ಇಡೀ ದೇಶದಲ್ಲಿ ಅತೀ ಹೆಚ್ಚು ಉದ್ಯೋಗವನ್ನು ಸೃಷ್ಟಿ ಮಾಡಿರುವಂತಹ ಸರ್ಕಾರಿ ಸಂಸ್ಥೆ ಯಾಗಿರುವ ರೈಲ್ವೆ ಇಲಾಖೆಯನ್ನು ಖಾಸಗೀಕರಣವನ್ನು ಮಾಡಲು ಕೇಂದ್ರ ಸರ್ಕಾರ ಈಗಾಗಲೇ ನಿರ್ಧಾರವನ್ನು ಮಾಡಿದ್ದು 2023ರಿಂದ ಖಾಸಗೀ ರೈಲು ಸಂಚಾರ ಆರಭವಾಗಬಹುದು, ಅಷ್ಟಕ್ಕೂ ಎಷ್ಟು ಖಾಸಗೀ ರೈಲುಗಳು ದೇಶದಾದ್ಯಂತ ಸಂಚರಿಸಲಿವೆ ಗೊತ್ತಾ..?

 

ದೇಶದ ಮೊದಲ ಖಾಸಗಿ ರೈಲು ಸಂಚಾರ 2023ಕ್ಕೆ ಪ್ರಾರಂಭವಾಗಲಿದೆ. ಮೊದಲ ಹಂತದಲ್ಲಿ 12 ಖಾಸಗಿ ರೈಲುಗಳನ್ನು 2023ರಲ್ಲಿ ಪರಿಚಯಿಸಲಾಗುವುದು ಮುಂದಿನ ಹಣಕಾಸು ವರ್ಷದಲ್ಲಿ ಇನ್ನೂ 45 ಮಾರ್ಗಗಳಲ್ಲಿ ವೇಳಾಪಟ್ಟಿ ಪ್ರಕಾರ ಈ ರೈಲುಗಳ ಸಂಚಾರ ನಡೆಯಲಿದೆ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.

 

ಅದಲ್ಲದೆ, 2027ರ ವೇಳೆಗೆ ಯೋಜನೆಯ ಎಲ್ಲಾ 151 ಖಾಸಗಿ ರೈಲುಗಳು ಹಳಿ ಮೇಲೆ ಸಂಚರಿಸಲಿದೆ ಎನ್ನಲಾಗಿದೆ. ಖಾಸಗಿ ಸಂಸ್ಥೆಗಳಿಗೆ ತನ್ನ ನೆಟ್‍ವರ್ಕ್‍ನಲ್ಲಿ ಪ್ರಯಾಣಿಕರ ರೈಲುಗಳನ್ನು ಓಡಿಸಲು ಅವಕಾಶ ನೀಡುವ ಯೋಜನೆಗೆ ಚಾಲನೆ ನೀಡುವ ಉದ್ದೇಶದಿಂದ ರೈಲ್ವೆ ಈ ತಿಂಗಳ ಆರಂಭದಲ್ಲಿ ದೇಶಾದ್ಯಂತ 109 ಜೋಡಿ ಮಾರ್ಗಗಳಲ್ಲಿ 151 ಆಧುನಿಕ ಪ್ರಯಾಣಿಕ ರೈಲುಗಳನ್ನು ಓಡಿಸಲು ಕಂಪನಿಗಳಿಂದ ಪ್ರಸ್ತಾವನೆಗಳನ್ನು ಆಹ್ವಾನಿಸಿದೆ. ಈ ಯೋಜನೆಯು ಖಾಸಗಿ ವಲಯದಿಂದ ಸುಮಾರು 30,000 ಕೋಟಿ ರೂ.ಗಳನ್ನು ಆಕರ್ಷಿಸಲಿದೆ.

 

ಖಾಸಗಿ ರೈಲುಗಳ ಯೋಜನೆಯ ಭಾಗವಾಗಿ, 2022-23ರಲ್ಲಿ 12, 2023-2024ರಲ್ಲಿ 45, 2025-26ರಲ್ಲಿ 50 ಮತ್ತು ಅಂತಿಮವಾಗಿ 2026-2027ರ ಅಂತ್ಯದಲ್ಲಿ 151 ರೈಲುಗಳು ಹಳಿ ಮೇಲೆ ಸಂಚಾರ ನಡೆಸಲಿದೆ.ಜುಲೈ 8 ರಂದು ಪ್ರಾರಂಭವಾಗಿರುವ ಆರ್ ಎಫ್‍ಕ್ಯೂ ನವೆಂಬರ್ ವೇಳೆಗೆ ಅಂತಿಮಗೊಳ್ಳುವ ಸಾಧ್ಯತೆಯಿದೆ. 2021ರ ಮಾರ್ಚ್ ವೇಳೆಗೆ ಬಿಡ್ ತೆರೆಯಲಾಗುತ್ತದೆ. 2021ರ ಏಪ್ರಿಲ್ 31 ರೊಳಗೆ ಬಿಡ್ ದಾರರ ಆಯ್ಕೆಯನ್ನು ಯೋಜಿಸಲಾಗಿದೆ ಎಂದು ರೈಲ್ವೆ ಹೇಳಿದೆ.

ಒಟ್ಟು ಆದಾಯದಲ್ಲಿ ಹೆಚ್ಚಿನ ಪಾಲನ್ನು ಉಲ್ಲೇಖಿಸುವ ಬಿಡ್ ದಾರರಿಗೆ ಯೋಜನೆಯನ್ನು ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾನಾವು ಖಾಸಗಿ ರೈಲು ಕಾರ್ಯಾಚರಣೆಯನ್ನು ಪ್ರಾರಂಭಿಸಲು ಆಶಿಸುತ್ತೇವೆ.

 

ಮಾರ್ಚ್ 2021 ರೊಳಗೆ ಟೆಂಡರ್‍ಗಳನ್ನು ಅಂತಿಮಗೊಳಿಸಲಾಗುವುದು ಮತ್ತು 2023 ರ ಮಾರ್ಚ್‍ನಿಂದ ರೈಲುಗಳು ಕಾರ್ಯನಿರ್ವಹಿಸುತ್ತವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರೈಲ್ವೆ ಪೂರ್ವ ನಿಗದಿತ ದಂಡವನ್ನೂ ಹೊಂದಿರಲಿದ್ದು, ಒಂದೊಮ್ಮೆ ನಿಗದಿತ ಕಾರ್ಯಕ್ಷಮತೆಯ ಮಾನದಂಡಗಳು ಮತ್ತು ಫಲಿತಾಂಶಗಳನ್ನು ಪೂರೈಸುವಲ್ಲಿ ವಿಫಲವಾದ ಕಾರಣ ಖಾಸಗಿ ಪಾಲುದಾರರಿಂದ ಮರುಪಡೆಯಲಾಗುತ್ತದೆ.

 

మరింత సమాచారం తెలుసుకోండి: