ಯಾವ ಮನುಷ್ಯ ತಾನೆ ತಾನು ಚನ್ನಾಗಿ ಬೆಳ್ಳಗೆ ಕಾಣ ಬೇಕು ಎಂದು ಬಯಸುವುದಿಲ್ಲ, ಪ್ರತಿಯೊಬ್ಬರಿಗೂ ತಾನು ನಾಲ್ಕು ಜನರ ಮುಂದೆ ಚನ್ನಾಗಿ ಕಾಣಬೇಕು ಎಂಬ ಪ್ರತಿಯೊಬ್ಬ ಮನುಷ್ಯನ ಮನಸ್ಸಿನಲ್ಲೂ ಕೂಡ ಮೂಡುವಂತಹ ಭಾವನೆ. ಆದರೆ ಈ ಆಸೆಯನ್ನು ತೀರಿಸಿಕೊಳ್ಳಲು ಸಾಕಷ್ಟು ಅಲಂಕಾರವನ್ನು ಮಾಡಿಕೊಳ್ಳುವುದುಂಟು  ಈ ಸಮಯದಲ್ಲಿ ನಾನಾ ವಿಧಧ ಕ್ರೀಮ್ ಗಳು  ಹಾಗೂ ಕೆಲವು ಲೋಷನ್ ಗಳನ್ನು ಬಳಸಿದ್ದುಂಟು. ಈ ರೀತಿ ಅಲಂಕಾರಮಾಡಿಕೊಳ್ಳುವ ಅಲಂಕಾರ ಪ್ರಿಯರು ಫೇರ್ ಅಂಡ್ ಲೌಲಿ ಬಳಸದ ಇರುವವರೇ ಇಲ್ಲ.

 ಜೊತೆಗೆ ಅಲಂಕಾರಿಕ ವಸ್ತುಗಳಿಗೆ ಈ ಫೇರ್ ಅಂಡ್ ಲೌಲಿ ಬ್ರಾಂಡ್ ಸ್ವರೂಪವನ್ನು ಪಡೆದುಕೊಂಡಿದೆ. ಆದರೆ ಅಲಂಕಾರಕ್ಕೆಂದು (ಮೇಕಪ್)  ಒಂದು ಬ್ರಾಂಡ್ ನಂತಿದ್ದ ಫೇರ್ ಅಂಡ್ ಲೌಲಿ ಇನ್ನು ಮುಂದೆ ಮಾರುಕಟ್ಟೆಯಲ್ಲಿ ಸಿಗುವುದಿಲ್ಲ.  ನಿಲ್ಲಿ ನಿಲ್ಲಿ ಗಾಬರಿ ಆಗಬೇಡಿ ನಾನು ಹೇಳಿದ್ದು ಫೇರ್ ಅಂಡ್ ಲೌಲಿ ಹೆಸರಿನ ಅಲಂಕಾರಿಕ ವಸ್ತು ಸಿಗುವುದಿಲ್ಲ ಅಂತ. ಆದರೆ ಈ ಫೇರ್ ಅಂಡ್ ಲೌಲಿ ಬೇರೊಂದು ಹೆಸರಿನಲ್ಲಿ ಮಾರುಕಟ್ಟೆಗೆ ಲಗ್ಗೆ ಇಡುತ್ತದೆ. ಅಂದರೆ ಇನ್ನು ಮುಂದೆ ಫೇರ್ ಅಂಡ್ ಲೌಲಿ ತನ್ನ ಹೆಸರನ್ನು ಬದಲಾಗಿಸಿಕೊಳ್ಳಲಿದೆ .  ಅಷ್ಟಕ್ಕೂ ಈ ಹೆಸರಿನ ಬದಲಾವಣೆ ಏಕೆ..?   

 

ಸೌಂದರ್ಯ ವರ್ಧಕ ಸಾಧನಗಳ ತಯಾರಿಯಲ್ಲಿ ಮುಂಚೂಣಿಯಲ್ಲಿರುವ ಹಿಂದೂಸ್ತಾನ್ ಯುನಿಲಿವರ್ ಕಂಪೆನಿಯು ತನ್ನ ಜನಪ್ರಿಯ ಸೌಂದರ್ಯ ವರ್ಧಕ ಉತ್ಪನ್ನ 'ಫೇರ್ ಆಯಂಡ್ ಲವ್ಲೀ'ಯ ಹೆಸರನ್ನು ಬದಲಾಯಿಸಲು ಉದ್ದೇಶಿಸಿದೆ.

 

ಸೌಂದರ್ಯಕ್ಕೆ ಹೊಸ ವ್ಯಾಖ್ಯಾನವನ್ನು ನೀಡುವುದು ಹಾಗೂ ತಮ್ಮ ಈ ಉತ್ಪನ್ನವನ್ನು ಇನ್ನಷ್ಟು ಜನಪ್ರಿಯಗೊಳಿಸುವ ಉದ್ದೇಶದಿಂದ ಈ ಹೆಸರನ್ನು ಬದಲಾಯಿಸಲು ನಿರ್ಧರಿಸಲಾಗಿದೆ ಎಂಬ ಕಾರಣವನ್ನು ಯೂನಿಲಿವರ್ ನೀಡಿದೆ.

 

ಆದರೆ ಇತ್ತೀಚೆಗೆ ಅಮೆರಿಕಾದಲ್ಲಿ ಹುಟ್ಟಿಕೊಂಡ ಮತ್ತು ಆ ಬಳಿಕ ವಿಶ್ವದ ಹಲವು ರಾಷ್ಟ್ರಗಳಿಗೆ ವ್ಯಾಪಿಸಿದ 'ಬ್ಲ್ಯಾಕ್ ಲೈವ್ ಮ್ಯಾಟರ್ಸ್' ಅಭಿಯಾನದಿಂದ ತಮ್ಮ ಈ ಉತ್ಪನ್ನಕ್ಕೆ ಆಗಬಹುದಾಗಿದ್ದ ವ್ಯತಿರಿಕ್ತ ಪರಿಣಾಮವನ್ನು ಮನಗಂಡು 'ಫೇರ್ ಆಯಂಡ್ ಲವ್ಲೀ' ಹೆಸರು ಬದಲಾಯಿಸುವ ಸಾಹಸಕ್ಕೆ ಕಂಪೆನಿ ಕೈ ಹಾಕಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ.

 

ಈ ಜನಪ್ರಿಯ ಸೌಂದರ್ಯವರ್ಧಕ ಉತ್ಪನ್ನದ ಹೊಸ ಹೆಸರನ್ನು ಶೀ‍ಘ್ರವೇ ಘೋಷಿಸಲಾಗುವುದು ಮತ್ತು ಹೊಸ ಹೆಸರಿಗೆ ಒಪ್ಪಿಗೆಗಾಗಿ ಕಾಯಲಾಗುತ್ತಿದೆ ಎಂಬ ಮಾಹಿತಿಯನ್ನು ಕಂಪೆನಿ ನೀಡಿದೆ.

 

ಜನಾಂಗೀಯ ತಾರತಮ್ಯ ಹಾಗೂ ನಿಂದನೆಗೆ ಅಂತ್ಯಹಾಡುವ ನಿಟ್ಟಿನಲ್ಲಿ ವಿದೇಶಗಳಲ್ಲಿ ವ್ಯಾಪಿಸಿರುವ ಈ ಅಭಿಯಾನವು ಬಿಳಿ ತ್ವಚೆ ಹಾಗೂ ಬಿಳಿ ಬಣ್ಣದ ಪ್ರಚಾರ ಮಾಡುವ ಹಲವು ಸೌಂದರ್ಯ ವರ್ಧಕ ಉತ್ಪನ್ನಗಳನ್ನು ಗುರಿಯಾಗಿಸಿಕೊಂಡಿದ್ದವು.

 

ಫೇರ್ ಆಯಂಡ್ ಲವ್ಲೀ ಸಹಿತ ಇನ್ನೂ ಕೆಲವು ಸೌಂದರ್ಯವರ್ಧಕ ಉತ್ಪನ್ನಗಳನ್ನು ನಿಷೇಧಿಸಬೇಕೆಂದು ಆನ್ ಲೈನ್ ಅಭಿಯಾನ ಜೋರಾಗಿಯೇ ನಡೆಯುತ್ತಿದೆ ಮತ್ತು ದೇಹದ ಬಣ್ಣದ ಹೆಸರಿನಲ್ಲಿ ಸೌಂದರ್ಯವರ್ಧನೆಯ ಪ್ರಚಾರವನ್ನು ಮಾಡುತ್ತಿರುವ ಹಾಗೂ ಆ ಮೂಲಕ ಜನಾಂಗೀಯ ನಿಂದನೆಗೆ ಪರೋಕ್ಷ ಕುಮ್ಮಕ್ಕು ನೀಡುತ್ತಿವೆ ಎಂದು ಆರೋಪಿಸಿ ಈ ಉತ್ಪನ್ನಗಳ ವಿರುದ್ಧ ಆನ್ ಲೈನ್ ದೂರುಗಳನ್ನು ಸಂಗ್ರಹಿಸುವ ಕೆಲಸಗಳೂ ನಡೆಯುತ್ತಿವೆ.

 

మరింత సమాచారం తెలుసుకోండి: