ಕೊರೋನಾ ವೈರಸ್ ಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಕೊರೋನಾ ಟೆಸ್ಟ್ ಮಾಡಿಸಲಾಗುತ್ತಿದೆ, ಆದರೆ ಖಾಸಗೀ ಲ್ಯಾಬ್ ಗಳಲ್ಲಿ ಸಾವಿರಾರು ರೂಪಾಯಿಗಳನ್ನು ತೆತ್ತು ಕೊರೋನಾ ಟೆಸ್ಟ್ ಗೆ ಮಾಡಿಸಬೇಕಿತ್ತು. ಈ ಕುರಿತಾಗಿ ಸಾಕಷ್ಟು ದೂರುಗಳು ಸಲ್ಲಿಕೆಯಾಗಿದ್ದರೂ ಕೂಡ ಯಾವುದೇ ಪ್ರಯೋಜವಾಗಿರಲಿಲ್ಲ, ಆದರೆ ಈಗ ಸರ್ಕಾರ ಸ್ಪಲ್ಪ ಪ್ರಮಾಣದಲ್ಲಿ ಖಾಸಗೀ ಲ್ಯಾಬ್ ಗಳ ಶುಲ್ಕವನ್ನು ಕಡಿತಗೊಳಿಸಿದೆ.
ಹೌದು ರಾಜ್ಯ ಸರ್ಕಾರ ಈ ಮೊದಲು ಕೊರೋನಾ ಸೋಂಕಿನ ಪರೀಕ್ಷೆಗಾಗಿ ಖಾಸಗಿ ಲ್ಯಾಬ್ ಗಳಿಗೆ ರೂ.2000 ಹಾಗೂ ರೂ.3000 ದರ ನಿಗದಿ ಪಡಿಸಿತ್ತು. ಈ ಬಳಿಕ ಮತ್ತೆ ದರದಲ್ಲಿ ಕಡಿತಗೊಳಿಸಿ ರೂ.1,500 ಹಾಗೂ ರೂ.2,500ಕ್ಕೆ ಇಳಿಕೆ ಮಾಡಿತ್ತು. ಇದೀಗ ಈ ದರದಲ್ಲಿ ಮತ್ತೆ ಕಡಿತ ಮಾಡಿದ್ದು, ರೂ.1,200 ಹಾಗೂ ರೂ.1,600ಕ್ಕೆ ಇಳಿಕೆ ಮಾಡಿದೆ. ಈ ಮೂಲಕ ಖಾಸಗಿ ಲ್ಯಾಬ್ ಗಳಲ್ಲಿ ಕೊರೋನಾ ಪರೀಕ್ಷೆ ಮಾಡಿಸುವ ಜನರಿಗೆ ಗುಡ್ ನ್ಯೂಸ್ ನೀಡಿದೆ.
ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವಂತೆಯೇ, ರಾಜ್ಯದಲ್ಲಿ ಕೊರೋನಾ ಸೋಂಕು ಪತ್ತೆ ಕಾರ್ಯವನ್ನು ರಾಜ್ಯ ಸರ್ಕಾರ ಚುರುಕುಗೊಳಿಸಿದೆ. ಅದರಲ್ಲೂ ಆರ್ ಟಿ ಪಿಸಿಆರ್ ಪರೀಕ್ಷೆಯ ಮೂಲಕ ಸೋಂಕು ಪತ್ತೆ ಹಚ್ಚುವ ಸಂಖ್ಯೆಯನ್ನು ಹೆಚ್ಚಿಸಲು ಸೂಚಿಸಿದೆ. ಇದರ ಮಧ್ಯೆ ಖಾಸಗಿ ಲ್ಯಾಬ್ ಗಳಲ್ಲಿಯೂ ಸೋಂಕು ಪತ್ತೆ ಪರೀಕ್ಷೆಯನ್ನು ಸುಲಭ, ತ್ವರಿತಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಇದೀಗ ಕ್ರಮ ಕೈಗೊಂಡಿದೆ. ಇದಕ್ಕಾಗಿಯೇ ಕೊರೋನಾ ಲ್ಯಾಬ್ ಪರೀಕ್ಷೆಯ ದರದಲ್ಲಿ ಇಳಿಕೆ ಮಾಡಿದೆ.
ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಆದೇಶ ಹೊರಡಿಸಿದ್ದು, ಖಾಸಗಿ ಲ್ಯಾಬ್ ಗಳ ಪರೀಕ್ಷೆಯ ದರವನ್ನು ದಿನಾಂಕ 24-07-2020ರಂದು ಆರ್ ಟಿ ಪಿಸಿಆರ್ ರೂ.2000 ಹಾಗೂ ಖಾಸಗೀ ಲ್ಯಾಬ್ ನಲ್ಲಿ ಕೊರೋನಾ ಪರೀಕ್ಷೆಯ ದರವನ್ನು ರೂ.3000 ನಿಗಧಿ ಪಡಿಸಲಾಗಿತ್ತು.
ಮುಂದುವರೆದು ದಿನಾಂಕ 17-08-2020ರಂದು ಈ ದರದಲ್ಲಿ ಮತ್ತೆ ಕಡಿತಗೊಳಿಸಲಾಗಿತ್ತು. ರೂ.1,500 ಹಾಗೂ ರೂ.2,500 ನಿಗದಿ ಪಡಿಸಲಾಗಿತ್ತು. ಇದೀಗ ಈ ದರದಲ್ಲಿ ಮತ್ತೆ ಕಡಿತಗೊಳಿಸಲಾಗಿದ್ದು, ಆರ್ ಟಿ ಪಿ ಸಿ ಆರ್ ಮೂಲಕ ಪರೀಕ್ಷೆ ಮಾಡಿ, ಸರ್ಕಾರಿ ಆಸ್ಪತ್ರೆಗೆ ಕಳಿಸಲು ರೂ.1,200 ಹಾಗೂ ಖಾಸಗಿ ಆಸ್ಪತ್ರೆಯಲ್ಲಿಯೇ ಪರೀಕ್ಷೆ ನಡೆಸಲು ರೂ.1,600 ದರ ನಿಗಧಿ ಮಾಡಲಾಗಿದೆ ಎಂಬುದಾಗಿ ಆದೇಶಿಸಿದ್ದಾರೆ. ಹೀಗಾಗಿ ಇದೀಗ ಕೊರೋನಾ ಸೋಂಕು ಪರೀಕ್ಷೆ ಲ್ಯಾಬ್ ನಲ್ಲಿ ಮತ್ತಷ್ಟು ಕಡಿಮೆ ದರದಲ್ಲಿ ಮಾಡಿಸಬಹುದಾಗಿದೆ.
click and follow Indiaherald WhatsApp channel