ಪೈಲ್ವಾನ್ ಈ ಹೆಸರಿನ ಮೂಲಕ ಮತ್ತೆ ಸುದೀಪ್ ಅವರು ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಬಾಲಿವುಡ್ ನಟ ಸುನೀಲ್ ಶೆಟ್ಟಿ ಕೂಡ ಇದ್ದಾರೆ. ಹೈದರಾಬಾದ್ ನಲ್ಲಂತೂ ಸುದೀಪ್ ಅವರ ಪೈಲ್ವಾನ್ ಪೋಸ್ಟರ್‌ಗಳೇ ರಾರಾಜಿಸುತ್ತಿವೆ. ಹೈದರಾಬಾದ್ ನಲ್ಲಿರೋ ಕನ್ನಡಿಗರಿಗೆ ಇದೊಂಥರ ಖುಷಿಯ ವಿಚಾರ ಎಂದರೆ ತಪ್ಪಿಲ್ಲ.


ಹೌದು ಯಾಕೆಂದರೆ, ಸುದೀಪ್ ಅಂದರೆ ಭಾಷೆ ಮತ್ತು ರಾಜ್ಯವನ್ನು ಮೀರಿ ಬೆಳೆದಿರುವ ನಟ. ಕೇವಲ ಕರ್ನಾಟಕದಲ್ಲಿ ಅಷ್ಟೇ ಅಲ್ಲದೇ, ಬೇರೇ ಬೇರೆ ಭಾಷೆಯಲ್ಲೂ ಅನೇಕ ಅಭಿಮಾನಿಗಳನ್ನು ಸುದೀಪ್ ಅವರು ಸಂಪಾದನೆ ಮಾಡಿದ್ದಾರೆ. ಹೀಗಾಗಿ ಸುದೀಪ್ ಅವರ ಪೈಲ್ವಾನ್ ಸಿನಿಮಾ ಒಟಟ್ಟು ಐದು ಭಾಷೆಯಲ್ಲಿ ರಿಲೀಸ್ ಆಗಿದೆ. ಇದರಲ್ಲಿ ಕನ್ನಡದಲ್ಲಿ ಪೈಲ್ವಾನ್ ಅತಿಹೆಚ್ಚು ಕಲೆಕ್ಷನ್ ಮಾಡಿದ್ದಾನೆ.


ಹೌದು ಪೈಲ್ವಾನ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಮೊದಲ ದಿನ ಒಟ್ಟಾರೆ 18 ಕೋಟಿ ಗಳಿಕೆ ಮಾಡಿತ್ತು. ಅದರಲ್ಲಿ ಕನ್ನಡದಲ್ಲಿಯೇ 10 ಬಾಚಿಕೊಂಡಿತ್ತು. ಆದರೆ ಎರಡನೇ ದಿನ ಇದರ ಕಲೆಕ್ಷನ್ ಕೊಂಚ ಇಳಿಕೆ ಕಂಡಿದೆ. ಚಿತ್ರಕ್ಕೆ ಪಾಸಿಟಿವ್ ಓಪಿನಿಯನ್ ಇದೆ . ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಆದರೂ ಸಿನಿಮಾ ಗಳಿಕೆಯಲ್ಲಿ ಎರಡನೇ ದಿನ ಇಳಿಕೆ ಕಂಡಿದೆ. 


ಹೌದು, ಮೊದಲ ದಿನಕ್ಕೆ ಹೋಲಿಕೆ ಮಾಡಿದರೆ, ಪೈಲ್ವಾನ್ ಚಿತ್ರವು ಎರಡನೇ ದಿನದ ಕೆಲೆಕ್ಷನ್ ನಲ್ಲಿ ಕೊಂಚ ಇಳಿಕೆ ಕಂಡಿದೆ. ಆದರೆ, ಹಾಗೆಂದ ಮಾತ್ರಕ್ಕೆ ಸಿನಿಮಾ ಚೆನ್ನಾಗಿಲ್ಲ ಎಂಬ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ 
 ಎನ್ನುತ್ತಾರೆ ಪ್ರೇಕ್ಷಕರು. ಸಹಜವಾಗಿ ಮೊದಲ ದಿನ ಕ್ರೇಜ್ ಇರುತ್ತದೆ. ಮೊದಲ ದಿನವೇ ಸಿನಿಮಾ ನೋಡಬೇಕು ಎನ್ನುವ ಕಾರಣದಿಂದ ಕಲೆಕ್ಷನ್ ಜಾಸ್ತಿ ಆಗೋ ಸಾಧ್ಯತೆ ಇರುತ್ತದೆ. ಇದೇ ಕ್ರೇಜ ದಿನಗಳೆದಂತೆ ಕಡಿಮೆ ಆಗುತ್ತ ಹೋಗುತ್ತದೆ. ಹೀಗಾಗಿ 'ಪೈಲ್ವಾನ್' ಚಿತ್ರದ ಕಲೆಕ್ಷನ್ ಇಳಿದಿರಬಹುದು.


ಕನ್ನಡದಲ್ಲಿ ಮೊದಲ ದಿನ 10 ಕೋಟಿ ಗಳಿಸಿದ್ದ ಪೈಲ್ವಾನ್ ಎರಡನೇ ದಿನ 9 ಕೋಟಿ ಗಳಿಸಿದೆ. ಹೀಗೆ ಬಿಡುಗಡೆಯಾದ ಎರಡನೇ ದಿನ ಚಿತ್ರದ ಕಲೆಕ್ಷನ್ ನಲ್ಲಿ 1 ಕೋಟಿ ಕಡಿಮೆ ಆಗಿದೆ. ಅಲ್ಲದೇ ಪೈರಸಿಯ ಕಾಟವೂ ಪೈಲ್ವಾನ್‌ಗೆ ಕಾಡುತ್ತಿದೆ. ಆದರೆ ಇಂದು ಮತ್ತು ನಾಳೆ ವೀಕೆಂಡ್ ಇರುವುದಿರಿಂದ ಮತ್ತೆ ಕಲೆಕ್ಷನ್ ಹೆಚ್ಚಾಗಬಹುದು ಎನ್ನುವುದು ಸಿನಿ ಪಂಡಿತರ ಲೆಕ್ಕಾಚಾರ.


మరింత సమాచారం తెలుసుకోండి: