ಕೊರೋನಾ ವೈರಸ್  ದಿನದಿಂದ ದಿನಕ್ಕೆ ಪ್ರತಿನಿತ್ಯವೂ ಕೂಡ ಸಾಕಷ್ಟು ಪ್ರಮಾಣದಲ್ಲಿ  ಹೆಚ್ಚಾಗುತ್ತಲೇ ಇದೆ ಅದರಲ್ಲೂ ರಾಜ್ಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕೊರೋನಾ ಪ್ರಕರಣಗಳು ದಾಖಲಾಗುತ್ತಿವೆ. ಇದುವರೆಗೂ ಐದು ಆರು ಸಾವಿರದ ಗಡಿಯಲ್ಲಿರುವ ಕೊರೋನಾ ಸೋಂಕು ಕಳೆದ ದಿನಗಳಿಂದ ಏಳು ಸಾವಿರದ ಗಡಿಯನ್ನು ದಾಟಿ ಮುಂದೋಗಿತ್ತಿದೆ. ಅಷ್ಟಕ್ಕೂ ಕಳೆದು 24ಗಂಟೆಯಲ್ಲಿ ರಾಜ್ಯದಲ್ಲಿ ದಾಖಲಾದ ಕೊರೋನಾ ಸೋಂಕಿನ ಸಂಖ್ಯೆ ಎಷ್ಟು ಗೊತ್ತಾ..?

 

 

ಶನಿವಾರ ಸಾಯಂಕಾಲದಿಂದ ಭಾನುವಾರ ಸಾಯಂಕಾಲದವರೆಗಿನ ಕೋವಿಡ್ 19 ಸೋಂಕು ಪ್ರಕರಣಗಳ ವರದಿಯ ಪ್ರಕಾರ, ಈ 24 ಗಂಟೆಗಳ ಅವಧಿಯಲ್ಲಿ ರಾಜ್ಯದಲ್ಲಿ ಒಟ್ಟು 7040 ಕೋವಿಡ್ 19 ಸೋಂಕು ಪ್ರಕರಣಗಳು ವರದಿಯಾಗಿವೆ.




ಈ ನಿರ್ಧಿಷ್ಟ ಅವಧಿಯಲ್ಲಿ ರಾಜ್ಯದಲ್ಲಿ ಒಟ್ಟು 6680 ಸೋಂಕಿತರು ಗುಣಮುಖರಾಗಿದ್ದಾರೆ. ಮತ್ತು ಈ ಅವಧಿಯಲ್ಲಿ 124 ಸೋಂಕಿತರು ಮೃತಪಟ್ಟಿದ್ದಾರೆ. ಇದೀಗ ರಾಜ್ಯದಲ್ಲಿ ಒಟ್ಟು ಕೋವಿಡ್ 19 ಸೋಂಕಿತರ ಸಂಖ್ಯೆ 2 ಲಕ್ಷದ ಗಡಿ ದಾಟಿದ್ದು, ನಮ್ಮಲ್ಲಿ ಒಟ್ಟು 2,26,966 ಸೋಂಕು ಪ್ರಕರಣಗಳು ದಾಖಲಾಗಿವೆ. ಈ ನಡುವೆ ಸೋಂಕಿತರ ಚೇತರಿಕೆ ಸಂಖ್ಯೆಯೂ ಲಕ್ಷದ ಗಡಿಯನ್ನು ದಾಟಿರುವುದು ಆಶಾದಾಯಕ ವಿಷಯವಾಗಿದೆ. 1,41,491 ಸೊಂಕಿತರು ಇದೀಗ ಚೇತರಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಇದೀಗ ಒಟ್ಟು 81,512 ಸಕ್ರಿಯ ಕೋವಿಡ್ 19 ಸೋಂಕು ಪ್ರಕರಣಗಳಿವೆ.




ಹಾಗೂ ರಾಜ್ಯದಲ್ಲಿ ಕೋವಿಡ್ 19 ಸೊಂಕು ಸಂಬಂಧಿ 3947 ಸಾವಿನ ಪ್ರಕರಣಗಳು ದಾಖಲಾಗಿವೆ ಹಾಗೂ 16 ಜನ ಕೋವಿಡ್ 19 ಸೋಂಕಿತರು ಅನ್ಯ ಕಾರಣದಿಂದ ಮೃತಪಟ್ಟಿದ್ದಾರೆ. 692 ಸೋಂಕಿತರು ತುರ್ತು ನಿಗಾ ಘಟಕದಲ್ಲಿ ದಾಖಲುಗೊಂಡು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.




ಈ ಅವಧಿಯಲ್ಲಿ ಬೆಂಗಳೂರು ನಗರ ಜಿಲ್ಲೆಯಲ್ಲಿ 2131 ಕೋವಿಡ್ 19 ಸೊಂಕು ಪ್ರಕರಣಗಳು ವರದಿಯಾಗುವ ಮೂಲಕ ಸೋಂಕು ಪ್ರಕರಣಗಳಲ್ಲಿ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ. ಆ ಬಳಿಕದ ಸ್ಥಾನಗಳಲ್ಲಿ ಮೈಸೂರು (620), ಬೆಳಗಾವಿ (478), ಬಳ್ಳಾರಿ (381), ಕಲಬುರಗಿ (285), ಧಾರವಾಡ (268), ಉಡುಪಿ (237), ಯಾದಗಿರಿ (236), ದಕ್ಷಿಣ ಕನ್ನಡ (229), ದಾವಣಗೆರೆ (218), ಕೊಪ್ಪಳ (211), ರಾಯಚೂರು (183), ತುಮಕೂರು (169), ವಿಜಯಪುರ (158), ಬಾಗಲಕೋಟೆ (156), ಹಾಸನ (145) ಮತ್ತು ಬೀದರ್ (119) ಜಿಲ್ಲೆಗಳಿವೆ.




ಇನ್ನುಳಿದಂತೆ, ಚಿಕ್ಕಬಳ್ಳಾಪುರ (98), ಮಂಡ್ಯ (91), ಕೋಲಾರ (90), ಬೆಂಗಳೂರು ಗ್ರಾಮಾಂತರ (87), ಗದಗ (79), ಹಾವೇರಿ (76), ಚಿತ್ರದುರ್ಗ (71), ಚಿಕ್ಕಮಗಳೂರು (69), ಉತ್ತರ ಕನ್ನಡ (61), ಚಾಮರಾಜನಗರ (36), ರಾಮನಗರ (32), ಕೊಡಗು (25) ಮತ್ತು ಶಿವಮೊಗ್ಗ (1) ಸೇರಿದಂತೆ ರಾಜ್ಯದ ಒಟ್ಟು 30 ಜಿಲ್ಲೆಗಳಲ್ಲಿ ಇಂದು ಮೂರಂಕಿ ಹಾಗೂ ಎರಡಂಕಿಯ ಕೋವಿಡ್ 19 ಸೋಂಕಿನ ಪ್ರಕರಣಗಳು ವರದಿಯಾಗಿವೆ.

మరింత సమాచారం తెలుసుకోండి: