್ನು ಎಲ್ಲಿ ಮಾಡಿಸಬೇಕು.?

ನಿಮಗೆ ಕೊರೋನಾ ಸೋಂಕಿನ ಯಾವುದೇ ಲಕ್ಷಣಗಳಿಲ್ಲದಿದ್ದಲ್ಲಿ, ನೀವು ಕೋವಿಡ್-19 ಪರೀಕ್ಷೆಗೆ ಒಳಗಾಗುವ ಅಗತ್ಯವಿಲ್ಲ.
ಇದರ ಹೊರತಾಗಿಯೂ ಸೋಂಕು ತಗುಲಿರುವ ಲಕ್ಷಣಗಳಿದ್ದಲ್ಲಿ, ಇಲ್ಲವೇ ಕೊರೋನಾ ಬಾದಿತ ದೇಶಗಳಿಗೆ ನೀವು ಭೇಟಿ ನೀಡಿದ್ದರೇ, ಇಲ್ಲವೇ ಸೋಂಕು ಬಾದಿತನೆಂದು ಖಚಿತಪಟ್ಟ ವ್ಯಕ್ತಿಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದಲ್ಲಿ, ತಕ್ಷಣವೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಾಯವಾಣಿ ಸಂಖ್ಯೆ 080-46848600, 080-66692000 ಮತ್ತು ಟೋಲ್ ಪ್ರಿ ಸಂಖ್ಯೆ 104ಕ್ಕೆ ಸಂಪರ್ಕಿಸೋದು ಮರೆಯಬೇಡಿ.


ನಿಮ್ಮ ಮಾಹಿತಿಯನ್ನು ಸಹಾಯವಾಣಿ ಕೇಂದ್ರವರು ಪಡೆದ ನಂತ್ರ, ನಿಮ್ಮ ಸಂಪರ್ಕ ವಿವರಗಳನ್ನು ಸಂಗ್ರಹಿಸಿ, ಕೋವಿಡ್-19 ಪರೀಕ್ಷಾ ವಿಧಿ ವಿಧಾನಗಳೊಂದಿಗೆ ನಿಮ್ಮನ್ನು ಸಂಪರ್ಕಿಸಲಿದ್ದಾರೆ. ಈ ಮೂಲಕ ನಿಮ್ಮನ್ನು ಕೊರೋನಾ ಸೋಂಕು ಪತ್ತೆ ಪರೀಕ್ಷೆಗೆ ಒಳಪಡಿಸಲಿದ್ದಾರೆ.


ನಿಮಗೆ ಬಹುಮುಖ್ಯ ಸಲಹೆಗಳು..

ತೀವ್ರ ಉಸಿರಾಟದ ತೊಂದರೆ ಹೊಂದಿರುವವರೊಂದಿಗೆ ಸಂಪರ್ಕ ಮಾಡಬೇಡಿ
ಆಗಾಗ್ಗೆ ಸೋಪಿನಿಂದ ಕೈ ತೊಳೆದುಕೊಳ್ಳಿ. ಅದರಲ್ಲೂ ನಿಮ್ಮ ಸಂಪರ್ಕದಲ್ಲಿ ಕೋವಿಡ್ ಸೋಂಕಿರುವ ವ್ಯಕ್ತಿಗಳಿದ್ದಾಗ..
ತೀವ್ರ ಉಸಿರಾಟದ ತೊಂದರೆಯ ಲಕ್ಷಣಗಳನ್ನು ಹೊಂದಿರುವ ವ್ಯಕ್ತಿಗಳು ಉಸಿರಾಟದ ಶಿಷ್ಠಾಚಾರ ಪಾಲಿಸಬೇಕು
ವೈದ್ಯಕೀಯ ಸಹಕಾರ ಪಡೆದುಕೊಳ್ಳಬೇಕು.

 

మరింత సమాచారం తెలుసుకోండి: