ದರ್ಶನ್ ಪಕ್ಷಾತೀತ ಎಂದು ಗುರುತಿಸಲಾಗುತ್ತಿದೆ. ಹೌದು ಯಾಕೆಂದರೆ ವಿಧಾನ ಸಭಾ ಚುನಾವಣೆ ವೇಳೆ ಸಿದ್ಧರಾಮಯ್ಯನವರ ಅವರ ಪರವಾಗಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬೆಂಬಲ ನೀಡಿ ಮತ ಯಾಚನೆ ಮಾಡಿದ್ದರು. ಆದರೆ ಅದಾದ ಮೇಲೆ ಕಳೆದ ಲೋಕಸಭೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಿದ್ದರು.
ಹೌದು, ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್ ಅವಾರ ಪರವಾಗಿ ಚಾಲೆಂಜಿಂಗ್ ಸ್ಟಾರ್ ಪ್ರಚಾರ ಮಾಡಿದ್ದರು. ಇದಾದ ಮೇಲೆ ಮಂಡ್ಯ ವಿಷ್ಯಕ್ಕೆ ಬಂದರೆ, ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರಿಗೆ ಬೆಂಬಲ ನೀಡಿ ಗೆಲ್ಲಿಸಿದ್ದರು.
ಈ ಮೂಲಕ ದರ್ಶನ್ ಅವರು ಪಕ್ಷಾತೀತ ಎಂದು ಗುರುತಿಸಲಾಗುತ್ತಿದೆ. ಆದರೆ ಇತ್ತೀಚೆಗೆ ಸಿಂಗ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಬಂದದಿದ್ದ ದರ್ಶನ್ ಅವರನ್ನು ಹಿರಿಯ ನಟಿ ತಾರಾ ಕಾಲೆಳೆದರು. ಇಡೀ ರಾಜ್ಯ ಬಿಜೆಪಿ, ಇಡೀ ದೇಶ ಬಿಜೆಪಿ, ಹಾಗೆಯೇ ದರ್ಶನ್ ಸಹ ಬಿಜೆಪಿ ಎಂದು ಕಿಚಾಯಿಸಿದರು.
click and follow Indiaherald WhatsApp channel