ನವದೆಹಲಿ: ಕೊರೋನಾ ವೈರಸ್ ದಾಳಿ ಹೆಚ್ಚಾಗುತ್ತಿದ್ದು ಈ ಗಾಗಲೇ ವಿಶ್ವದಾದ್ಯಂತ ೧ಲಕ್ಷದಷ್ಟು ಜನರನ್ನು ಬಲಿ ತೆಗೆದುಕೊಂಡಿದೆ. ಅದೇ ರೀತಿ ಭಾರತದಲ್ಲೂ ಕೂಡ ಸಾವಿನ ಸಂಖ್ಯೆ ನೂರರ ಗಡಿಯನ್ನು ದಾಟಿ ಬೆಳೆಯುತ್ತಿದೆ. ಈಗಾಗಲೇ ಭಾರತ 21 ದಿನಗಳ ಲಾಕ್ ಡೌನ್‌ಗೆ ಒಳಗಾಗಿತ್ತು ಇದರಿಂದ ಕೊರೋನಾ ವೈರಸ್ ಸೋಂಕು ಯಾವುದೇ ರೀತಿ ಕಡಿಮೆಯಾಗದ ಕಾರಣ ಇಂದು ರಾಜ್ಯದ ಎಲ್ಲಾ ಮುಖ್ಯಮಂತ್ರಿಗಳ ಜೊತೆ ಚರ್ಚೆಯನ್ನು ಚರ್ಚೆಯನ್ನು ನಡೆಸಲಾಗುತ್ತಿದೆ
ಭಾರತದಲ್ಲಿ ಮಹಾಮಾರಿ ಕೊರೋನ ವೈರಸ್ ಸೋಂಕು ಹರಡುವುದನ್ನು ತಡೆಯಲು ದೇಶಾದ್ಯಂತ ಎ.೧೪ರ ತನಕ ಜಾರಿಸಲಾಗಿರುವ ಲಾಕ್ ಡೌನ್ ನ್ನು ಮುಂದುವರಿಸುವ ವಿಚಾರಕ್ಕೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸುತ್ತಿದ್ದಾರೆ.
ಇದೇ ಮೊದಲ ಬಾರಿ ಮಾಸ್ಕ್ ಧರಿಸಿ ಸಭೆ ನಡೆಸುತ್ತಿರುವ ಪ್ರಧಾನಿ ಮೂರು ವಾರಗಳ ಲಾಕ್ಡೌನ್ ಮಂಗಳವಾರ ಕೊನೆಗೊಳಿಸಬೇಕೆ ಅಥವಾ ಮುಂದುವರಿಸಬೇಕೆ ಎಂಬ ಬಗ್ಗೆ ಅವರು ಮುಖ್ಯಮಂತ್ರಿಗಳಿಂದ ಅಭಿಪ್ರಾಯ ಪಡೆಯುತ್ತಿದ್ದಾರೆ
.
ಕೊರೋನ ಸೋಂಕು ಹರಡುವುದನ್ನು ತಡೆಗಟ್ಟಲು ರಾಜ್ಯಗಳು ಕೈಗೊಂಡ ಕ್ರಮಗಳ ಬಗ್ಗೆ ಪ್ರಧಾನಿ ಮೋದಿ ಮಾಹಿತಿ ಪಡೆದರು. ತಾನು ದಿನದ 24 ಗಂಟೆಯೂ ನಿಮಗೆ ಲಭ್ಯವಿರುತ್ತೇನೆ ಎಂದು ಪ್ರಧಾನಿ ಮೋದಿ ವಿವಿಧ ರಾಜ್ಯಗಳ ಸಿಎಂಗಳಿಗೆ ತಿಳಿಸಿದರು. ಸಂಜೆ ಮೂರು ಗಂಟೆಯ ತನಕ ಸಭೆ ಮುಂದುವರಿಯುವ ಸಾಧ್ಯತೆ ಇದೆ.
ಮೋದಿ ತೀರ್ಮಾನಕ್ಕೂ ಮುನ್ನ ಒಡಿಶಾ ,ಪಂಜಾಬ್ , ರಾಜಸ್ಥಾನ ಲಾಕ್ ಡೌನ್ ವಿಸ್ತರಣೆಯನ್ನು ಘೋಷಿಸಿವೆ. ಒಡಿಶಾ ಮತ್ತು ರಾಜಸ್ಥಾನದಲ್ಲಿ ಎಪ್ರಿಲ್ 30 ರ ತನಕ ಮತ್ತು ಪಂಜಾಬ್ ನಲ್ಲಿ ಮೇ 1 ರ ತನಕ ಲಾಕ್ ಡೌನ್ ಮುಂದುವರಿಯಲಿದೆ. ಲಾಕ್ ಡೌನ್ ವಿಸ್ತರಿಸಲು ಬಹುತೇಕ ರಾಜ್ಯಗಳ ಮುಖ್ಯಮಂತ್ರಿಗಳು ಪ್ರಧಾನಿ ಮೋದಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ
ಬಿಹಾರದ ಸರ್ಕಾರ ಕೇಂದ್ರಕ್ಕೆ ಬರೆದ ಪತ್ರದಲ್ಲಿ ಲಾಕ್ ಡೌನ್ ನ್ನು ವಿಸ್ತರಿಸಲು ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ; ಆದಾಗ್ಯೂ, ಪ್ರವಾಹದಿಂದ ಕಳೆದ ವರ್ಷ ತೊಂದರೆಗೊಳಗಾಗಿದ್ದ ಬಿಹಾರದಲ್ಲಿ ಪರಿಹಾರ ಕಾರ್ಯಗಳನ್ನು ಮುಂದುವರಿಸಲು ಲಾಕ್ ಡೌನ್ ಅಡ್ಡಿಯಾಗಿದೆ ಎಂದು ಮೂಲಗಳು ತಿಳಿಸಿವೆ. ಬಿಹಾರದಲ್ಲಿ ಕಳೆದ ವರ್ಷ ಕಾಣಿಸಿಕೊಂಡ ಭಾರಿ ಪ್ರವಾಹದಿಂದಾಗಿ ಅಪಾರ ನಷ್ಟವನ್ನುಂಟು ಮಾಡಿತ್ತು. ಬಿಹಾರದಲ್ಲಿ ಪರಿಹಾರ ಯೋಜನೆಗಳು ಮುಂದುವರಿದಿದೆ.
ಇದೇ ವೇಳೆ ಕೇಂದ್ರ ಸರಕಾರ ಮೀನುಗಾರಿಕೆ ಮತ್ತು ಕೃಷಿ ಚಟುವಟಿಕೆಗಳಿಗೆ ಲಾಕ್ ಡೌನ್ ನಿಂದ ವಿನಾಯಿತಿ ನೀಡಿದೆ.
click and follow Indiaherald WhatsApp channel