ಆ ದಿನಗಳು ಖ್ಯಾತಿಯ ಚೇತನ್ ಜೊತೆಗೆ ಸೂರ್ಯಕಾಂತಿ ಚಿತ್ರದಲ್ಲಿ ನಾಯಕನಟಿಯಾಗಿ ಅಭಿನಯಿಸಿದ್ದ ರೆಜಿನಾ ಕಸ್ಸಂದ್ರ ಅವರು ಇದೀಗ ಮತ್ತೊಮ್ಮೆ ಸುದ್ದಿ ಆಗಿದ್ದಾರೆ. ಈ ಹಿಂದೆ 'ನಾನು ಚಿಕ್ಕವಯಸ್ಸಿನಲ್ಲೇ ಬ್ಲೂ ಫಿಲ್ಮಂಗಳನ್ನು ನೋಡಿದ್ದೇ' ಎಂದು ಹೇಳುವ ಮೂಲಕ ಚರ್ಚೆಗೆ ಗ್ರಾಸವಾಗಿದ್ದರು.

 

ಆದರೆ ಇದೀಗ ರೆಜಿನಾ ಅವರು ಮತ್ತೊಂದು ಬೋಲ್ಡ್ ಹೇಳಿಕೆ ನೀಡಿದ್ದಾರೆ. ಹೌದು, ಸದ್ಯಕ್ಕೆ ತೆಲುಗು ಮತ್ತು ತಮಿಳಿನಲ್ಲಿ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ರೆಜಿನಾ ನಟಿಸುತ್ತಿದ್ದಾರೆ. ಆದರೆ ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ನನ್ನ ಕೆಲ ಸ್ನೇಹಿತರು ಸಲಿಂಗ ಕಾಮಿಗಳಾಗಿದ್ದರು ಎಂದು ಹೇಳುವ ಮೂಲಕ ಸುದ್ದಿ ಕೇಂದ್ರಕ್ಕೆ ಬಂದಿದ್ದಾರೆ. 

 

ರೆಜಿನಾ ಬಾಲಿವುಡ್ ನ ಏಕ್ ಲಡ್ಕಿ ಕೊ ದೇಖಾ ತೋ ಐಸಾ ಲಗಾ ಚಿತ್ರದಲ್ಲಿ ನಟಿಸಿದ್ದಾರೆ. ಸಲಿಂಗಕಾಮಿ ಸ್ತ್ರೀ ಪಾತ್ರದಲ್ಲಿ ಅವರು ನಟಿಸಿದ್ದಾರೆ. ಈ ಚಿತ್ರ ನೋಡಿದ ನಂತರ ರೆಜಿನಾ ಅವರ ಕೆಲವು ಸ್ನೇಹಿತರು ರೆಜಿನಾ ಅವರ ಸಲಿಂಗಕಾಮಿ ಪಾತ್ರವನ್ನು ಮೆಚ್ಚಿಕೊಂಡಿದ್ದರು. ನಂತರವೇ ಅವರು ಸಲಿಂಗಕಾಮಿಗಳು ಎಂದು ರೆಜಿನಾಗೆ ಗೊತ್ತಾಯ್ತಂತೆ.

 


మరింత సమాచారం తెలుసుకోండి: