ಇಡೀ ವಿಶ್ವವನ್ನು ಭಾಧಿಸುತ್ತಿರುವ ಕೊರಾನಾ ವೈರಸ್ ಗೆ ಔಷಧಿಯನ್ನು ಸಂಶೋಧಿಸಲು ಪ್ರಪಂಚದ ಎಲ್ಲಾ ರಾಷ್ಟ್ರಗಳು ಪೈಪೋಟಿಕಗೆ ಬಿದ್ದಿದೆ ಅದರಂತೆ ಭಾರತವೂ ಸೇರಿದಂತೆ ಅನೇಕ ರಾಷ್ಟ್ರಗಳು ಕೊರೋನಾ ವೈರಸ್ ಗೆ ಔಷಧಿನ್ನು ಸಂಶೋಧಿಸಲಾಗುತ್ತಿದೆ. ಆದರೆ ರಷ್ಯಾದಲ್ಲಿ ತಯಾರಾದ ಔಷಧಿಯೊಂದು  ಎಲ್ಲಾ ಕ್ಲಿನಿಕಲ್ ಪ್ರಯೋಗಗಳನ್ನು ಮುಗಿಸಿ ಮಾರುಕಟ್ಟೆಗೆ ಬರಲು ಸಿದ್ಧತೆಯನ್ನು ನಡೆಸಿದೆ. ಅಷ್ಟಕ್ಕೂ ಈ ರಷ್ಯಾದ ಔಷಧಿ ಮಾರುಕಟ್ಟೆಗೆ ಬರುವುದಾದರೂ ಎಂದು ಗೊತ್ತಾ..?



ಚಾತಕ ಪಕ್ಷಿಯಂತೆ ಕಾಯುತ್ತಿರುವ ವಿಶ್ವದ ಮೊದಲ ಕೊರೊನಾ ಲಸಿಕೆ ರಷ್ಯಾದಿಂದ ಆಗಸ್ಟ್ 12ರಂದೇ ಲಭ್ಯವಾಗಲಿದೆ. ಲಸಿಕೆಯನ್ನು ಗಮಲೇಯ ಸಂಶೋಧನಾ ಸಂಸ್ಥೆ ಮತ್ತು ರಷ್ಯಾದ ರಕ್ಷಣಾ ಸಚಿವಾಲಯ ಜಂಟಿಯಾಗಿ ಅಭಿವೃದ್ಧಿಪಡಿಸಿದೆ. ಈ ನಡುವೆ ಆಗಸ್ಟ್ 12 ರಂದು ರಷ್ಯಾ ದೇಶವು ಕೊರೊನಾವೈರಸ್ ವಿರುದ್ಧ ಮೊದಲ ಲಸಿಕೆ ದಾಖಲಿಸಲಿದೆ ಎಂದು ರಷ್ಯಾದ ಉಪ ಆರೋಗ್ಯ ಸಚಿವ ಒಲೆಗ್ ಗ್ರಿಡ್ನೆವ್ ಮಾಹಿತಿ ನೀಡಿದ್ದಾರೆ.



ಆಗಸ್ಟ್ 12 ರಂದು ಮೊದಲ ಕೊರೊನಾವೈರಸ್ ಲಸಿಕೆ ನೋಂದಾಯಿಸಲಾಗುವುದು ಮೊದಲ ಕ್ಲಿನಿಕಲ್ ಪ್ರಯೋಗಕ್ಕೆ ಒಳಗಾದ ಯೋಧರು ಜುಲೈ 13ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೆ, ಎರಡನೇ ಹಂತದ ಪ್ರಯೋಗದಲ್ಲಿ ಭಾಗಿಯಾದವರು ಜುಲೈ 20ರಂದು ಡಿಸ್ಚಾರ್ಜ್ ಆಗಿದ್ದರು ಎಂದಿದ್ದಾರೆ.



