ಫಿದಾ ಎನ್ನುವ ವಿಡಿಯೋ ಸಾಂಗ್ ಇದೀಗ ರಿಲೀಸ್ ಆಗಿದೆ. ಇದರಲ್ಲಿ ಗಾಯಕ ಕಮ್ ನಾಯಕ ಪೃಥ್ವಿರಾಜ್ ಅಭಿನಯಿಸಿದ್ದಾರೆ. ಫಿದಾ ಎನ್ನುವ ಶಬ್ಧ ಹಿಂದಿ ಭಾಷೆಯಲ್ಲಿಯೂ ಇದೆ. ಜೊತೆಗೆ ಕನ್ನಡ ಭಾಷೆಯಲ್ಲಿಯೂ ಇದೆ ಅಂದರೆ, ನಿಮಗೆ ಆಶ್ಚರ್ಯ ಆಗುವುದಲ್ಲವೇ?
ಹೌದು, ಫಿದಾ ಶಬ್ದ ಕನ್ನಡದಲ್ಲಿಯೂ ಇದೆ ಎಂದು ಜಯಂತ್ ಕಾಯ್ಕಿಣಿ ಹೇಳಿದ್ದಾರೆ. ಈ ಹೆಸರಿನ ಆಲ್ಬಂ ಸಾಂಗ್ ಯೂಥ್ ಗೆ ಸಂಬಂಧಿಸಿದ್ದು, ಇಲ್ಲಿ ಪ್ರೀತಿಗೊಂದು ವಿಶೇಷ ಅರ್ಥವಿದೆ. ಈ ಪ್ರೀತಿಯ ಕಥೆಯ ಹಾಡಿನಲ್ಲಿ ಹುಡುಗ-ಹುಡುಗಿ ಮೊದಲ ಭೇಟಿ, ಪರಿಚಯ ಆಗುತ್ತದೆ.
ಆದರೆ ಹುಡುಗ ಆಕೆ ಪ್ರೀತಿಸುತ್ತಿದ್ದಾಳೆ ಎಂದುಕೊಳ್ಳುತ್ತಾನೆ. ನಂತರ ಆತ ವಿಷಯವನ್ನು ಆಕೆಗೆ ತಿಳಿಸಲು ಹೋದಾಗ ಅವಳು ಮದುವೆ ಆಹ್ವಾನ ನೀಡುತ್ತಾಳೆ. ನಂತರ ಆರಕ್ಷತೆ ಸಮಯದಲ್ಲಿ ಅವನು ಹಾಡುವ ಮೂಲಕ ಆಲ್ಬಂ ಸಾಂಗ್ ಮುಕ್ತಾಯ ಆಗುತ್ತದೆ.
click and follow Indiaherald WhatsApp channel