ನಮ್ಮ ಭಾರತ ಅಭಿವೃದ್ಧಿ ಶೀಲ ರಾಷ್ಟ್ರಗಳ ಪಟ್ಟಿಯಲ್ಲಿ ಸೇರುವ ಒಂದು ದೇಶ, ನಮ್ಮ ಭಾರತದಲ್ಲಿ ಭ್ರಷ್ಟಾಚಾರ, ನಿರುದ್ಯೋಗ, ಬಡತನ, ಜೊತೆಗೆ ಅತೀ ಹೆಚ್ಚಾದ ಜನ ಸಂಖ್ಯೆ , ಇವೆಲ್ಲವೂ ಕೂಡ ನಮ್ಮ ದೇಶವನ್ನು ಬಹಳವಾಗಿ ಕಾಡುತ್ತಿರುವಂತಹ ಸಮಸ್ಯೆಯಾಗಿ ಪರಿಣಮಿಸಿದೆ. ಇವೆಲ್ಲವೂ ಕೂಡ ಭಾರತವನ್ನು ಎಲ್ಲಾ ಕ್ಷೇತ್ರಗಳಲ್ಲೂ ಕುಡ ಹಿಂದೆ ಬೀಳುವಂತೆ ಮಾಡಿದೆ. ಇದರಿಂದಾಗಿ ನಮ್ಮ ದೇಶ ಬಡ ರಾಷ್ಟ್ರವೆಂದು ಗುರುತಿಸಿಕೊಂಡಿದೆ. ಆದರೆ ವಿಶ್ವ ಸಂಸ್ಥೆ ನಡೆಸಿರುವಂತಹ ಬಹು ಆಯಾಮದ ಬಡತನ ಸಮೀಕ್ಷೆಯಲ್ಲಿ ಭಾರತಕ್ಕೆ ಸಿಕ್ಕಿರುವ ಸ್ಥಾನ ಗೊತ್ತಾ..?

 

ಬಹು ಆಯಾಮದ ಬಡತನ ಗುಂಪಿನಲ್ಲಿದ್ದ ಜನರ ಪ್ರಮಾಣವನ್ನು ಭಾರತವು ದಾಖಲೆ ಮಟ್ಟದಲ್ಲಿ ಕಡಿಮೆಗೊಳಿಸಿದೆ. 2005-2006 ಮತ್ತು 2015-2016 ಮಧ್ಯೆ ಸುಮಾರು 273 ಮಿಲಿಯನ್ ಭಾರತೀಯರು ಬಹುಆಯಾಮದ ಬಡತನ ರೇಖೆಯಿಂದ ಹೊರಬಂದಿದ್ದಾರೆ ಎಂದು ವಿಶ್ವಸಂಸ್ಥೆ ವರದಿ ತಿಳಿಸಿದೆ.

 

ಸಮೀಕ್ಷೆಗೆ ಒಳಪಟ್ಟ 75 ದೇಶಗಳಲ್ಲಿ 65 ದೇಶಗಳು 2000ದಿಂದ 2019 ನಡುವಿನ ಅವಧಿಯಲ್ಲಿ ತಮ್ಮಲ್ಲಿರುವ ಬಹುಆಯಾಮದ ಬಡತನ ಮಟ್ಟವನ್ನು ಗಣನೀಯವಾಗಿ ಕಡಿತಗೊಳಿಸಿವೆ ಎಂದು ವಿಶ್ವಸಂಸ್ಥೆಯ ಅಭಿವೃದ್ಧಿ ಯೋಜನೆ(ಯುಎನ್ಡಿಪಿ) ಮತ್ತು ದಿ ಆಕ್ಸ್ಫರ್ಡ್ ಪಾವರ್ಟಿ ಆಯಂಡ್ ಹ್ಯೂಮನ್ ಡೆವಲಪ್ಮೆಂಟ್ ಇನಿಷಿಯೇಟಿವ್(ಒಪಿಎಚ್) ಬಿಡುಗಡೆಗೊಳಿಸಿದ ವರದಿ ವಿವರಿಸಿದೆ.

 

ಅನಾರೋಗ್ಯ, ಶಿಕ್ಷಣದ ಕೊರತೆ, ಅಸಮರ್ಪಕ ಜೀವನ ಮಟ್ಟ, ಕಳಪೆ ದರ್ಜೆಯ ಕೆಲಸ, ಹಿಂಸೆಯ ಬೆದರಿಕೆ, ಅಪಾಯಕರ ಪರಿಸರದಲ್ಲಿ ಜೀವನ - ಇವು ಬಹುಆಯಾಮದ ಬಡತನ ವಿಭಾಗದಲ್ಲಿ ಒಳಗೊಂಡಿದೆಬಹು ಆಯಾಮದ ಬಡತನ ಸೂಚ್ಯಾಂಕ ಮೌಲ್ಯ(ಎಂಪಿಐ)ವನ್ನು ಕಡಿಮೆಗೊಳಿಸಿದ 65 ದೇಶಗಳಲ್ಲಿ 50 ದೇಶಗಳು ಬಡತನದಲ್ಲಿ ಜೀವಿಸುವ ಜನರ ಪ್ರಮಾಣವನ್ನೂ ಕಡಿಮೆಗೊಳಿಸಿವೆ. ಇದರಲ್ಲಿ ಭಾರತ ಅಗ್ರಸ್ಥಾನದಲ್ಲಿದ್ದು ಅಂದಾಜು 273 ಮಿಲಿಯನ್ ಜನರು 10 ವರ್ಷದ ಅವಧಿಯಲ್ಲಿ ಬಹುಆಯಾಮದ ಬಡತನ ವ್ಯಾಪ್ತಿಯಿಂದ ಹೊರಗೆ ಬಂದಿದ್ದಾರೆ.

