ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಿನ್ನೆಯಷ್ಟೇ ತಮ್ಮ ಜನ್ಮ ದಿನ ಆಚರಿಸಿಕೊಂಡಿದ್ದಾರೆ. ಜನ್ಮದಿನದಂದೇ ಅಭಿಮಾನಿಗಳಿಗೆ ಭರ್ಜರಿ ಸರ್ಪ್ರೈಸ್ ನೀಡಿದ್ದಾರೆ. ಇದರಿಂದ ರಕ್ಷಿತ್ ಶೆಟ್ಟಿ ಅಭಿಮಾನಿಗಳಂತೂ ಫುಲ್ ಖುಷ್ ಆಗಿದ್ದಾರೆ ಎಂದರೆ ತಪ್ಪಿಲ್ಲ.

 

( ಶ್ರೀಮನ್ನಾರಾಯದ ಚಿತ್ರದ ಪೋಸ್ಟರ್)

 

ಹೌದು, ನಿನ್ನೆ ರಕ್ಷಿತ್ ಶೆಟ್ಟಿ ಜನ್ಮ ದಿನ. ಈ ದಿನ ರಕ್ಷಿತ್ ಎರಡೆರಡು ಸರ್ಪ್ರೈಸ್ ನೀಡಿರೋದು ವಿಶೇಷ. ಒಂದು ಸಾಮಾಜಿಕ ಜಾಲತಾಣಕ್ಕೆ ರಕ್ಷಿತ್ ರಿ ಎಂಟ್ರಿ ಕೊಟ್ಟಿರೋದು, ಮತ್ತೊಂದು ರಕ್ಷಿತ್ ಮುಂದಿನ ಚಿತ್ರ ಅವನೇ ಶ್ರೀ ಮನ್ನಾರಾಯಣ ಚಿತ್ರದ ಪೋಸ್ಟರ್ ನಿನ್ನೆಯಷ್ಟೇ ಬಿಡುಗಡೆ ಆಗಿರುವುದು. ಹೀಗಾಗಿ ರಕ್ಷಿತ್ ಇದೀಗ ಫುಲ್ ಖುಷಿಯಿಂದ ಇದ್ದಾರೆ.

 

 

ಇದಿಷ್ಟೇ ಅಲ್ಲದೇ, ಬರ್ಥಡೇ ದಿನವೇ ರಕ್ಷಿತ್ ಅಭಿಮಾನಿಗಳಿಗೆ ಸಖತ್ ಟ್ರೀಟ್ ನೀಡಿದ್ದಾರೆ. ಹುಟ್ಟು ಹಬ್ಬದ ದಿನದಂದು ಅವರು ಮಸ್ತ್ ಮಜಾ ಮಾಡಿದ್ದಾರೆ. ಹುಲಿ ಹೆಜ್ಜೆ ಹಾಕಿ ರಕ್ಷಿತ್ ಸ್ನೇಹಿತರ ಜೊತೆ ಡ್ಯಾನ್ಸ್ ಮಾಡಿದ್ದಾರೆ‌. ಇದು ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

 

మరింత సమాచారం తెలుసుకోండి: