ನವದೆಹಲಿ: ಕೊರೋನಾ ವೈರಸ್ ಭಾರತದಲ್ಲಿ ದಿನದಿದ ದಿನಕ್ಕೆ ಬಹಳ ವೇಗವಾಗಿ ಹರಡುತ್ತಿದೆ. ಈ ಗಾಗಲೇ ಕೊರೋನಾ ವೈರಸ್ ದೇಶದಲ್ಲಿ ಸಾವಿರದ ಗಡಿಯನ್ನು ದಾಟಿ ನಾಗಾಲೋಟದಲ್ಲಿ ಬೆಳೆಯುತ್ತಿದೆ. ಇದಕ್ಕೆ ಕೇಂದ್ರ  ಸರ್ಕಾರ ಸಕಾಷ್ಟು ಕ್ರಮಗಳನ್ನು ಕೈಗೊಂಡರೂ ಕೂಡ ತನ್ನ ಕೈಮೀರಿ ಬೆಳೆಯುತ್ತಿರುವ ಕೊರೋನಾ ವೈರಸ್ ದೇಶದಲ್ಲಿ ಆತಂಕವನ್ನು ಸೃಷ್ಟಿ ಮಾಡಿದೆ. ಹಾಗೂ ದಿನದಿಂದ ದಿನಕ್ಕೆ ಇದಕ್ಕೆ ಬಲಿಯಾದವರ  ಪಟ್ಟಿ ಬೆಳೆಯುತ್ತಿದೆ ಇದಕ್ಕೆ ಹಿಡಿತವನ್ನು ಸಾಧಿಸಲು ಲಾಕ್ ಡೌನ್ ಆಡಿದರೂ ಪ್ರಯೋಜನ ವಾಗದೇ ಪ್ರತಿನಿತ್ಯ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಈ ಸಂದರ್ಭದಲ್ಲಿ  ಕೆಲ  ಅಧಿಕಾರಿಗಳ್ನು ದೆಹಲಿ ಸರ್ಕಾರ ಅಮಾನತು ಮಾಡಿದೆ ಅಷ್ಟಕ್ಕೂ ಆ ಅಧಿಕಾರಿಗಳನ್ನು ಅಮಾನತು ಮಾಡಿದ್ದಾದರೂ ಏಕೆ? ಇಲ್ಲಿದೆ ನೋಡಿ.

 

ಮಾರಕ ಕೊರೋನಾವೈರಸ್ ಹರಡದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ದೇಶಾದ್ಯಂತ ಹೆಮ್ಮಾರಿಗೆ ಬಲಿಯಾದವರ ಸಂಖ್ಯೆ ೨೮ಕ್ಕೆ ಏರಿಕೆ ಆಗಿದ್ದು, ೧೧೦೦ ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಹೆಚ್ಚುತ್ತಿರುವ ಸೋಂಕನ್ನು  ತಡೆಯಲು  ವಲಸೆ ಕಾರ್ಮಿಕರಿಂದ ಮಾರಣಾಂತಿಕ ವೈರಸ್ ಹರಡುವಿಕೆಯನ್ನು ನಿಯಂತ್ರಿಸಲು ಎಲ್ಲಾ ರಾಜ್ಯ ಹಾಗೂ ಜಿಲ್ಲಾ ಗಡಿಗಳನ್ನು ಬಂದ್ ಮಾಡುವಂತೆ ಆದೇಶಿಸಿರುವ ಕೇಂದ್ರ ಸರ್ಕಾರ, ಈಗಾಗಲೇ ವಲಸೆ ಹೋಗುತ್ತಿರುವವರನ್ನು 14 ದಿನಗಳ ಕ್ವಾರೆಂಟೈನ್ ಗೆ ಕಳುಹಿಸಲು ಸೂಚಿಸಿದೆ. ಯಾವ ಯಾವ ಕಾರ್ಮಿಕರು ಇರುವ ಸ್ಥಳದಲ್ಲೇ ಇರಬೇಕು ಎಂದು ಆದೇಶವನ್ನು ಹೊರಡಿಸಲಾಗಿದೆ.

 

ರಾಷ್ಟ್ರ ರಾಜಧಾನಿ ದೆಹಲಿವೊಂದಲ್ಲಿಯೇ 23ಹೊಸ ಪ್ರಕರಣಗಳು ನಿನ್ನೆ ವರದಿಯಾಗಿದ್ದು, ಒಟ್ಟಾರೇ ಸೋಂಕಿತರ ಸಂಖ್ಯೆ 72 ಆಗಿದೆ. ನೊಯ್ಡಾ, ಮಹಾರಾಷ್ಟ್ರ , ಬಿಹಾರ ಮತ್ತಿತರ ರಾಜ್ಯಗಳಲ್ಲಿಯೂ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.

 

ಮತ್ತೊಂದೆಡೆ ಲಾಕ್ ಡೌನ್ ಸಂದರ್ಭದಲ್ಲಿ ಕರ್ತವ್ಯದಲ್ಲಿ ಗಂಭೀರ ಲೋಪ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರದ ಇಬ್ಬರು ಹಿರಿಯ ಅಧಿಕಾರಿಗಳನ್ನು ಕೇಂದ್ರ ಸರ್ಕಾರ ಸೇವೆಯಿಂದ ಅಮಾನತು ಮಾಡಿದೆ. ಇತರ ಇಬ್ಬರಿಗೆ ಶೋಕಾಸ್ ನೋಟಿಸ್ ನೀಡಿದೆ.

 

ಸಾರಿಗೆ ವಿಭಾಗದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಹಣಕಾಸು ವಿಭಾಗದ ಪ್ರಧಾನ ಕಾರ್ಯದರ್ಶಿಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ ಎಂದು ಗೃಹ ಸಚಿವಾಲಯದ ವಕ್ತಾರರೊಬ್ಬರು ತಿಳಿಸಿದ್ದಾರೆ.

మరింత సమాచారం తెలుసుకోండి: