ಶಿರಾದ ಶಾಸಕರಾಗಿದ್ದ ಸತ್ಯನಾರಾಯಣ ಮರಣದ ನಂತರ ಶಿರಾಕ್ಷೇತ್ರದಲ್ಲಿ ಚುನಾವಣೆಯ ಕಾವು ಹೆಚ್ಚಾಗಿದೆ. ಜೆಡಿಎಸ್ ತನ್ನ ಸ್ಥಾನವನ್ನು ಉಳಿಸಿಕೊಳ್ಳುವುದಕ್ಕಾಗಿ ಈ ಚುನಾವಣೆ ಪ್ರತಿಷ್ಟೆಯ ಕಣವಾದರೆ  ಶಿರಾದಲ್ಲಿ ಎಂದೂ ಅರಳದ  ಬಿಜೆಪಿ ಈ ಬಾರಿ ಗೆದ್ದು ಬೀಗಲೇ ಬೇಕು ಎಂದು ಚುನಾವಣೆಗಾಗಿ ಸಾಕಷ್ಟು ಕಸರತ್ತನ್ನು ನಡೆಸುತ್ತಿದೆ



 


 

ಹೌದು ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗಾಗಿ ಎಂಟು ಉಸ್ತುವಾರಿಗಳನ್ನು ನಿಯೋಜಿಸುವ ಮೂಲಕ ಬಿಜೆಪಿ, ಹೇಗಾದರೂ ಮಾಡಿ ಉಪ ಚುನಾವಣೆಯಲ್ಲಿ ಗೆಲ್ಲಲಬೇಕೆಂಬ ಪಣ ತೊಟ್ಟಿದೆ. ಶಿರಾದಲ್ಲಿ ಎಂದಿಗೂ ಜಯಗಳಿಸದ ಪಕ್ಷ, ಶಿರಾದಲ್ಲಿ ಗೆಲ್ಲುವುದು ಮಾತ್ರವಲ್ಲದೆ, ಕ್ಷೇತ್ರವನ್ನು ಭದ್ರಪಡಿಸಿಕೊಳ್ಳುವ ಮೂಲಕ ತನ್ನ ವಿಸ್ತರಣೆಯನ್ನು ಮುಂದುವರೆಸಬೇಕೆಂದು ಬಯಸಿದೆ. ಯಾವಾಗಲೂ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವಣ ಅಭ್ಯರ್ಥಿಗಳನ್ನು ನೋಡಿ ತನ್ನ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಿದೆ.








ಜಾತಿ, ಪಕ್ಷದ ಕಾರ್ಯಕರ್ತರ ಒಲವು ಮತ್ತಿತರ ಸಮತೋಲಿತ ಕಾರ್ಯತಂತ್ರಗಳ ಮೂಲಕ ಇಬ್ಬರು ಉಪ ಮುಖ್ಯಮಂತ್ರಿಗಳು ಸೇರಿದಂತೆ ಎಂಟು ಉಸ್ತುವಾರಿಗಳನ್ನು ಬಹಳ ಎಚ್ಚರಿಕೆಯಿಂದ ಆಯ್ಕೆ ಮಾಡಲಾಗಿದೆ.ಪರಿಶಿಷ್ಟ ಜಾತಿಗೆ ಸೇರಿದ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್, ಸಂಸದ ಎ. ನಾರಾಯಣಸ್ವಾಮಿ, ಶಾಸಕಿ ಪೂರ್ಣಿಮಾ ಶ್ರೀನಿವಾಸ್, ತಿಪ್ಪೇಸ್ವಾಮಿ, ಹಿಂದುಳಿದ ಸಮುದಾಯದ ಮುಖಂಡ ಸಂಸದ ಪಿ. ಸಿ. ಮೋಹನ್, ಒಕ್ಕಲಿಗ ಮುಖಂಡರಾದ ಉಪ ಮುಖ್ಯಮಂತ್ರಿ ಡಾ. ಸಿ. ಎನ್. ಅಶ್ವತ್ ನಾರಾಯಣ, ಲಿಂಗಾಯಿತ ಮುಖವಾಗಿ ಬಿ. ವೈ.ವಿಜಯೇಂದ್ರ ಅವರನ್ನು ಉಸ್ತುವಾರಿಯಾಗಿ ನೇಮಕ ಮಾಡುವ ಮೂಲಕ ಒಕ್ಕಲಿಗ ಮತ್ತು ಗೊಲ್ಲ ಸಮುದಾಯ ಹೆಚ್ಚಿನ ಸಂಖ್ಯೆಯಿರುವ ಕ್ಷೇತ್ರದಲ್ಲಿ ಮತದಾರರನ್ನು ಸೆಳೆಯಲು ಕಾರ್ಯತಂತ್ರ ರೂಪಿಸಲಾಗಿದೆ.







ಕೆ.ಆರ್. ಪೇಟೆ ಕ್ಷೇತ್ರದಲ್ಲಿ ಮಾಡಿದಂತೆ ಮನೆ- ಮನೆಗೆ ಹೋಗುವುದು, ವಾರ್ಡ್ ಮಟ್ಟ, ಕಾರ್ನರ್ ಮಟ್ಟ, ಬ್ಲಾಕ್ ಮಟ್ಟದ ಮೂಲಕ ಚುನಾವಣೆ ಎದುರಿಸಲು ಬಿಜೆಪಿ ರಣತಂತ್ರ ರೂಪಿಸಿದೆ. ಆದರೆ, ಕೆ. ಆರ್. ಪೇಟೆಯಂತೆ ಶಿರಾದಲ್ಲಿ ಸ್ಥಳೀಯ ಕಾರ್ಯಕರ್ತರಲ್ಲಿ ಯಾವುದೇ ತೊಂದರೆ ಎದುರಾಗುವುದಿಲ್ಲ, ಶಿರಾದ ಸುತ್ತಮುತ್ತ ನಾಲ್ವರು ಶಾಸಕರಿದ್ದು, ನಿರಂತರವಾಗಿ ತನ್ನ ಮುಖವನ್ನು ಹೆಚ್ಚಿಸಿಕೊಳ್ಳುತ್ತಿದೆ.






ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯ ನಾಲ್ವರು ಶಾಸಕರಿದ್ದಾರೆ . ಕಾಂಗ್ರೆಸ್ ಮೂರು ಹಾಗೂ ಜೆಡಿಎಸ್ ಮೂರು ಸ್ಥಾನಗಳನ್ನು ಹೊಂದಿದೆ. ಅಭಿವೃದ್ಧಿಯ ಭರವಸೆಯೊಂದಿಗೆ ಬಿಜೆಪಿ ಪ್ರಚಾರ ನಡೆಸುತ್ತಿದ್ದರೆ ಹೊಸ ಮುಖಗಳೊಂದಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪ್ರಚಾರ ನಡೆಸುತ್ತಿವೆ.

మరింత సమాచారం తెలుసుకోండి: