ಮುಂಬೈ: ಟೀಂ ಇಂಡಿಯಾದಲ್ಲಿ ಕೂಲ್ ಕ್ಯಾಪ್ಟನ್ ಅಂದರೆ ಸಾಕು ಆ ಪಂದ್ಯ ಗೆಲ್ಲೋದು ನಾವೇ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಇದೀಗ ಕೂಲ್ ಕ್ಯಾಪ್ಟನ್ ರ 15 ವರ್ಷಗಳ ಕ್ರಿಕೆಟ್ ಆಟದ ಜರ್ನಿಯ ಡೀಟೆಲ್ಸ್ ಇಲ್ಲಿದೆ ನೋಡಿ. 
 
2004 ಡಿಸೆಂಬರ್ 23ರಂದು ಅಂತಾರಾಷ್ಟ್ರೀಯ ಕ್ರಿಕೆಟ್​​​​ಗೆ ಒಬ್ಬ ಮ್ಯಾಚ್​ ವಿನ್ನರ್​, ಸಕ್ಸಸ್​ ಫುಲ್ ಕ್ಯಾಪ್ಟನ್ ಪಾದಾರ್ಪಣೆ ಮಾಡಿದ್ದ ದಿನ. ಮಹೇಂದ್ರ ಸಿಂಗ್ ಧೋನಿ, ತಮ್ಮದೇ ಆದ ವಿಶಿಷ್ಟ ಶೈಲಿಯ ಬ್ಯಾಟಿಂಗ್ ಹಾಗೂ ನಾಯಕತ್ವ ಗುಣದಿಂದ ವಿಶ್ವ ಕ್ರಿಕೆಟ್‌ನಲ್ಲಿ ಮೂಡಿಸಿದ ಛಾಪು ಅಷ್ಟಿಷ್ಟಲ್ಲ. ತಾಳ್ಮೆಯುತ ಹಾಗೂ ಮೃದು ಸ್ವಭಾವದ ಧೋನಿ, ಕೇವಲ ಭಾರತದಲ್ಲಷ್ಟೇ ಅಲ್ಲದೇ ವಿಶ್ವದಾದ್ಯಂತ ಅಪಾರ ಅಭಿಮಾನಿಗಳ ಬಳಗವನ್ನು ಕಟ್ಟಿಕೊಂಡಿದ್ದಾರೆ. ಅಲ್ಲದೆ, 2007ರಲ್ಲಿ ಚೊಚ್ಚಲ ಟಿ20 ವಿಶ್ವಕಪ್ ಹಾಗೂ 2011ರಲ್ಲಿ ಏಕದಿನ ವಿಶ್ವಕಪ್, ಐಸಿಸಿ ಚಾಂಪಿಯನ್ಸ್ ಟ್ರೋಫಿ ಸೇರಿದಂತೆ ಎಲ್ಲ ಮೂರು ಪ್ರಮುಖ ಐಸಿಸಿ ಟೂರ್ನಿಗಳನ್ನ ಗೆದ್ದ ವಿಶ್ವದ ಏಕೈಕ ನಾಯಕ ಧೋನಿ ಎನಿಸಿಕೊಂಡಿದ್ದಾರೆ. ಅಲ್ಲದೇ, ಧೋನಿ ಟೀಮ್ ಇಂಡಿಯಾ ಕ್ರಿಕೆಟ್​ ತಂಡಕ್ಕೆ ಎಂಟ್ರಿಕೊಟ್ಟ ಹೆಗ್ಗಳಿಕೆ ಇಂದಿಗೆ 15 ವರ್ಷ ಪೂರೈಸಿದ್ದಾರೆ.
 
ಟೀಮ್ ಇಂಡಿಯಾದ ಅತ್ಯಂತ ಯಶಸ್ವಿ ನಾಯಕರ ಸಾಲಿನಲ್ಲಿ ಗುರುತಿಸಿಕೊಂಡಿರುವ ಧೋನಿ, 2019 ಏಕದಿನ ವಿಶ್ವಕಪ್ ಸೆಮಿಫೈನಲ್ ಸೋಲಿನ ಬಳಿಕ ಕ್ರಿಕೆಟ್ ರಂಗದಿಂದ ದೂರವುಳಿದಿದ್ದಾರೆ. ಅಲ್ಲದೆ ಮಗದೊಂದು ಬಾರಿ ಬ್ಲೂ ಜೆರ್ಸಿ ಧರಿಸುವರೇ ಅಥವಾ ಕ್ರಿಕೆಟ್‌ಗೆ ವಿದಾಯ ಹಾಡುವರೇ ಎಂಬುದು ಊಹಪೋಹಾಗಳಿಗೆ ಕಾರಣವಾಗಿದೆ. ಆಸ್ಟ್ರೇಲಿಯಾದಲ್ಲಿ 2020ರಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಧೋನಿ ಆಡಬೇಕೆಂಬ ಬೇಡಿಕೆ ಬಲವಾಗಿ ಕೇಳಿಬಂದಿದೆ. 
 
ಭಾರತದ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಓರ್ವರಾಗಿರುವ ಧೋನಿ, 90 ಟೆಸ್ಟ್, 350 ಏಕದಿನ ಹಾಗೂ 98 ಟಿ-20 ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನ ಪ್ರತಿನಿಧಿಸಿದ್ದಾರೆ. ಈ ಪೈಕಿ ಟೆಸ್ಟ್ ‌ಕ್ರಿಕೆಟ್‌ಗೆ 2015ರಲ್ಲಿ ನಿವೃತ್ತಿ ಘೋಷಿಸಿದ್ದಾರೆ. ತಮ್ಮ ವೃತ್ತಿಬದುಕಿನ ಎಲ್ಲಾ ರೀತಿಯ ಕ್ರಿಕೆಟ್​​​ನಲ್ಲಿ 17 ಸಾವಿರಕ್ಕೂ ಅಧಿಕ ರನ್ ಗಳಿಸಿರುವ ಧೋನಿ, ಸದ್ಯ ಏಕದಿನ ಹಾಗೂ ಟಿ20 ಕ್ರಿಕೆಟ್​ನಲ್ಲಿ ಮುಂದುವರಿದಿದ್ದಾರೆ.

మరింత సమాచారం తెలుసుకోండి: