ಸ್ಯಾಂಡಲ್ ವುಡ್ ನ ಮೇರು ನಟ ಅಣ್ರಾವ ಮಗ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪ್ರಸ್ತುತ ಫಿಟ್ ಅಂಡ್ ಫೈನ್ ಆಗಿರುವ ನಟ. ಶಸ್ತ್ರ ಚಿಕಿತ್ಸೆ ನಿಮಿತ್ತ ರೆಸ್ಟ್ ಮಾಡಿದ್ದ ಶಿವರಾಜ್ ಕುಮಾರ್ ಇದೀಗ ಅದೇ ಖದರ್, ಅದೇ ಖಡಕ್ ಡೈಲಾಗ್ ನೊಂದಿಗೆ ಮತ್ತೇ ಸಿನಿಮಾ ಸುರು ಮಾಡಿದ್ದಾರೆ. 


 57ನೇ ವಯಸ್ಸಿನಲ್ಲಿಯೂ ಚಿರಯುವಕರಂತೆ ಕಂಗೊಳಿಸುವ ಶಿವಣ್ಣ ಫಿಟ್ ನೆಸ್ ಸೀಕ್ರೆಟ್ ಜಿಮ್ ಮತ್ತು ಯೋಗ. ಸೆಂಚುರಿ ಸ್ಟಾರ್ ಎನರ್ಜಿ, ಡ್ಯಾನ್ಸ್ ಗೆ ಫಿದಾ ಆಗದವರೆ ಇಲ್ಲ. ಪ್ರತಿ ಸಿನಿಮಾದಲ್ಲೂ ಯಂಗ್ ಅಂಡ್ ಎನರ್ಜಿಟಿಕ್ ಆಗಿ ಕಾಣಿಸಿಕೊಳ್ಳುವ ಶಿವಣ್ಣ ಶಸ್ತ್ರ ಚಿಕಿತ್ಸೆ ನಂತರ ವರ್ಕೌಟ್ ಗೆ ಕೊಂಚ ಬ್ರೇಕ್ ಹಾಕಿದ್ದರು. ಈಗ ಮತ್ತೆ ಜಿಮ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಲಗು ವರ್ಕೌಟ್ ಮಾಡುತ್ತಿರುವ ಶಿವಣ್ಣ ಒಂದಿಷ್ಟು ಫೋಟೋಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಶಿವಣ್ಣ ಜಿಮ್ ಜೊತೆಗೆ ಯೋಗ ಕೂಡ ಮಾಡುತ್ತಿದ್ದಾರೆ. ವರ್ಕೌಟ್ ಮಾಡುವ ಫೋಟೋ ಶೇರ್ ಮಾಡಿ, "ಮಾನಸಿಕವಾಗಿ ಮತ್ತು ದೈಹಿಕವಾಗಿ ಫಿಟ್ ಮತ್ತು ಸ್ಟ್ರಾಂಗ್ ಆಗಿರಿ"ಎಂದು ಬರೆದುಕೊಂಡಿದ್ದಾರೆ.


ಹ್ಯಾಟ್ರಿಕ್ ಹೀರೋ ಪ್ರಸ್ತುತ ಭಜರಂಗಿ-2 ಚಿತ್ರದ ಚಿತ್ರೀಕರಣದಲ್ಲಿ ಕಾರ್ಯ ನಿರತರಾಗಿದ್ದಾರೆ. ಹರ್ಷ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಭಜರಂಗಿ 2 ಈಗಾಗಲೆ ಸಾಕಷ್ಟು ಚಿತ್ರೀಕರಣ ಮುಗಿಸಿ ಸದ್ಯ ಬೆಂಗಳೂರಿನ ಅರಮನೆ ಮೈದಾನದಲ್ಲಿ ಚಿತ್ರೀಕರಣ ಮಾಡುತ್ತಿದ್ದಾರೆ. ಭಜರಂಗಿ 2 ಚಿತ್ರದಿಂದ ಫಸ್ಟ್ ಪೋಸ್ಟರ್ ರಿಲೀಸ್ ಮಾಡಿದ್ದು ಬಿಟ್ಟರೆ ಚಿತ್ರದಿಂದ ಯಾವುದೆ ಮಾಹಿತಿ ಬಹಿರಂಗವಾಗಿಲ್ಲ. ಚಿತ್ರದಲ್ಲಿ ಶಿವಣ್ಣ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೇರ್ ಸ್ಟೈಲ್, ಕಾಸ್ಟ್ಯೂಮ್ ಎಲ್ಲಾ ವಿಭಿನ್ನವಾಗಿರಲಿದೆಯಂತೆ. ಚಿತ್ರದಲ್ಲಿ ಶಿವಣ್ಣಗೆ ನಾಯಕಿಯಾಗಿ ಭಾವನಾ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷ ಅಂದರೆ ಭಜರಂಗಿ-2 ಪ್ಯಾನ್ ಇಂಡಿಯ ಸಿನಿಮಾ ಮಾಡುವ ಪ್ಲಾನ್ ಮಾಡಿದ್ದಾರೆ. ಹಾಗಾಗಿ ಚಿತ್ರದ ಮೇಲೆ ಮತ್ತು ಮೇಕಿಂಗ್ ಮೇಲೆ ನಿರೀಕ್ಷೆ ದುಪ್ಪಟ್ಟಾಗಿದೆ. ಅದ್ದೂರಿಯಾಗಿ ಸೆಟ್ಟೇರಿರುವ ಭಜರಂಗಿ 2 ಚಿತ್ರಕ್ಕಾಗಿ ಈಗಾಗಲೇ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.


మరింత సమాచారం తెలుసుకోండి: