ರಶ್ಮಿಕಾ ಇದೀಗ ತುಂಬ ಬ್ಯುಸಿ ನಟಿ. ಒಂದಲ ಎರಡಲ್ಲ ಬರೋಬ್ಬರಿ ಮೂರು ಚಿತ್ರಗಳಿಗೆ ಚಿತ್ರಗಳಿಗೆ ರಶ್ಮಿಕಾ ಒಪ್ಪಿಕೊಂಡಿದ್ದರು. ಇದಿಷ್ಟೇ ಅಲ್ಲ, ಇದೀಗ ಮತ್ತೊಂದು ಚಿತ್ರದಲ್ಲಿ ರಶ್ಮಿಕಾ ಅಭಿನಯಿಸೋಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಜೂನ್ 12 ರಂದು ಈ ಸಿನಿಮಾದ ಪೂಜೆ ನಡೆಯಲಿದೆ. 

 

 

ಹೌದು, ಕಿರಿಕ್ ಪಾರ್ಟಿ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಹವಾ ಕ್ರಿಯೇಟ್ ಮಾಡಿದ್ದ ನಟಿ ರಶ್ಮಿಕಾ ಇದೀಗ ಮುಟ್ಟಿದ್ದೆಲ್ಲ ಚಿನ್ನ ಎನ್ನುವಂತಾಗಿದೆ. ಹೀಗಾಗಿ ಟಾಪ್ ಹೀರೋಗಳ ಚಿತ್ರಕ್ಕೆ ರಶ್ಮಿಕಾಗೆ ಬೇಡಿಕೆಗಳು ಬರುತ್ತಿವೆ. ಇತ್ತೀಚೆಗಂತೂ ತೆಲುಗು ಚಿತ್ರರಂಗದಲ್ಲಿ ರಶ್ಮಿಕಾ ಮಿಂಚುತ್ತಾ ಇದ್ದಾರೆ. 

 

 

ಪ್ರಿನ್ಸ್ ಮಹೇಶ್ ಬಾಬು ಅಭಿನಯದ 'ಸರಿಲೇರು ನೀಕೆವರು' ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಇದು ಇತ್ತೀಚೆಗಷ್ಟೇ ಸೆಟ್ಟೇರಿತ್ತು. ಅದಕ್ಕಿಂತ ಮುಂಚೆ ಕಾರ್ತಿ ಜೊತೆಗೆ ಅಭಿನಯಿಸೋಕೂ ಒಪ್ಪಿಕೊಂಡಿದ್ದರು. ಅದಾದ ನಂತರ ಅಲ್ಲು ಅರ್ಜುನ್ ಜೊತೆಗೆ. ಇದೀಗ ನಿತಿನ್ ಜೊತೆ ಭೀಷ್ಮ ಚಿತ್ರದಲ್ಲಿಯೂ ರಶ್ಮಿಕಾ ಕಾಣಿಸಿಕೊಳ್ಳಲಿದ್ದಾರೆ.

 

 

ಭೀಷ್ಮ ಸಿನಿಮಾ ಆರಂಭ ಆಗ್ತಾ ಇರೋದಕ್ಕೆ ಹರ್ಷ ವ್ಯಕ್ತಪಡಿಸಿರೋ ರಶ್ಮಿಕಾ ಸಿನಿಮಾ ಸೆಟ್ ಗೆ ಹೋಗೋಕೆ ಥ್ರಿಲ್ ಆಗಿದ್ದಾರೆ. ಹೀಗೆ ಒಟ್ಟಾರೆ ಕನ್ನೆಡ, ತೆಲುಗು ಹಾಗೂ ತಮಿಳು ಹೀಗೆ ಮೂರು ಭಾಷೆಯ ಚಿತ್ರಗಳಲ್ಲಿ ಒಟ್ಟೊಟ್ಟಿಗೆ ನಟಿಸೋಕೆ ರಶ್ಮಿಕಾ ಸಿದ್ದರಾಗಿದ್ದಾರೆ. 

 

మరింత సమాచారం తెలుసుకోండి: