ರಾಣಿ ಲಕ್ಷ್ಮೀಬಾಯಿ ಪಾತ್ರದಲ್ಲಿ ಅನುಷ್ಕಾ ಶೆಟ್ಟಿ ಅಭಿನಯಿಸಲಿದ್ದಾರೆ. ಈ ಹಿಂದೆ ಕಂಗನಾ ರನೋಟ್ ರಾಣಿ ಲಕ್ಷ್ಮೀ ಬಾಯಿ ಪಾತ್ರ ಮಾಡಿದ್ದರು. ಇದೀಗ ಅನುಷ್ಕಾ ಸರದಿ. ಹೌದು, ಚಿರಂಜೀವಿ ಮುಖ್ಯಪಾತ್ರದಲ್ಲಿ ನಟಿಸಿರುವ ಸೈರಾ ನರಸಿಂಹ ರೆಡ್ಡಿ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ಅವರು ಲಕ್ಷ್ಮೀಬಾಯಿ ಪಾತ್ರಕ್ಕೆ ಜೀವ ತುಂಬಲಿದ್ದಾರೆ.
ಸೈರಾ ನರಸಿಂಹ ರೆಡ್ಡಿ ಚಿತ್ರ ಸುರೆಂದರ್ ರೆಡ್ಡಿ ಅವರ ನಿರ್ದೇಶನ ಇದೆ. ಅನುಷ್ಕಾ ಶೆಟ್ಟಿ ಪಾತ್ರದ ಬಗ್ಗೆ ಈಗ ಪಾತ್ರದ ಬಗ್ಗೆ ಇದೀಗ ಅಂತಿಮ ಸುದ್ದಿ ಹೊರಬಿದ್ದಿದೆ. ಝಾನ್ಸಿಯ ರಾಣಿ ಲಕ್ಷ್ಮೀಬಾಯಿ ಪಾತ್ರವನ್ನು ಅನುಷ್ಕಾ ಶೆಟ್ಟಿಗೆ ನೀಡಲಾಗಿದೆ. ಇದೀಗ ಅನುಷ್ಕಾ ಚಿತ್ರೀಕರಣವೂ ಮುಗಿದಿದೆ ಎನ್ನಲಾಗುತ್ತಿದೆ.
ಚಿತ್ರತಂಡ ಯಾವುದೇ ಹಿಂದೆ ಮುಂದು ನೋಡದೇ ಅನುಷ್ಕಾ ಅವರನ್ನು ಆಯ್ಕೆ ಮಾಡಿದೆಯಂತೆ. ಹೌದು ಯಾಕಂದರೆ, ಈ ಪಾತ್ರ ತುಂಬ ಪ್ರಭಾವಶಾಲಿ ಪಾತ್ರ. ಹೀಗಾಗಿ ಇದನ್ನು ಅನುಷ್ಕಾ ಶೆಟ್ಟಿ ಚೆನ್ನಾಗಿ ನಿಭಾಯಿಸುತ್ತಾರೆ ಎನ್ನುವ ನಂಬಿಕೆ ಹಾಗೂ ಅನುಷ್ಕಾ ಶೆಟ್ಟಿಗಿರುವ ಮಾರುಕಟ್ಟೆ ಇಮೇಜ್.
click and follow Indiaherald WhatsApp channel