ಲಸಿಕೆಯ ಮೊದಲ, ಎರಡನೇ ಹಾಗೂ ಮೂರನೇ ಹಂತದ ಪ್ರಯೋಗಗಳು ನಡೆಯುತ್ತಿದೆ.ಪ್ರಯೋಗಗಳು ಬಹಳ ಮುಖ್ಯ. ಲಸಿಕೆ ಸುರಕ್ಷಿತವಾಗಿರಬೇಕು ಎಂದು ನಾವು ಅರ್ಥಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ವೈದ್ಯಕೀಯ ವೃತ್ತಿಪರರು ಮತ್ತು ಹಿರಿಯ ನಾಗರಿಕರು ಲಸಿಕೆ ಪಡೆಯುವವರಲ್ಲಿ ಮೊದಲಿಗರಾಗಿದ್ದಾರೆ ಎಂದು ಗ್ರಿಡ್ನೆವ್ ಹೇಳಿದ್ದಾರೆ.



ಈ ಹಿಂದಿನ ವರದಿಯಲ್ಲಿ, ಗಮಲೇಯ ನ್ಯಾಷನಲ್ ರಿಸರ್ಚ್ ಸೆಂಟರ್ ಆಫ್ ಎಪಿಡೆಮಿಯಾಲಜಿ ಅಂಡ್ ಮೈಕ್ರೋಬಯಾಲಜಿ ಅಭಿವೃದ್ಧಿಪಡಿಸಿದ ಕೊರೊನಾವೈರಸ್ ಲಸಿಕೆಯನ್ನು ಪರೀಕ್ಷಿಸುವ ಸ್ವಯಂಸೇವಕರ ಅಂತಿಮ ಪರಿಶೀಲನೆಯು ಭಾಗವಹಿಸುವ ಎಲ್ಲರಲ್ಲೂ ರೋಗನಿರೋಧಕ ಶಕ್ತಿಯನ್ನು ತೋರಿಸಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿತ್ತು.



ಜೂನ್ 18ರಿಂದ ಕ್ಲಿನಿಕಲ್ ಟ್ರಯಲ್ ಆರಂಭವಾಗಿತ್ತು. ಲಸಿಕೆಯ ಕ್ಲಿನಿಕಲ್ ಪ್ರಯೋಗಗಳು ಜೂನ್ 18 ರಂದು ಪ್ರಾರಂಭವಾಗಿದ್ದು, ಈ ಪ್ರಯೋಗದಲ್ಲಿ 38 ಸ್ವಯಂಸೇವಕರು ಇದ್ದರು ಎನ್ನಲಾಗಿದೆ. ಮತ್ತು ಮೊದಲ ಗುಂಪನ್ನು ಜುಲೈ 15 ರಂದು ಮತ್ತು ಎರಡನೇ ಗುಂಪನ್ನು ಜುಲೈ 20 ರಂದು ಬಿಡುಗಡೆ ಮಾಡಲಾಯಿತು ಎನ್ನಲಾಗಿದೆ, ಪ್ರಯೋಗದಲ್ಲಿ ಭಾಗವಹಿಸಿದ್ದ ಸ್ವಯಂಸೇವರು ಆರೋಗ್ಯವಾಗಿದ್ದಾರೆ.



ಇದಲ್ಲದೆ, ವೆಕ್ಟರ್ ಸ್ಟೇಟ್ ರಿಸರ್ಚ್ ಸೆಂಟರ್ ಆಫ್ ವೈರಾಲಜಿ ಮತ್ತು ಬಯೋಟೆಕ್ನಾಲಜಿ ಅಭಿವೃದ್ಧಿಪಡಿಸಿದ ಎರಡನೇ ಕೊವಿಡ್ -19 ಲಸಿಕೆ ಪ್ರಯೋಗದಲ್ಲಿ ಭಾಗವಹಿಸಿದ ಸ್ವಯಂಸೇವಕರು ಉತ್ತಮ ಆರೋಗ್ಯದಲ್ಲಿದ್ದಾರೆ ಮತ್ತು ವ್ಯಾಕ್ಸಿನೇಷನ್‌ನ ಯಾವುದೇ ಅಡ್ಡಪರಿಣಾಮಗಳು ಕಂಡುಬರುವುದಿಲ್ಲ ಎಂದು ತಿಳಿಸಿದ್ದಾರೆ.

మరింత సమాచారం తెలుసుకోండి: