ಚಿತ್ರ ಬಿಡುಗಡೆಗೂ ಮುನ್ನ ಸಿನಿಮಾದ ಟೈಟಲ್ ಲಾಂಚ್ ಮಾಡೋದು, ಟೀಸರ್ ಹಾಗೂ ಟ್ರೇಲರ್ ಗಳನ್ನು ಬಿಡುಗಡೆ ಮಾಡೋದು ಇವೆಲ್ಲ ಕಾಮನ್. ಹೀಗೆ ಪ್ರೇಕ್ಷಕರನ್ನು ಸೆಳೆಯೋಕೆ ಮಾಡೋ ತಂತ್ರಗಳಿವು. ಆದರೆ 'ಬ್ರಹ್ಮಚಾರಿ' ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದಾನೆ.
(ಅದಿತಿ ಮತ್ತು ಸತೀಶ್ ನೀನಾಸಂ)
ಹೌದು, ಸತೀಶ್ ನೀನಾಸಂ ಅಭಿನಯದ ಬ್ರಹ್ಮಚಾರಿ ಚೆನ್ನುವ ಚಿತ್ರತಂಡ ಟೀಸರ್ ಗೆ ಟೀಸರ್ ಬಿಡೋಕೆ ಮುಂದಾಗಿದೆ. ಏನಪ್ಪ ಇದು ಹೊಸ ವಿಷ್ಯ ಅಂದ್ಕೊಂಡ್ರಾ? ಇದಕ್ಕೆ ಕಾರಣವಿದೆ ನೋಡಿ.
ಇತ್ತೀಚೆಗಷ್ಟೇ ಬ್ರಹ್ಮಚಾರಿ ಚಿತ್ರದ ಫರ್ಸ್ಟ್ ಲುಕ್ ಬಿಡುಗಡೆ ಆಗಿತ್ತು. ಅದಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತುಮ ಇದೀಗ ಹೀಗೆ ವಿಭಿನ್ನವಾಗಿ ಪ್ರೇಕ್ಷಕರ ಗಮನ ಸೆಳೆಯೋಕೆ ಸತೀಶ್ ನೀನಾಸಂ ಮುಂದಾಗಿದ್ದಾರೆ.
(ಅದಿತಿ ಮತ್ತು ಸತೀಶ್ ನೀನಾಸಂ)
ಜೂನ್ 20 ಸತೀಶ್ ಅವರ ಜನ್ಮ ದಿನ. ಈ ದಿನದಂದು ಚಿತ್ರತಂಡ ಟೀಸರ್ ಬಿಡುಗಡೆ ಮಾಡುತ್ತಿದೆ. ಆದರೆ ಅದರ ಪೂರ್ವಭಾವಿಯಾಗಿ ಟೀಸರ್ ಗೆ ಟೀಸರ್ ಅನ್ನು ಜೂನ್ 10 ರಂದು ಬಿಡುಗಡೆ ಮಾಡಲಾಗುತ್ತಿದೆ. ಚಂದ್ರಮೋಹನ್ ನಿರ್ದೇಶನ ಮಾಡುತ್ತಿರುವ ಈ ಚಿತ್ರದಲ್ಲಿ ಅದಿತಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
click and follow Indiaherald WhatsApp channel