ಕೊರೋನಾ ವೈರಸ್ ತಡೆಗೆ ದೇಶದಲ್ಲಿ ಲಾಕ್ ಡೌನ್ ಮಾಡಲಾಗಿರುವುದರಿಂದ ದೇಶದಲ್ಲಿ ನಡೆಬೇಕಿದ್ದ ಅದೆಷ್ಟೋ ಶುಭ ಸಮಾರಂಭಗಳು ಮದುವೆ ಮುಂಜಿಗಳನ್ನು ಮುಂದೂಡಲಾಗಿದೆ ಇನ್ನೂ ಕೆಲವು ಕಾರ್ಯಕ್ರಮಗಳು ಮುರಿದು ಬಿದ್ದಿದೆ ಆದರೆ ಇಲ್ಲೊಂದು ಪ್ರಕರಣ ಒಂದು ಮದುವೆಯನ್ನು ಮಾಡಿಸುವ ನಿಟ್ಟಿನಲ್ಲಿ ರಾತ್ರಿಯ ಸಮಯದಲ್ಲಿ ನ್ಯಾಯಾಲಯದ ಬಾಗಿಲನ್ನೇ ತೆರೆದು ಜೋಡಿಗಳಿಗೆ ಮದುವೆ ಮಾಡಿಸಿರುವ ಘಟನೆ ನಡೆದಿದೆ.. ಅಷ್ಟಕ್ಕೂ ಇದು ನಡೆದ್ದಾದರೂ ಎಲ್ಲಿ ಗೊತ್ತಾ..?
ಕೊರೋನಾ ವೈರಸ್ ಇಂದಾಗಿ ಇಡೀ ದೇಶವೇ ಲಾಕ್‌ಡೌನ್ ಆಗಿರುವುದರಿಂದ, ವಧು-ವರರಾಗುವ ಕನಸು ಕಂಡಿದ್ದ ಲಕ್ಷ ಲಕ್ಷ ಸಂಖ್ಯೆಯ ಜೋಡಿಗಳಿಗೆ ಲಾಕ್ಡೌನ್ ಸದ್ಯದ ಪರಿಸ್ಥಿತಿಯಲ್ಲಿ ಶಾಕ್ ಕೊಟ್ಟಿದೆ. ಅದೆಷ್ಟೋ ಮದುವೆಗಳು ಮುಂದೂಡಲ್ಪಟ್ಟಿದ್ದರೆ, ವಧು ಅಥವಾ ವರ ವಿದೇಶದಿಂದ ಬಂದಿದ್ದಾರೆ ಎನ್ನುವ ಕಾರಣಕ್ಕೆ ಕರೊನಾ ಸೋಂಕಿನ ಕಾರಣ ನೀಡಿ, ಕೆಲವು ಮದುವೆಗಳು ರದ್ದು ಕೂಡ ಆಗಿರುವ ಘಟನೆ ನಡೆದಿದೆ. ಆದರೆ ಹರಿಯಾಣದ ರೋಹ್ಟಕ್ನಲ್ಲಿ ಜೋಡಿಯೊಂದಕ್ಕೆ ಮದುವೆ ಮಾಡಿಸುವ ನಿಟ್ಟಿನಲ್ಲಿ ನ್ಯಾಯಾಲಯವೇ ರಾತ್ರಿ ಬಾಗಿಲನ್ನು ತೆರೆದಿರುವ ಘಟನೆ ಇದಾಗಿದೆ. ರೋಹ್ಟಕ್ ಯುವಕ ಹಾಗೂ ಮೆಕ್ಸಿಕನ್ ಹುಡುಗಿಗಾಗಿ ಮ್ಯಾಜಿಸ್ಟ್ರೇಟ್ ಕೋರ್ಟ್ ಬಾಗಿಲು ತೆರೆದು ಅದೂ ರಾತ್ರಿಯ ವೇಳೆ ಕಾರ್ಯ ನಿರ್ವಹಿಸಿ ನವ ದಂಪತಿಯ ಮದುವೆಗೆ ಅಧಿಕೃತ ಮುದ್ರೆ ಒತ್ತಿ ಶುಭ ಹಾರೈಸಿ ಬೀಳ್ಕೊಟ್ಟಿದೆ.
ಇಂಥದ್ದೊಂದು ಲಾಕ್ಡೌನ್ ಮದುವೆ ಮಾಡಿಕೊಂಡಿರುವ ವರ ನಿರಂಜನ್ ಕಶ್ಯಪ್ ಮತ್ತು ವಧು ಡಾನಾ ಜೋಹೇರಿ ಓಲಿವೆರೋಸ್ ಕ್ರೂಸ್.
ನಿರಂಜನ್ ಮತ್ತು ಡಾನಾ ಪ್ರೇಮ್ ಕಹಾನಿ ಶುರುವಾರದ್ದು 2017 ರಲ್ಲಿ. ಭಾಷಾ ಕಲಿಕೆ ಆಯಪ್ನಲ್ಲಿ ಇವರ ಪರಿಚಯವಾಗಿತ್ತು. ಪರಿಚಯ ಪ್ರೇಮಕ್ಕೆ ತಿರುಗಿ 2018 ರಲ್ಲಿ ಇಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ನಿಶ್ಚಿತಾರ್ಥದ ನಂತರ ಡಾನಾ ಮೆಕ್ಸಿಕನ್ಗೆ ವಾಪಸ್ ಹೋದರು. ಇದೇ ಫೆಬ್ರವರಿ ತಿಂಗಳಿನಲ್ಲಿ ಮದುವೆಯ ವಿಷಯ ಮಾತನಾಡಲು ಡಾನಾ ತಾಯಿಯ ಜತೆ ಭಾರತಕ್ಕೆ ಬಂದಿದ್ದರು. ಎರಡೂ ಮನೆಯವರು ಕುಳಿತು ಮಾತುಕತೆ ನಡೆಸಿದ ನಂತರ ಮದುವೆಯಾಗಲು ಮುಹೂರ್ತ ಫಿಕ್ಸ್ ಮಾಡಲಾಯಿತು.
ವರ ಭಾರತ, ವಧು ಮೆಕ್ಸಿಕನ್ ಆಗಿರುವ ಕಾರಣ ವಿಶೇಷ ವೈವಾಹಿಕ ಕಾಯ್ದೆ ಅಡಿ ಮದುವೆ ನಡೆಯಬೇಕಿತ್ತು. ಈ ಹಿನ್ನೆಲೆಯಲ್ಲಿ ಫೆಬ್ರುವರಿ ಅಂತ್ಯದಲ್ಲಿ ಅವರು ಈ ಕಾಯ್ದೆ ಅಡಿ ಮದುವೆಗೆ ಕೋರಿ ರಿಜಿಸ್ಟರ್ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಇದು ರಿಜಿಸ್ಟರ್ ಮ್ಯಾರೇಜ್ ಆಗಿರುವ ಕಾರಣ, ನಿಯಮದ ಪ್ರಕಾರ, ಅರ್ಜಿ ಸಲ್ಲಿಸಿ ೩೦ ದಿನಗಳ ನೋಟಿಸ್ ಅವಧಿ ಇರುತ್ತದೆ. ಆ ಅವಧಿಯೊಳಗೆ ಎರಡೂ ಮನೆಯವರು ಯಾವುದೇ ತರಕಾರು ಮಾಡದಿದ್ದರೆ ನಂತರ ಮದುವೆಯನ್ನು ನೋಂದಣಿ ಮಾಡಲಾಗುತ್ತದೆ.
ಅದೇ ರೀತಿ ಇವರ ವಿವಾಹಕ್ಕೂ ೩೦ ದಿನಗಳ ನೋಟಿಸ್ ಅವಧಿ ನೀಡಲಾಗಿತ್ತು. ಆ ಅವಧಿಯು ಮುಗಿಯುವುದರೊಳಗೇ ಲಾಕ್ಡೌನ್ ಶುರುವಾಯಿತು. ಮದುವೆಗಾಗಿ ಮದುಮಗಳು ಮತ್ತು ಆಕೆಯ ತಾಯಿ ಭಾರತದಲ್ಲಿಯೇ ಇದ್ದರು. ವಿಮಾನಗಳು ರದ್ದಾಗಿರುವ ಕಾರಣ, ವಾಪಸ್ ಹೋಗುವಂತೆಯೂ ಇರಲಿಲ್ಲ. ಮುಹೂರ್ತವೂ ಫಿಕ್ಸ್ ಆಗಿಬಿಟ್ಟಿತು. ಜತೆಗೆ ಲಾಕ್ಡೌನ್ ನಿಯಮದಂತೆ ಅದು ಬಹುಜನರು ಸೇರಿಕೊಂಡು ನಡೆಯುವ ವಿವಾಹವೂ ಆಗಿರಲಿಲ್ಲ. ಮ್ಯಾಜಿಸ್ಟ್ರೇಟ್ ಕೋರ್ಟ್ನಲ್ಲಿ ನಡೆಯುವ ಸರಳ ವಿವಾಹವಾಗಿತ್ತು.
ಈ ಹಿನ್ನೆಲೆಯಲ್ಲಿ, ಎಲ್ಲರೂ ನಿಗದಿತ ವೇಳೆಯಲ್ಲಿಯೇ ರಿಜಿಸ್ಟ್ರರ್ ಮದುವೆಯನ್ನು ಅಧಿಕೃತಗೊಳಿಸುವಂತೆ ಜಿಲ್ಲಾಧಿಕಾರಿಗಳನ್ನು ಕೇಳಿದರು. ಇದಕ್ಕೆ ವಕೀಲರೂ ನೆರವಾದರು. ನಂತರ ಜಿಲ್ಲಾಧಿಕಾರಿ ಸೂಚನೆ ಪಡೆದು ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರನ್ನೂ ಕೋರಿಕೊಂಡರು. ಜತೆಗೆ ಲಾಕ್ಡೌನ್ ನಡುವೆ ಮದುವೆ ನಡೆಸಲು ಅನುಮತಿ ಕೋರಿ ಮೆಕ್ಸಿಯನ್ ರಾಯಭಾರಿ ಕಚೇರಿಗೂ ಮನವಿ ಸಲ್ಲಿಸಲಾಯಿತು.
ರಾಯಭಾರಿ ಕಚೇರಿಯಿಂದ ನಿರಾಕ್ಷೇಪಣಾ ಪತ್ರ ಸಿಕ್ಕಾಗ ರಾತ್ರಿಯಾಗಿತ್ತು. ನಂತರ ಅದೇ ಮುಹೂರ್ತದಲ್ಲಿ ಅಂದರೆ ಏ.13ರ ರಾತ್ರಿ 8ಗಂಟೆಗೆ ಮದುವೆ ನೋಂದಣಿ ಮಾಡಿ ಮ್ಯಾಜಿಸ್ಟ್ರೇಟ್ ಅಧಿಕೃತ ಮುದ್ರೆ ಒತ್ತಿದರು
click and follow Indiaherald WhatsApp channel