ಕೊರೋನಾ ವೈರಸ್ ಇಡೀ ವಿಶ್ವದಾದ್ಯಂತ ಕೊರೋನ ಒಂದು ಕೋಟಿ ಜನರನ್ನು ತಲುಪಿ ಮತ್ತಷ್ಟು ಜನರನ್ನು ಹಾವುತಿ ತೆಗೆದುಕೊಳ್ಳುವುದಕ್ಕೆ ರಬಸದಿಂದ ಮುನ್ನುಗ್ಗುತ್ತಿದೆ. ಈಗಾಗಲೇ ಈ ಕೊರೋನಾ ವೈರಸ್ ಗೆ ಲಕ್ಷಾಂತರ ಮಂದಿ ಸಾವನ್ನಪ್ಪಿದ್ದು ಇನ್ನು ಕೊಟ್ಯಾಂತರ ಮಂದಿ ಕೊರೋನಾದ ಸುಳಿಯಲ್ಲಿ ಸಿಲುಕಿ ನರಳುತ್ತಿದ್ದಾರೆ. ಈ ಕೊರೋನಾವನ್ನು ಇಡೀ ವಿಶ್ವದಿಂದ ಮುಕ್ತಿಗೊಳಿಸಲು ವಿಶ್ವದ ಅನೇಕ ರಾಷ್ಟ್ರಗಳ ಸಂಶೋಧಕರು ಕೋವಿಡ್ ನ ಔಷಧಿಯ ಕುರಿತಾಗಿ ಸಂಶೋಧನೆಯನ್ನು ನಡೆಸುತ್ತಿದ್ದಾರೆ. ಈ ನಿರಂತರ ಪ್ರಯತ್ನದ ಫಲವಾಗಿ ಭಾರತದಲ್ಲಿ ಔಷಧಿಯೊಂದು ಸಂಶೋಧನೆಗೊಂಡಿದೆ. ಈ ಔಷಧಿ ಈಗಾಗಲೇ ಎಲ್ಲಾ ಕ್ಲಿನಿಕಲ್ ಟೆಸ್ಟ್ ಗಳನ್ನು ಮುಗಿಸಿ ಮಾರುಕಟ್ಟೆಗೆ ಲಗ್ಗೆ ಇಡಲು ಕಾಯುತ್ತಿದೆ ಅಷ್ಟಕ್ಕೂ ಕೊರೋನಾಗೆ ವೈರಿಯಾಗುವ ಆ ಔಷಧಿ ಯಾವುದು ಗೊತ್ತಾ..?
ಇದೀಗ ಮಾನವರ ಮೇಲಿನ ಪ್ರಯೋಗಕ್ಕೆ ಒಳಗಾಗಿ, ಆಗಸ್ಟ್ 15ಕ್ಕೆ ಕರೊನಾ ವೈರಾಣುವಿನಿಂದ ಸ್ವಾತಂತ್ರ್ಯ ಕೊಡಿಸಲು ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗುತ್ತಿರುವ ದೇಶದ ಮೊದಲ ಕೋವಿಡ್-19 ರೋಗನಿರೋಧಕ ಚುಚ್ಚುಮದ್ದು ಕೊವ್ಯಾಕ್ಸಿನ್ ಯಶಸ್ವಿಯಾಗುವುದು ನಿಶ್ಚಿತ ಎಂದು ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಇಂಟರ್ನ್ಯಾಷನಲ್ ಲಿಮಿಟೆಡ್ನ (ಬಿಬಿಐಎಲ್) ಚೇರ್ಮನ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ. ಕೃಷ್ಣ ಎಲಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದು ದೇಶಿಯವಾಗಿ ಉತ್ಪಾದಿಸಲ್ಪಟ್ಟಿರುವ ಇನ್ಆಯಕ್ಟಿವೇಟೆಡ್ ರೋಗನಿರೋಧಕ ಚುಚ್ಚುಮದ್ದು ಇದಾಗಿದೆ. ಈ ಚುಚ್ಚುಮದ್ದನ್ನು ಮನುಷ್ಯರ ಮೇಲೆ ಪ್ರಯೋಗಿಸಲು ಕರೊನಾ ಸೋಂಕಿತರನ್ನು ನೋಂದಾಯಿಸಿಕೊಳ್ಳುವ ಪ್ರಕ್ರಿಯೆ ಆರಂಭಿಸಿರುವುದಾಗಿ ಹೇಳಿದ್ದಾರೆ.
ಕೊವ್ಯಾಕ್ಸಿನ್ ಅನ್ನು ವೆರೋ ಸೆಲ್ ಪ್ಲಾಟ್ಫಾರಂ ಮೇಲೆ ಅಭಿವೃದ್ಧಿಪಡಿಸಲಾಗಿದೆ. ಇನ್ಆಯಕ್ಟಿವೇಟೆಡ್ ರೋಗನಿರೋಧಕ ಚುಚ್ಚುಮದ್ದುಗಳು ಬಹಳಷ್ಟು ಸೋಂಕುಗಳಿಗೆ ಪರಿಣಾಮಕಾರಿ ಎನಿಸಿವೆ. ಅವುಗಳ ಸಾಲಿಗೆ ಕೊವ್ಯಾಕ್ಸಿನ್ ಕೂಡ ಸೇರುತ್ತದೆ ಎಂದು ಹೇಳಿದ್ದಾರೆ.
ಪುಣೆಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಅವರು ಕರೊನಾ ವೈರಾಣುವಿನ ಸ್ಟ್ರೈನ್ ಅನ್ನು ಪ್ರತ್ಯೇಕಿಸಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಗೆ (ಐಸಿಎಂಆರ್) ಕೊಟ್ಟರು. ಅದನ್ನು ಪಡೆದುಕೊಂಡ ಬಿಬಿಐಎಲ್ ರೋಗನಿರೋಧಕ ಚುಚ್ಚುಮದ್ದಿನ ಕ್ಯಾಂಡಿಡೇಟ್ ಅನ್ನು ಸಿದ್ಧಪಡಿಸಿತು. ಭಾರತ್ ಬಯೋಟೆಕ್ ಈ ಹಿಂದೆ ರೇಬಿಸ್, ಪೋಲಿಯೋ, ರೊಟಾವೈರಸ್, ಜಾಪನೀಸ್ ಎನ್ಸಿಫಲೈಟಿಸ್, ಚಕೂನ್ಗುನ್ಯಾ ಮತ್ತು ಝೈಕಾ ಸೋಂಕು ನಿವಾರಣೆಗಾಗಿ ಇನ್ಆಯಕ್ಟಿವೇಟೆಡ್ ರೋಗನಿರೋಧಕಗಳನ್ನು ಅಭಿವೃದ್ಧಿಪಡಿಸಿದ ಅನುಭವ ಹೊಂದಿದೆ. ಇದೀಗ ಆ ಸಂಸ್ಥೆ ಕೋವಿಡ್-19 ಸೋಂಕಿಗೂ ಇನ್ಆಯಕ್ಟಿವೇಟೆಡ್ ರೋಗನಿರೋಧಕ ಚಚ್ಚುಮದ್ದನ್ನು ಸಿದ್ಧಪಡಿಸಿದೆ ಎಂದು ತಿಳಿಸಿದ್ದಾರೆ.
ಈ ಚುಚ್ಚುಮದ್ದನ್ನು ಸೋಂಕಿತರಿಗೆ ಕೊಟ್ಟಾಗ, ಅದರಲ್ಲಿರುವ ವೈರಾಣುವಿನ ಸ್ಟ್ರೈನ್ಗೆ ಸೋಂಕು ಉಂಟು ಮಾಡಲಾಗಲಿ ಅಥವಾ ವಂಶಾಭಿವೃದ್ಧಿಗಾಗಲಿ ಅವಕಾಶ ಇರುವುದಿಲ್ಲ. ಹಾಗಾಗಿ ಮೃತ ವೈರಾಣುವಾಗಿ ಇದು ರೋಗನಿರೋಧಕ ವ್ಯವಸ್ಥೆಯನ್ನು ಜಾಗೃತಗೊಳಿಸುತ್ತಾ, ಕರೊನಾ ವೈರಾಣು ವಿರುದ್ಧ ರೋಗನಿರೋಧಕಶಕ್ತಿಯಾಗಿ ಕೆಲಸ ಮಾಡುತ್ತದೆ ಎಂದು ವಿವರಿಸಿದ್ದಾರೆ.
click and follow Indiaherald WhatsApp channel