 

ವಿಭಿನ್ನ ಆರಂಭಿಕ ಬಡತನ ಮಟ್ಟವನ್ನು ಹೊಂದಿರುವ ದೇಶಗಳು ಏನನ್ನು ಸಾಧಿಸಬಹುದು ಎಂಬುದನ್ನು ವಿಶ್ವದ ಜನಸಂಖ್ಯೆಯ ಸುಮಾರು ಐದನೇ ಒಂದಂಶದಷ್ಟು ಜನಸಂಖ್ಯೆಯನ್ನು ಹೊಂದಿರುವ ಐದು ದೇಶಗಳು ತೋರಿಸಿವೆ. ಭಾರತದಲ್ಲಿ ಬಹುಆಯಾಮದ ಬಡತನ ವ್ಯಾಪ್ತಿಯಲ್ಲಿರುವವರ ಸಂಖ್ಯೆಯು ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರ ವಿಭಾಗದ ಜನಸಂಖ್ಯಾ ದತ್ತಾಂಶ(2019)ವನ್ನು ಆಧರಿಸಿದೆ. ಭಾರತ ಮತ್ತು ನಿಕರಾಗುವಾ ದೇಶಗಳು ಕ್ರಮವಾಗಿ 10 ಮತ್ತು 10.5 ವರ್ಷಗಳಲ್ಲಿ ಮಕ್ಕಳೊಳಗಿನ ಎಂಪಿಐ ಮೌಲ್ಯವನ್ನು ಅರ್ಧಕ್ಕೆ ಇಳಿಸಿವೆ.

 

ಬಾಂಗ್ಲಾದೇಶ, ಬೊಲಿವಿಯ, ಕಿಂಗ್ಡಮ್ ಆಫ್ ಎಸ್ವಾತಿನಿ, ಗಾಬೊನ್, ಜಾಂಬಿಯಾ, ಗಯಾನ, ಭಾರತ, ಲೈಬೀರಿಯ, ಮಾಲಿ, ಮೊಝಾಂಬಿಕ್, ನಿಜೆರ್, ನಿಕರಾಗುವ, ನೇಪಾಳ ಮತ್ತು ರವಾಂಡ ದೇಶಗಳು ವಿವಿಧ ಪ್ರದೇಶಗಳಲ್ಲಿ ಬಹುಆಯಾಮದ ಬಡತನವನ್ನು ಕಡಿಮೆಗೊಳಿಸಿದೆ. ಕೋವಿಡ್-19 ದೇಶಗಳ ಅಭಿವೃದ್ಧಿ ಗತಿಯ ಮೇಲೆ ವ್ಯಾಪಕ ಪರಿಣಾಮ ಬೀರಿದೆ. ಆದರೆ ಕೊರೋನ ಸೋಂಕಿಗೂ ಹಿಂದಿನ ಅಂಕಿಅಂಶಗಳು ಭರವಸೆಯ ಸಂದೇಶವನ್ನು ನೀಡುತ್ತವೆ. ಜನತೆ ತಮ್ಮ ದೈನಂದಿನ ಬದುಕಿನಲ್ಲಿ ಅನುಭವಿಸುತ್ತಿರುವ ಬಡತನದ ಸಮಸ್ಯೆಯನ್ನು ನಿವಾರಿಸಲು ಮತ್ತು ಮಿಲಿಯಾಂತರ ಜನರ ಜೀವನಮಟ್ಟವನ್ನು ಸುಧಾರಿಸಲು ಯಶಸ್ಸಿನ ಕತೆಗಳು ಪ್ರೇರಣೆಯಾಗಲಿವೆ ಎಂದು ಆಕ್ಸ್ಫರ್ಡ್ ವಿವಿಯ ಒಪಿಎಚ್ ನಿರ್ದೇಶಕಿ ಸಬೀನಾ ಅಲ್ಕೈರ್ ಹೇಳಿದ್ದಾರೆ.

 

ಕೋವಿಡ್-19 ರೀತಿಯ ಇನ್ನೂ ಹಲವು ಮಾರಕ ಸೋಂಕು ಶೀಘ್ರವೇ ವಿಶ್ವವನ್ನು ಕಂಗೆಡಿಸಲಿದೆ. ಪ್ರತಿಯೊಂದೂ ಬಡಜನರ ಮೇಲೆ ಹಲವು ವಿಧದ ಪರಿಣಾಮ ಬೀರಲಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಬಡತನದ ಸಮಸ್ಯೆ ಹಾಗೂ ಬಡತನಕ್ಕೆ ಗುರಿಯಾಗುವ ಸಮಸ್ಯೆಯನ್ನು ಪರಿಹರಿಸಬೇಕಿದೆ ಎಂದು ವಿಶ್ವಸಂಸ್ಥೆಯ ಮಾನವ ಅಭಿವೃದ್ಧಿ ವರದಿ ಇಲಾಖೆಯ ನಿರ್ದೇಶಕ ಪೆಡ್ರೋ ಕಾನ್ಸಿಕೊ ಹೇಳಿದ್ದಾರೆ.

మరింత సమాచారం తెలుసుకోండి: