ಕೊರೋನಾ ಸೋಂಕಿನಿಂದ ಪ್ರಪಂಚದ ಅನೇಕ ರಾಷ್ಟ್ರಗಳು ಸಾಕಷ್ಟು ನಷ್ಟವನ್ನು ಅನುಭವಿಸುತ್ತಿದೆ. ಅದರಲ್ಲೂ ಹೆಚ್ಚಾಗಿ ಅಮೇಕಾ ಸಾಕಷ್ಟು ನಷ್ಟವನ್ನು ಅನುಭವಿಸುತ್ತಿದೆ. ಈ ಒಂದು ಸೋಂಕಿಕೆ ಇಡೀ ವಿಶಧ್ವದಲ್ಲಿ ಲಕ್ಷಾಂತರ ಜನರು ಬಲಿಯಾಗುತ್ತಿದ್ದಾರೆ. ಇದನ್ನು ಗಮನಿಸಿದ ಅಮೇರಿಕಾ ಪ್ರಪಂಚದ ಈ ಅನಾವುತಗಳಿಗೆ ಚೀನಾ ವೇ ಕಾರಣ ಎಂದು ಹೇಳುತ್ತಿದ್ದರೂ ವಿಶ್ವ ಆರೋಗ್ಯ ಸಂಸ್ಥೆ ಚೀನಾ ಪರ ನಿಂತದ್ದರಿಂದ ಕೋಪಗೊಂಡ ಅಮೇರಿಕಾ ವಿಶ್ವ ಆರೋಗ್ಯ ಸಂಸ್ಥೆಗೆ ನೋಟೀಸ್ ಜಾರಿ ಮಾಡಿದೆ. ಅಷ್ಟಕ್ಕೂ ಆ ನೊಟೀಸ್ ನಲ್ಲಿ ಏನಿದೆ..?
ವಿಶ್ವ ಆರೋಗ್ಯ ಸಂಸ್ಥೆ (WHO)ಯ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಚೀನಾದ ಆಜ್ಞೆಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ಆರಂಭಿಕ ಹಂತಗಳಲ್ಲಿ ಕೊರೊನಾ ಸಾಂಕ್ರಾಮಿಕ ರೋಗವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರಗುಳಿಯುವುದಾಗಿ ಮತ್ತು ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಅಮೆರಿಕದ ಹೂಡಿಕೆಯನ್ನು ನಿಲ್ಲಿಸುವುದಾಗಿ ಎಚ್ಚರಿಕೆ ನೀಡಿ ಪತ್ರ ಬರೆದಿದ್ದಾರೆ.
'ಸಾಂಕ್ರಾಮಿಕ ರೋಗಕ್ಕೆ ಸ್ಪಂದಿಸುವಲ್ಲಿ ನೀವು ಮತ್ತು ನಿಮ್ಮ ಸಂಸ್ಥೆ ಪುನರಾವರ್ತಿತವಾಗಿ ಮಾಡಿದ ತಪ್ಪುಗಳು ಜಗತ್ತಿಗೆ ಅತ್ಯಂತ ದುಬಾರಿಯಾಗಿದೆ ಎಂಬುದು ಸ್ಪಷ್ಟವಾಗಿದೆ. WHOಗೆ ಮುಂದುವರೆಯಲು ಇರುವ ಏಕೈಕ ಮಾರ್ಗವೆಂದರೆ ಚೀನಾದಿಂದ ಸ್ವಾತಂತ್ರ್ಯವನ್ನು ಪ್ರದರ್ಶಿಸಿಸುವುದು'ಎಂದು ಟೆಡ್ರೊಸ್ ಅಧಾನೊಮ್‌ಗೆ ಬರೆದ ಪತ್ರದಲ್ಲಿ ಟ್ರಂಪ್ ಹೇಳಿದ್ದಾರೆ. ಟ್ರಂಪ್ ತಮ್ಮ ನಾಲ್ಕು ಪುಟಗಳ ಪತ್ರದಲ್ಲಿ ಕಳೆದ ಡಿಸೆಂಬರ್‌ನಿಂದ ಪ್ರತಿ ಸಂದರ್ಭವನ್ನು ವಿವರಿಸಿದ್ದು, WHO ಜಗತ್ತಿಗೆ ಕೆಟ್ಟ ಸಲಹೆಯನ್ನು ನೀಡಿತು ಎಂದು ದೂಷಿಸಿದ್ದಾರೆ.
ಪ್ರಮುಖ ಸುಧಾರಣೆಗಳಿಗೆ ಬದ್ಧರಾಗಲು ಟ್ರಂಪ್ ಟೆಡ್ರೊಸ್ ಅಧಾನೊಮ್‌ಗೆ 30 ದಿನಗಳ ಕಾಲಾವಕಾಶ ನೀಡಿದ್ದು, ಹಾಗೂ WHO ಇದನ್ನು ಅನುಸರಿಸದಿದ್ದರೆ, 'ನಾನು WHOಗೆ ಅಮೆರಿಕಾದ ಹಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತೇನೆ ಮತ್ತು ನಮ್ಮ ಸದಸ್ಯತ್ವವನ್ನು ಮರುಪರಿಶೀಲಿಸಬೇಕಾಗುತ್ತದೆ' ಎಂದು ಎಚ್ಚರಿಸಿದ್ದಾರೆ. ಆದರೆ, ಅಮೆರಿಕ ಅಧ್ಯಕ್ಷರು ಹೇಳುತ್ತಿರುವ ಯಾವುದೇ ಪ್ರಮುಖ ಸುಧಾರಣೆಯನ್ನು ಸಾಮಾನ್ಯ ಸಂಸ್ಥೆ, ವಿಶ್ವ ಆರೋಗ್ಯ ಸಭೆ ಅನುಮೋದನೆಯೊಂದಿಗೆ ಮಾತ್ರ ಮಾಡಬಹುದಾಗಿದೆ' ಎಂದು ರಾಜತಾಂತ್ರಿಕರು ಹೇಳಿದ್ದಾರೆ.
ವಿಶ್ವ ಸಂಸ್ಥೆಯ ಅಂಗ ಸಂಸ್ಥೆಯಾದ ಆರೋಗ್ಯ ಸಂಸ್ಥೆಯಿಂದ ಹೊರನಡೆಯುವ ಬಗ್ಗೆ ಟ್ರಂಪ್ ಆಡಳಿತವು ಮಾತನಾಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಅನೇಕ ಬಾರಿ ಅಮೆರಿಕ WHOನಿಂದ ಹೊರ ನಡೆಯುವ ಮಾತನಾಡಿದೆ. ಆದರೆ, ಈ ಬಾರಿ ಅಮೆರಿಕ WHO ಮುಖ್ಯಸ್ಥರಿಗೆ ಬರೆದ ಪತ್ರವು ಬೆದರಿಕೆಯಂತಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
click and follow Indiaherald WhatsApp channel