ಇಡೀ ವಿಶ್ವವೇ ಕೊರೋನಾ ಸೋಂಕಿನಿಂದ ನರಳುತ್ತಿರುವುದರಿಂದ ಕೊರೋನಾ ಔಷಧಿಗೆ ದೇಶದಾಧ್ಯಂತ ಬೇಡಿಕೆ ಹೆಚ್ಚಿದೆ. ಅದರಂತೆ ಜಗತ್ತಿನ ಅನೇಕ ರಾಷ್ಟ್ರಗಳು ಕೊರೋನಾ ಔಷಧಿಯನ್ನು ಸಂಶೋಧಸುತ್ತಿವೆ. ಇದರ ಜೊತೆಗೆ ರಷ್ಯಾದಲ್ಲಿ ಕೊರೋನ ವೈರಸ್ ಗೆ ಔಷಧಿಯನ್ನು ತಯಾರಿಸಲಾಗಿದೆ ಎಂದು ಹೇಳಲಾಗುತ್ತಿದ್ದರೂ ಕೂಡ ಮಾರುಕಟ್ಟೆಗೆ ಬಂದಿಲ್ಲ. ಇದರ ಬೆನ್ನಲ್ಲೇ ಭಾರತದಲ್ಲೂ ಕೂಡ ಸಂಶೋಧಿಸುತ್ತಿರುವ ಔಷಧಿ ಅಂತಿಮ ಹಂತವನ್ನು ತಲುಪಿ ಈ ವರ್ಷವೇ ಬಿಡುಗಡೆಯಾಗುವ ನಿರೀಕ್ಷೆಯೂ ಇದೆ.
ಹೌದು ಜಾಗತಿಕವಾಗಿ ಕೋವಿಡ್ ಲಸಿಕೆ ಪ್ರಯೋಗ ಪ್ರಕ್ರಿಯೆಗಳು ತ್ವರಿತವಾಗಿ ಸಾಗುತ್ತಿದ್ದು, ಭಾರತದ ಮೊದಲ ಕೋವಿಡ್ ಲಸಿಕೆ ಕೊವ್ಯಾಕ್ಸಿನ್ ಪ್ರಸಕ್ತ ವರ್ಷಾಂತ್ಯವೇ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಹೇಳಿದ್ದಾರೆ.
ಶುಕ್ರವಾರ ಮಾತನಾಡಿದ ಅವರು, ಹೈದರಾಬಾದ್ ಮೂಲದ ಭಾರತ್ ಬಯೋ ಟೆಕ್ ಅಭಿವೃದ್ಧಿಪಡಿಸಿರುವ ಕೊವ್ಯಾ ಕ್ಸಿನ್ ಲಸಿಕೆಯ ಮಾನವನ ಮೇಲಿನ ಪ್ರಯೋಗ ಆರಂಭವಾಗಿ 2 ವಾರಗಳು ಕಳೆದಿವೆ. ವರ್ಷಾಂತ್ಯದಲ್ಲಿ ಇದು ಬಳಕೆಗೆ ಸಿಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಕೂಡ ತನ್ನ ಲಸಿಕೆಯನ್ನು ಈ ತಿಂಗಳಿಂದಲೇ ಮಾನವನ ಮೇಲೆ ಪ್ರಯೋಗಿಸಲಿದೆ. ಈ ಸಂಸ್ಥೆ ಕೂಡ 2020ರ ಅಂತ್ಯದೊಳಗೆ ಲಸಿಕೆ ಹೊರತರಲು ಶ್ರಮಿಸುತ್ತಿದೆ ಎಂದೂ ಹರ್ಷವರ್ಧನ್ ಹೇಳಿದ್ದಾರೆ.
ಭಾರತ್ ಬಯೋಟೆಕ್ ಸಂಸ್ಥೆಯು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಸಹಭಾಗಿತ್ವದಲ್ಲೇ ಲಸಿಕೆಯ ಪ್ರಯೋಗ ನಡೆಸಿದ್ದು, ಅದು ಯಶಸ್ವಿಯಾದರೆ ಸರಕಾರಕ್ಕೆ ಅಗ್ಗದ ಮತ್ತು ಸಬ್ಸಿಡಿ ದರದಲ್ಲಿ ಲಸಿಕೆಯನ್ನು ಒದಗಿಸಲಿದೆ. ಇದೇ ರೀತಿ, ಬೇರೆ ಸಂಸ್ಥೆಗಳೊಂದಿಗೆ ಸರಕಾರ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.
ಹೊಸ ಮಾದರಿ ಪರೀಕ್ಷೆಗೆ ಅನುಮತಿ
ಹೊಸದಿಲ್ಲಿ: ಕೊರೊನಾ ಸೋಂಕು ತಪಾಸಣೆಗೆ ಇದುವರೆಗೆ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಸಂಗ್ರ ಹಿಸಲಾಗುತ್ತಿತ್ತು. ಆದರೆ, ಇನ್ನು ಮುಂದೆ ಬಾಯಿ ಮುಕ್ಕಳಿಸಿದ ನೀರನ್ನು ಪರೀಕ್ಷೆಗೆ ಬಳಸಿಕೊಳ್ಳಲು ಭಾರತೀಯ ವೈದ್ಯಕೀಯ ಸಂಶೋ ಧನಾ ಮಂಡಳಿ (ಐಸಿಎಂಆರ್) ನಿರ್ಧರಿಸಿದೆ.
ಹೊಸದಿಲ್ಲಿಯ ಏಮ್ಸ್ ಆಸ್ಪತ್ರೆ ಯಲ್ಲಿ 50 ಕೊರೊನಾ ಶಂಕಿತರ ಗಂಟಲು ದ್ರವವನ್ನು ಪರೀಕ್ಷೆಗೆ ಸಂಗ್ರಹಿ ಸ ಲಾಗಿತ್ತು. ಈ ಪ್ರಕ್ರಿಯೆ ಯಿಂದ ಹಲವರಲ್ಲಿ ಕೆಮ್ಮು, ಗಂಟಲು ಬೇನೆ ತೀವ್ರಗೊಂಡಿತ್ತು. ಅಲ್ಲದೆ, ದ್ರವಸಂಗ್ರ ಹಿಸಿದ ಸಿಬ್ಬಂದಿ ಯಲ್ಲೂ ಸೋಂಕು ಕಾಣಿಸಿ ಕೊಂಡಿತ್ತು. ಈ ಹಿನ್ನೆಲೆಯಲ್ಲಿ ಐಸಿಎಂಆರ್, ಬಾಯಿ ಮುಕ್ಕಳಿಸಿದ ನೀರಿನ ಪರೀಕ್ಷೆಗೆ ಅನುಮತಿ ಕಲ್ಪಿಸಿದೆ.
click and follow Indiaherald WhatsApp channel